ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯುವ ಪೀಳಿಗೆ ಸಂಸ್ಕಾರಯುತರಾಗಲಿ: ಶ್ರೀ ವಿಶ್ವಪ್ರಸನ್ನ ತೀರ್ಥರು

Published 13 ಜೂನ್ 2024, 14:08 IST
Last Updated 13 ಜೂನ್ 2024, 14:08 IST
ಅಕ್ಷರ ಗಾತ್ರ

ರಾಯಚೂರು : ‘ದೇಶದ ಯುವ ಪೀಳಿಗೆ ಸಂಸ್ಕಾರಯುತರಾಗಲಿ‘ ಎಂದು ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಹೇಳಿದರು.

ನಗರದ ಕಾಡ್ಲೂರು ದೇಸಾಯಿ ನಿವಾಸದಲ್ಲಿ ಪಾದಪೂಜೆ ಸ್ವೀಕರಿಸಿ ಅವರು ನಿವಾಸದ ಆವರಣದಲ್ಲಿರುವ ಕಿರು ಗ್ರಂಥಾಲಯ ವೀಕ್ಷಿಸಿದ ನಂತರ ಮಾತನಾಡಿದರು.

‘ಗ್ರಂಥಾಲಯದಲ್ಲಿರುವ ಪುಸ್ತಕಗಳು ಅನೇಕ ಪುಣ್ಯ ಪುರುಷರು, ದಾರ್ಶನೀಕರು, ಸ್ವಾತಂತ್ರ್ಯ ಹೋರಾಟಗಾರರು ಇನ್ನು ಅನೇಕ ಸಾಧಕರ ಪುಸ್ತಕಗಳಿವೆ ಅವುಗಳನ್ನು ಮಕ್ಕಳು ಓದಿ ಸಂಸ್ಕಾರಯುತರಾಗಬೇಕು‘ ಎಂದು ನುಡಿದರು.

ಜಯ ಕುಮಾರ್ ದೇಸಾಯಿ, ವಿಜಯಕುಮಾರ ದೇಸಾಯಿ, ಪ್ರಸನ್ನ ಆಲಂಪಲ್ಲಿ, ಸಮೀರಾಚಾರ್, ರಂಗಾಚಾರ ಜೋಷಿ,ಪವನ್ ಆಚಾರ್ಯ, ರಾಮು, ಸುವರ್ಣಾ ಬಾಯಿ ದೇಸಾಯಿ, ಬಿಂದು, ಮಾಧವಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT