ಸ್ಥಳೀಯ ಸಂಸ್ಥೆಗಳ ಚುನಾವಣೆ: ಪ್ರಕ್ರಿಯೆ ಆರಂಭ

7
ಲಿಂಗಸುಗೂರು ಪುರಸಭೆ ನಾಮಪತ್ರ ಸಲ್ಲಿಕೆಗೆ ಪ್ರತ್ಯೇಕ ಕಚೇರಿ ವ್ಯವಸ್ಥೆ

ಸ್ಥಳೀಯ ಸಂಸ್ಥೆಗಳ ಚುನಾವಣೆ: ಪ್ರಕ್ರಿಯೆ ಆರಂಭ

Published:
Updated:
Deccan Herald

ಲಿಂಗಸುಗೂರು: ‘ನಗರಾಭಿವೃದ್ಧಿ ಇಲಾಖೆ ಸರ್ಕಾರದ ಆಧೀನ ಕಾರ್ಯದರ್ಶಿ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ 2018ರ ವಾರ್ಡ್‌ವಾರು ಮೀಸಲಾತಿ ಪ್ರಕಟಿಸುವ ಜೊತೆಗೆ ಚುನಾವಣಾ ವೇಳಪಟ್ಟಿ ಸಮೇತ ಅಧಿಸೂಚನೆ ಹೊರಡಿಸಿದ್ದಾರೆ’ ಎಂದು ತಹಶೀಲ್ದಾರ್‌ ಚಾಮರಾಜ ಪಾಟೀಲ ತಿಳಿಸಿದ್ದಾರೆ.

ಗುರುವಾರ ಪ್ರಜಾವಾಣಿಗೆ ಮಾಹಿತಿ ನೀಡಿದ ಅವರು, ‘ಜಿಲ್ಲಾಧಿಕಾರಿ ಅವರು ಅಧಿಸೂಚನೆ ಹೊರಡಿಸುತ್ತಿದ್ದು  ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ನಾಮಪತ್ರ ಸಲ್ಲಿಸಲು ದಿನಾಂಕ ಆಗಸ್ಟ್‌ 17 ಕೊನೆಯ ದಿನ. ಆಗಸ್ಟ್‌ 18ರಂದು ನಾಮಪತ್ರಗಳ ಪರಿಶೀಲನೆ. ಆಗಸ್ಟ್‌ 20ರಂದು ಉಮೇದುವಾರಿಕೆ ಹಿಂಪಡೆಯಲು ಕೊನೆ ದಿನ. ಅಗತ್ಯ ಬಿದ್ದಲ್ಲಿ ಆಗಸ್ಟ್‌ 29ರಂದು ಮತದಾನ ನಡೆಯಲಿದೆ’ ಎಂದರು.

‘ಅನಿವಾರ್ಯತೆ ಎದುರಾದಲ್ಲಿ ಆಗಸ್ಟ್‌ 31ರಂದು ಮರು ಮತದಾನ ನಡೆಸಲಾಗುವುದು. ಮತದಾನ ಬೆಳಿಗ್ಗೆ 7 ರಿಂದ ಸಂಜೆ 5ರ ವರೆಗೆ ನಡೆಯಲಿದೆ. ಸೆಪ್ಟಂಬರ್‌ 1ರಂದು ತಾಲ್ಲೂಕು ಕೇಂದ್ರದಲ್ಲಿಯೆ ಬೆಳಿಗ್ಗೆ 8ರಿಂದ ಮತ ಎಣಿಕೆ ಪ್ರಕ್ರಿಯೆ ಜರುಗಲಿದೆ. ಈಗಾಗಲೆ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿಗಳನ್ನು ನಿಯೋಜಿಸಿದ್ದು ಶಾಂತಿಯುತ ಚುನಾವಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ’ ಎಂದು ಸ್ಪಷ್ಟಪಡಿಸಿದರು.

‘ಲಿಂಗಸುಗೂರು ಪುರಸಭೆ 23 ವಾರ್ಡ್‌ಗಳ ಮೀಸಲಾತಿ ಘೋಷಣೆಯಾಗಿದ್ದು ಒಟ್ಟು 31 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. 14,959 ಪುರುಷ, 15,056 ಮಹಿಳಾ, 2 ಇತರೆ ಒಟ್ಟು 30017 ಮತದಾರರು ಮತದಾನ ಮಾಡಲಿದ್ದಾರೆ. ಸ್ಥಳೀಯ ಸಂಸ್ಥೆಗಳ ಮತದಾನಕ್ಕೆ ವಿದ್ಯುನ್ಮಾನ ಮತಯಂತ್ರ ಬಳಕೆ ಮಾಡುತ್ತಿದ್ದು ನಾಗರಿಕರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ವಿವರಿಸಿದರು.

ಚುನಾವಣಾಧಿಕಾರಿಗಳ ನಿಯೋಜನೆ: ಸ್ಥಳೀಯ ಲಿಂಗಸುಗೂರು ಪುರಸಭೆ ವಾರ್ಡ್‌ 1 ರಿಂದ 8ರ ವರೆಗೆ ಚುನಾವಣಾಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಭಂಡಾರಿ (9696883849), ಸಹಾಯಕ ಚುನಾವಣಾಧಿಕಾರಿಯಾಗಿ ಸಿದ್ದಪ್ಪ ಬಾಚಿನಾಳ ಕೃಷಿ ಅಧಿಕಾರಿ (8277932306).  ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಕೆಗೆ ಅವಕಾಶ ಮಾಡಲಾಗಿದೆ.

ವಾರ್ಡ್‌ 9 ರಿಂದ 16ರ ವರೆಗೆ ಚುನಾವಣಾಧಿಕಾರಿಯಾಗಿ ರೇಷ್ಮೆ ನಿರ್ದೇಶಕರು ರಾಜೇಂದ್ ರಕುಮಾರ (9880664510), ಸಹಾಯಕ ಚುನಾವಣಾಧಿಕಾರಿಯಾಗಿ ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಅಮರೇಶ ಯಾದವ (9480874112). ನಾಮಪತ್ರ ಪ್ರಕ್ರಿಯೆ ಪುರಸಭೆ ಕಾರ್ಯಾಲಯದಲ್ಲಿ ಜರುಗಲಿದೆ.

ವಾರ್ಡ್‌ 17 ರಿಂದ 23ರ ವರೆಗೆ ಚುನಾವಣಾಧಿಕಾರಿಯನ್ನಾಗಿ ತೋಟಗಾರಿಕೆ ಸಹಾಯಕ ನಿರ್ದೇಶಕ ಸುರೇಶ (9739066180), ಸಹಾಯಕ ಚುನಾವಣಾಧಿಕಾರಿಯನ್ನಾಗಿ ತಾಲ್ಲೂಕು ಪಂಚಾಯಿತಿ ಕಿರಿಯ ಎಂಜಿನಿಯರ್‌ ಸೈಯದ್‌ ವಸೀಮ್‌ (9964292740).  ನಾಮಪತ್ರ ಪ್ರಕ್ರಿಯೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ನಡೆಸಲಾಗುತ್ತಿದೆ.

ಸಲ್ಲಿಸಬೇಕಾದ ದಾಖಲೆಗಳು:  ಅಭ್ಯರ್ಥಿಗಳು ನಾಮಪತ್ರದ ಜೊತೆಗೆ ಠೇವಣಿ ಸಂದಾಯ ಮಾಡಿದ ರಸೀದಿ, ಪ್ರಮಾಣಪತ್ರ ಅಥವಾ ಘೋಷಣಾ ಪತ್ರ, ಪರಿಶಿಷ್ಟ ಜಾತಿ, ಪಂಗಡ ಹಾಗೂ ಮೀಸಲಾತಿಯಲ್ಲಿ ಸ್ಪರ್ಧಿಸುವವರು ಆಯಾ ಜಾತಿ ಪ್ರಮಾಣ ಪತ್ರ, ಭಾವಚಿತ್ರಗಳು, ಗುರುತಿನ ಚೀಟಿ, ಮತಪತ್ರದಲ್ಲಿ ಮುದ್ರಣಕ್ಕೆ ಅಭ್ಯರ್ಥಿಯ ಹೆಸರು, ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಮೂನೆ ಎ ಮತ್ತು ಬಿ ಅಥವಾ ಸಿ ಮತ್ತು ಡಿ, ಮತದಾರ ಪಟ್ಟಿಯ ದೃಢಿಕೃತ ಪ್ರತಿ ಸಲ್ಲಿಸುವುದು ಕಡ್ಡಾಯ.

                                                    ಮೀಸಲಾತಿ ಪಟ್ಟಿ

                                          ಕರಡಕಲ್ಲ  
ವಾರ್ಡ್‌–01 ಹಿಂದುಳಿದ ವರ್ಗ (ಎ)
ವಾರ್ಡ್‌–02 ಪರಿಶಿಷ್ಟ ಜಾತಿ
ವಾರ್ಡ್‌–03 ಸಾಮಾನ್ಯ

                                             ಲಿಂಗಸುಗೂರು

ವಾರ್ಡ್‌–04 ಸಾಮಾನ್ಯ ಮಹಿಳೆ
ವಾರ್ಡ್‌–05 ಪರಿಶಿಷ್ಟ ಜಾತಿ ಮಹಿಳೆ
ವಾರ್ಡ್‌–06 ಪರಿಶಿಷ್ಟ ಪಂಗಡ ಮಹಿಳೆ
ವಾರ್ಡ್‌–07 ಸಾಮಾನ್ಯ ಮಹಿಳೆ
ವಾರ್ಡ್‌–08 ಪರಿಶಿಷ್ಟ ಜಾತಿ
ವಾರ್ಡ್‌–09 ಹಿಂದುಳಿದ ವರ್ಗ (ಎ)
ವಾರ್ಡ್‌–10 ಸಾಮಾನ್ಯ ಮಹಿಳೆ
ವಾರ್ಡ್‌–11 ಹಿಂದುಳಿದ ವರ್ಗ (ಎ) ಮಹಿಳೆ
ವಾರ್ಡ್‌–12 ಸಾಮಾನ್ಯ
ವಾರ್ಡ್‌–13 ಹಿಂದುಳಿದ ವರ್ಗ (ಬಿ)
ವಾರ್ಡ್‌–14 ಹಿಂದುಳಿದ ವರ್ಗ (ಎ)
ವಾರ್ಡ್‌–15 ಸಾಮಾನ್ಯ
ವಾರ್ಡ್‌–16 ಸಾಮಾನ್ಯ
ವಾರ್ಡ್‌–17 ಸಾಮಾನ್ಯ
ವಾರ್ಡ್‌–18                                - ಪರಿಶಿಷ್ಟ ಜಾತಿ ಮಹಿಳೆ

                                                ಕಸಬಾಲಿಂಗಸುಗೂರು

ವಾರ್ಡ್‌–19 ಸಾಮಾನ್ಯ ಮಹಿಳೆ
ವಾರ್ಡ್‌–20 ಸಾಮಾನ್ಯ
ವಾರ್ಡ್‌–21 ಸಾಮಾನ್ಯ ಮಹಿಳೆ
ವಾರ್ಡ್‌–22 ಸಾಮಾನ್ಯ ಮಹಿಳೆ
ವಾರ್ಡ್‌–23 ಪರಿಶಿಷ್ಟ ಪಂಗಡ

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !