ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರವಾರ: ಸಚಿವ ಎನ್.ಎಸ್.ಬೋಸರಾಜುಗೆ ಅದ್ದೂರಿ ಸ್ವಾಗತ

Published 4 ಜೂನ್ 2023, 15:59 IST
Last Updated 4 ಜೂನ್ 2023, 15:59 IST
ಅಕ್ಷರ ಗಾತ್ರ

ಸಿರವಾರ: ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿ ಆಯ್ಕೆಯಾದ ಎನ್.ಎಸ್. ಬೋಸರಾಜು ಅವರು ಮೊದಲ ಬಾರಿಗೆ ಪಟ್ಟಣಕ್ಕೆ ಆಗಮಿಸಿದ್ದರಿಂದ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು.

ಮಾನ್ವಿ ಕ್ಷೇತ್ರಕ್ಕೆ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಎನ್.ಎಸ್.ಭೋಸರಾಜು ಅವರಿಗೆ ಸಚಿವ ಸ್ಥಾನ ಸಿಕ್ಕಿದ್ದಕ್ಕಾಗಿ ಪಟ್ಟಣದ ಕಾರ್ಯಕರ್ತರಿಗೆ ಹೆಚ್ಚಿನ ಸಂತಸವಾಗಿದ್ದು, ಅವರ ಆಗಮಿಸಿದ್ದಕ್ಕಾಗಿ ಮತ್ತು ಶಾಸಕ ಜಿ.ಹಂಪಯ್ಯ ನಾಯಕ ಅವರನ್ನು ಹಾರ, ಶಾಲು ಹಾಕಿ ಅದ್ದೂರಿಯಾಗಿ ಸ್ವಾಗತಿಸಿ ಜೈಕಾರ ಹಾಕಿದರು.

ಚುಕ್ಕಿ ಸೂಗಪ್ಪ ಸಾಹುಕಾರ, ರಾಜಶೇಖರ ನಾಯಕ ಅರಿಕೇರಿ, ಎಂ.ಶ್ರೀನಿವಾಸ ಜಾಲಾಪೂರ ಕ್ಯಾಂಪ್, ರಮೇಶ ದರ್ಶನಕರ್, ಗಣೇಕಲ್ ವೀರೇಶ, ಅರಿಕೇರಿ ಶಿವಶರಣ, ನಾಗಪ್ಪ ಪತ್ತಾರ್ ಕೆ.ಮಾರ್ಕಂಡೇಯ ಜಾಲಾಪೂರ ಕ್ಯಾಂಪ್, ವೈ.ಶ್ರೀನಿವಾಸ ಜಾಲಾಪೂರ ಕ್ಯಾಂಪ್, ವೈ ಭೂಪನಗೌಡ, ಹಸೇನಲಿಸಾಬ್, ಗಡ್ಲ ಚನ್ನಪ್ಪ, ಜಯಪ್ಪ, ಅಬ್ರಾಹಂ ಹೊನ್ನುಟಗಿ, ಗಡ್ಲ ಚನ್ನಬಸವ, ಮಹ್ಮದ್ ಹುಸೇನ್, ಸವಾರೆಪ್ಪ ಎಂ.ಮನೋಹರ, ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT