ಮಂಗಳವಾರ, ಸೆಪ್ಟೆಂಬರ್ 28, 2021
22 °C
ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ: ಶಾಸಕ ರಾಜಾ ವೆಂಕಟಪ್ಪ ಹೇಳಿಕೆ

ಗ್ರಾಮೀಣ ರಸ್ತೆಗಳ ಆಧುನೀಕರಣ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿರವಾರ: ‘ಮಾನ್ವಿ ವಿಧಾನಸಭಾ ಕ್ಷೇತ್ರದ ಗ್ರಾಮಗಳ ಪ್ರತಿ ರಸ್ತೆಯನ್ನೂ ಆಧುನೀಕರಣ ಮಾಡುವ ಗುರಿ ಹೊಂದಲಾಗಿದೆ’ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ತಿಳಿಸಿದರು.

ತಾಲ್ಲೂಕಿನ ಭ್ಯಾಗನಗರ ಕ್ಯಾಂಪ್‌ನಿಂದ ಸಿರವಾರ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

‘ಈ ಕಾಮಗಾರಿಯನ್ನು 2020- 21ನೇ ಸಾಲಿನ ಕೆಕೆಆರ್‌ಡಿಬಿ ಯೋಜನೆಯ ₹1.6 ಕೋಟಿ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿದೆ’ ಎಂದರು.

ಗ್ರಾಮೀಣ ಪ್ರದೇಶಕ್ಕೆ ಸೌಕರ್ಯ ಒದಗಿಸಲಾಗುತ್ತಿದೆ. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲಾಗುತ್ತಿದೆ. ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದು ಹೇಳಿದರು.

ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮಹಾಂತೇಶ ಪಾಟೀಲ ಅತ್ತನೂರು, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಬಲ್ಲಟಗಿ, ಜಿ‌.ಲೋಕರೆಡ್ಡಿ, ಸಿರವಾರ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಗೌಡ, ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ, ಖಲೀಲ ಖುರೇಷಿ, ಗೋಪಾಲ ನಾಯಕ ಹರವಿ, ಮೌಲ ಸಾಬ್, ಪಿ.ರವಿಕುಮಾರ, ದಾನಪ್ಪ, ಮಾದುಕುಮಾರ ಭ್ಯಾಗನಗರ ಕ್ಯಾಂಪ್, ಬಿ.ಕೋಟೇಶ್ವರಾವ್, ರಾಜಪ್ಪಗೌಡ, ಎಂ. ಚೌದ್ರಿ, ಸೂರ್ಯನಾರಾಯಣ ರೆಡ್ಡಿ, ಇ.ರಾಜಾರಾವ್, ಸೂಗೂರಯ್ಯ ಸ್ವಾಮಿ ಹಿರೇಮಠ ಗಣದಿನ್ನಿ, ನಾಗಪ್ಪ ಲಕ್ಕಂದಿನ್ನಿ, ಶಿವಪ್ಪ ನಾಯಕ, ಬಸವರಾಜ ನಾಯಕ, ಎಇಇ ಶಶಿಕಾಂತ್, ಜೆಇ ಚಂದ್ರಕಾಂತ ಹಾಗೂ ಗುತ್ತೇದಾರರಾದ ಬಾಲಾಜಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.