ಲಿಂಗಸುಗೂರು: ಪುರಸಭೆ ವ್ಯಾಪ್ತಿಯ ಕಸಬಾಲಿಂಗಸುಗೂರು ಗ್ರಾಮದ ಕುಪ್ಪಿಭೀಮದೇವರ ರಥೋತ್ಸವಕ್ಕೆ ಗ್ರಾಮದ ಮುಸ್ಲಿಂ ಸಮುದಾಯದಿಂದ ಎರಡು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.

ಕುಪ್ಪಿಭೀಮ ದೇವರ ರಥೋತ್ಸವಕ್ಕೆ 100 ವರ್ಷ ತುಂಬಿದ್ದರಿಂದ ಡಿಸೆಂಬರ್ನಲ್ಲಿ ನಡೆಯುವ ರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲು ಗ್ರಾಮದ ಮುಖಂಡರು ತೀರ್ಮಾನಿಸಿದ್ದರಿಂದ ಎಲ್ಲ ಸಮುದಾಯದಿಂದ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಮುಸ್ಲಿಂ ಸಮುದಾಯದ ಮುಖಂಡರು ಒಗ್ಗೂಡಿಸಿಕೊಂಡು ಎರಡು ಲಕ್ಷ ರೂಪಾಯಿ ದೇಣಿಗೆ ಸಂಗ್ರಹಿಸಿ ದೇವಸ್ಥಾನದ ಸಮಿತಿ ಕಾರ್ಯದರ್ಶಿಗೆ ನೀಡಿದ್ದಾರೆ.

ಈ ವೇಳೆ ಅಲ್ಲಾಸಾಬ ಬಾಗವಾನ್, ಯೂಸುಫ್ ಡ್ರೈವರ್, ಬಂದೇನವಾಜ್, ಖಾಜಾಸಾಬ್ ಬಾಗವಾನ್, ಖಾಜಾಸಾಬ್ ಸುಬಾನ್, ಬಾಗವಾನ್, ರಾಮಯ್ಯ ಗುತ್ತೇದಾರ, ಸೂಗಯ್ಯ ಸ್ವಾಮಿ ಅತ್ತನೂರು, ಅಮರೇಶ ಹೊರಪೇಟಿ, ರಮೇಶ್ ತಲೆವಡಕರ, ಕುಪ್ಪನಗೌಡ ಮೇಲ್ಮನೆ, ಸೇರಿದಂತೆ ಊರಿನ ಗಣ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.