ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿನಗರ: ‘ಸಂಜೀವಿನಿ’ಗೆ ನರೇಗಾ ‘ನೆರಳು’

ಮಿಟಿಂಗ್‌ ಹಾಲ್‌, ಶೌಚಾಲಯ ಸೇರಿ ಸುಸಜ್ಜಿತ ಕಟ್ಟಡ ನಿರ್ಮಾಣ
ಉಮಾಪತಿ ರಾಮೋಜಿ
Published 10 ಫೆಬ್ರುವರಿ 2024, 6:08 IST
Last Updated 10 ಫೆಬ್ರುವರಿ 2024, 6:08 IST
ಅಕ್ಷರ ಗಾತ್ರ

ಶಕ್ತಿನಗರ: ನರೇಗಾ ಯೋಜನೆ ರೈತರಿಗೆ, ಕೂಲಿಕಾರರಿಗೆ ಮಾತ್ರವಲ್ಲದೇ ಮಹಿಳಾ ಸಂಘಟನೆಗೆ ನೆರಳಾಗಿದೆ.

ರಾಯಚೂರು ತಾಲ್ಲೂಕಿನ ಚಂದ್ರಬಂಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂಜೀವಿನಿ ಗುಂಪಿನ‌ ಮಹಿಳೆಯರು ತಮ್ಮ‌ ಸ್ವ ಸಹಾಯ ಸಂಘದ ಚಟುವಟಿಕೆಗಳಿಗಾಗಿ 2022-23ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ₹13.50 ಲಕ್ಷ ವೆಚ್ಚದಲ್ಲಿ ಶೆಡ್‌ ನಿರ್ಮಿಸಿಕೊಂಡಿದ್ದಾರೆ.

ನಿರ್ಧಿಷ್ಟ ಸಂಘದ ವಿವಿಧ ಚಟುವಟಿಕೆ, ಸಭೆ ನಡೆಸಲು ಸದಸ್ಯೆಯರು ಪರದಾಡುತ್ತಿದ್ದರು.

ಚಂದ್ರಬಂಡಾ ಗ್ರಾಮ ಪಂಚಾಯಿತಿ ಶೇಡ್‌ನಲ್ಲಿ ಮೀಟಿಂಗ್ ಹಾಲ್, ಒಂದು ಸ್ಟೋರ್ ರೂಂ, ಬಾತ್‌ ರೂಂ ಹಾಗೂ ಶೌಚಾಲಯ ಶ್ರೀ ಗಂಗಾ ಸಂಜೀವಿನಿ ಒಕ್ಕೂಟ ಹಸ್ತಾಂತರಿಸಿದೆ. 72 ಸ್ವ-ಸಹಾಯ ಗುಂಪುಗಳಿಗೆ ಕೌಶಲ್ಯ ಚಟುವಟಿಕೆ ಮತ್ತು ಕಾರ್ಯಾಗಾರಗಳನ್ನು ನಡೆಸಲು ಅನುವು ಮಾಡಿಕೊಟ್ಟಿದೆ.

‘ರಾಯಚೂರು ತಾಲ್ಲೂಕಿನ ಕಟ್ಲೇಟ್ಕೂರು, ಹಿರಾಪೂರು ಗ್ರಾಮದಲ್ಲಿ ಸಂಜೀವಿನಿ ಶೆಡ್ ನಿರ್ಮಾಣ ಕಾಮಗಾರಿಗಳು ಮುಕ್ತಾಯ ಹಂತದಲ್ಲಿವೆ. ಎಲ್.ಕೆ.ದೊಡ್ಡಿ ಗ್ರಾಮ ಪಂಚಾಯಿತಿಯ ಕನ್ಯಾದೊಡ್ಡಿ ಗ್ರಾಮದಲ್ಲಿ ಸಂಜೀವಿನಿ ಶೆಡ್ ನಿರ್ಮಾಣ ಕಾಮಗಾರಿ ಪ್ರಗತಿ ಹಂತದಲ್ಲಿದೆ. ಉಳಿದ ಗ್ರಾ.ಪಂಗಳಲ್ಲಿ ನರೇಗಾ ಯೋಜನೆಯಡಿ ಗ್ರಾಮೀಣ ಮೂಲ ಸೌಕರ್ಯದಡಿ ಸಂಜೀವಿನಿ ಶೆಡ್ ನಿರ್ಮಿಸಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಇಒ ಚಂದ್ರಶೇಖರ ಪವಾರ್ ಹೇಳಿದರು.

‘ಗ್ರಾಮೀಣ ಭಾಗದ ಮಹಿಳಾ ಸ್ವಸಹಾಯ ಸಂಘಗಳ ಸಭೆ ಹಾಗೂ ವಿವಿಧ ಕೌಶಲ ಚಟುವಟಿಕೆ ಆಯೋಜಿಸಲು ಉಪಯೋಗವಾಗಿದೆ’ ಎಂದು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮೀಷನ್ ವಲಯ ಮೇಲ್ವಿಚಾರಕ ಯಲ್ಲಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT