ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೈತಿಕ ಮೌಲ್ಯಗಳ ಅರಿವು ಅಗತ್ಯ’

ಕಲ್ಮಠ ಶ್ರೀ, ಆರ್‌.ತಿಮ್ಮಯ್ಯ ಶೆಟ್ಟಿಗೆ ‘ಅಕ್ಷರ ದಾಸೋಹಿ’ ಪ್ರಶಸ್ತಿ ಪ್ರದಾನ
Last Updated 27 ಸೆಪ್ಟೆಂಬರ್ 2020, 3:24 IST
ಅಕ್ಷರ ಗಾತ್ರ

ಮಾನ್ವಿ: ‘ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ನೈತಿಕ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯ’ ಎಂದು ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಶನಿವಾರ ಪಟ್ಟಣದ ಎಸ್‍ಆರ್‌ ಎಸ್‍ವಿ ಕಾಲೇಜು ಸಭಾಂಗಣದಲ್ಲಿ ಮಾನ್ವಿ ಹಾಗೂ ಸಿರವಾರ ತಾಲ್ಲೂಕು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟ, ತಾಲ್ಲೂಕು ಖಾಸಗಿ ಕಾಲೇಜುಗಳ ಉಪನ್ಯಾಸಕರ ಸಂಘ ಜಂಟಿಯಾಗಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ, ಅಕ್ಷರ
ದಾಸೋಹಿ ಹಾಗೂ ಉತ್ತಮ ಉಪನ್ಯಾಸಕ ಪ್ರಶಸ್ತಿಗಳ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾಲ್ಕು ದಶಕಗಳ ಶೈಕ್ಷಣಿಕ ಸೇವೆಗಾಗಿ ಕಲ್ಮಠ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಗಾಂಧಿ
ಸ್ಮಾರಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ತಿಮ್ಮಯ್ಯ ಶೆಟ್ಟಿ ಅವರಿಗೆ ‘ಅಕ್ಷರ ದಾಸೋಹಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

25ಜನ ಉಪನ್ಯಾಸಕರಿಗೆ ‘ಉತ್ತಮ ಉಪನ್ಯಾಸಕ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಪಿ.ತಿಪ್ಪಣ್ಣ ಬಾಗಲವಾಡ ಅಧ್ಯಕ್ಷತೆ ವಹಿಸಿದ್ದರು.

ಖಾಸಗಿ ಕಾಲೇಜುಗಳ ಉಪನ್ಯಾಸ ಕರ ಸಂಘದ ಅಧ್ಯಕ್ಷ ಬಸವರಾಜ ಭೋಗಾವತಿ, ಗೌರವಾಧ್ಯಕ್ಷ ಈರಣ್ಣ ಮರ್ಲಟ್ಟಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಎಚ್.ಶರ್ಪುದ್ದೀನ್ ಪೋತ್ನಾಳ, ಆಡಳಿತ ಮಂಡಳಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮನೋಜ ಮಿಶ್ರಾ, ಇತರ ಪದಾಧಿಕಾರಿಗಳಾದ ತಿಪ್ಪಣ್ಣ ಎಂ.ಹೊಸಮನಿ ಬಲ್ಲಟಗಿ, ನರಸಿಂಹರಾವ್ ಕುಲಕರ್ಣೀ
ಸಿರವಾರ , ಪಕ್ಕೀರಪ್ಪ ಓಲೇಕಾರ, ಕರೀಮ್ ಸಾಬ ಕವಿತಾಳ, ಆಂಜನೇಯ ನಸಲಾಪುರ ಡಾ.ರಾಜಶೇಖರ, ಎಚ್.ಮೌನೇಶ, ಮಹಾಂತೇಶ ಓಲೇಕಾರ, ಮಹೇಶ ಕಾತರಕಿ, ದೇವೇಂದ್ರ ಹೂಗಾರ ಇದ್ದರು. ಉಪನ್ಯಾಸಕ ದುರುಗಪ್ಪ ತಡಕಲ್ ಹಾಗೂ ಮಹಿಬೂಬ ಮದ್ಲಾಪುರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT