ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಸಿರ ಯೋಗಿ’ ಕೃತಿಗಾಗಿ ಅಮೆರಿಕದಿಂದ ಪತ್ರ

Last Updated 27 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ರಾಯಚೂರು: ನಗರದ ಯುವ ಸಾಹಿತಿ ಈರಣ್ಣ ಬೆಂಗಾಲಿ ಅವರು ಬರೆದ ‘ಹಸಿರು ಯೋಗಿ’ ಕೃತಿಯನ್ನು ವಾಷಿಂಗ್ಟನ್‌ ಸ್ಟೇಟ್ ವಿಶ್ವವಿದ್ಯಾಲಯದ ತೋಟಗಾರಿಕೆ ವಿಭಾಗದ ಪ್ರಾಧ್ಯಾಪಕ ಜಿ.ಎನ್‌.ಎಂ. ಕುಮಾರ್ ಅವರು ಮೆಚ್ಚಿಕೊಂಡು ಪತ್ರವೊಂದನ್ನು ಬರೆದಿದ್ದಾರೆ.

ಇ–ಮೇಲ್‌ ಮೂಲಕ ಈರಣ್ಣ ಅವರನ್ನು ಪರಿಚಯ ಮಾಡಿಕೊಂಡಿದ್ದ ಕುಮಾರ್‌ ಅವರು ಅಂಚೆ ಮೂಲಕ ಪುಸ್ತಕವೊಂದನ್ನು ಪಡೆದುಕೊಂಡಿದ್ದಾರೆ.

‘ಪುಸ್ತಕವು ಈರಣ್ಣ ಕೋಸಗಿ ಬಗ್ಗೆ ಅಧಿಕೃತ ಮಾಹಿತಿಯ ಜೊತೆಗೆ ಅವರ ಹಸಿರ ಚಟುವಟಿಕೆಯ ಫೋಟೋಗಳು ದಾಖಲೆಯಾಗಿವೆ. ಅದರಲ್ಲಿರುವ ವ್ಯಂಗ್ಯಚಿತ್ರಗಳು ಪರಿಸರ ಸಂರಕ್ಷಣೆಯ ಕುರಿತಾಗಿ ಹೇಳುತ್ತವೆ. ಹಸಿರು ಚಟುವಟಿಕೆ ಮುಂದುವರಿಸಿ, ಅಗತ್ಯಬಿದ್ದರೆ ನಾನೂ ನೆರವಾಗುತ್ತೇನೆ. ಈ ಬಗ್ಗೆ ನನ್ನ ಸಮಾನಮನಸ್ಸಿನ ಸ್ನೇಹಿತರು ಕೈಜೋಡಿಸುತ್ತಾರೆ’ ಎಂದು ಪತ್ರದಲ್ಲಿ ಹೇಳಿದ್ದಾರೆ.

ಪರಿಸರ ಪ್ರೇಮಿ ಈರಣ್ಣ ಕೋಸಗಿ ಅವರು ಎರಡು ದಶಕಗಳಿಂದ ನಗರದಾದ್ಯಂತ ನೆಡುತ್ತಾ ಬಂದಿರುವ ಸಸಿಗಳು ಹಾಗೂ ಅವರಲ್ಲಿನ ಪರಿಸರ ಕಾಳಜಿ ಕುರಿತು ಈ ಕೃತಿಯು ವಸ್ತುವಿಷಯ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT