ಕಾರಹುಣ್ಣಿಮೆ: ಎತ್ತುಗಳ ಓಟದ ಸ್ಪರ್ಧೆ

7

ಕಾರಹುಣ್ಣಿಮೆ: ಎತ್ತುಗಳ ಓಟದ ಸ್ಪರ್ಧೆ

Published:
Updated:
ಮಾನ್ವಿಯಲ್ಲಿ ಗುರುವಾರ ಕಾರಹುಣ್ಣಿಮೆ ನಿಮಿತ್ತ ಎತ್ತುಗಳ ಓಟದ ಸ್ಪರ್ಧೆಯಲ್ಲಿ ವಿಜೇತ ಎತ್ತುಗಳ ಮಾಲೀಕರಿಗೆ ಬೆಳ್ಳಿ ಕಡಗ ಬಹುಮಾನ ನೀಡಲಾಯಿತು

ಮಾನ್ವಿ: ಪಟ್ಟಣದ ರಾಜಾ ಅಂಬಣ್ಣ ನಾಯಕ ದೊರೆ ಫೌಂಡೇಶನ್ ವತಿಯಿಂದ ಗುರುವಾರ ಕಾರ ಹುಣ್ಣಿಮೆ ನಿಮಿತ್ತ ಎತ್ತುಗಳ ಓಟದ ಸ್ಪರ್ಧೆ ಹಾಗೂ ಹಿರಿಯ ರೈತರಿಗೆ ಗೌರವ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಎತ್ತುಗಳ ಓಟದ ಸ್ಪರ್ಧೆಯಲ್ಲಿ  ಚಿಂತಪಳ್ಳಿ ರಾಮಣ್ಣ ನಾಯಕ ಅವರ ಎತ್ತುಗಳಿಗೆ ಪ್ರಥಮ ಸ್ಥಾನ. ದ್ವನ್ನು ರಂಗದಾಳ ಮುದುಕಪ್ಪ ನಾಯಕ ಅವರ ಎತ್ತುಗಳು ದ್ವಿತೀಯ ಸ್ಥಾನವನ್ನು ಪಡೆದವು.

ಪ್ರಥಮ ಬಹುಮಾನವನ್ನ 10 ಹತ್ತು ತೊಲೆ ಬೆಳ್ಳಿ ಕಡಗ ರಾಜಾ ಮಹೇಂದ್ರ ನಾಯಕ ಹಾಗೂ ದ್ವಿತೀಯ ಬಹುಮಾನ 5 ತೊಲೆ ಬೆಳ್ಳಿ ಕಡಗವನ್ನು ಶ್ರೀಕಾಂತ ಪಾಟೀಲ್ ಗೂಳಿ ಅವರು ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯ ರೈತರಾದ ಅಂಬರೀಶ್ ಕುರುಬರು, ಎದುಲು ರಾಮಣ್ಣ ನಾಯಕ, ಬಸವರಾಜ್ ಮುಂದಿನ ಮನೆ,ಮಹಿಬೂಬ ಸಾಬ್ ಮತ್ತು ಶ್ರೀನಿವಾಸ್ ನಾಯಕ್ ಅವರನ್ನು ಸನ್ಮಾನಿಸಲಾಯಿತು.

ಎ.ಬಿ ಉಪ್ಪಳಮಠ ವಕೀಲ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜೆಡಿಎಸ್ ಪಕ್ಷದ ಮುಖಂಡರಾದ ರಾಜಾ ರಾಮಚಂದ್ರ ನಾಯಕ, ಉದಯ ಕುಮಾರ್, ಇಸ್ಮಾಯಿಲ್ ಸಾಬ್ ಖಲೀಲ್‌ ಖುರೇಶಿ, ಜುಲ್ಫಿ ಅರಳಪ್ಪ ನಾಯಕ, ಅನಿಲ್ ಕುಮಾರ್ ಭಂಡಾರಿ, ಮೌಲಾಸಾಬ್, ಬಸವರಾಜ್ ಶೆಟ್ಟಿ, ಪುರಸಭೆಯ ವ್ಯವಸ್ಥಾಪಕ ಈರಣ್ಣ, ನೈರ್ಮಲ್ಯ ನಿರೀಕ್ಷಕ ಈರಣ್ಣ ನಾಯಕ, ಮೌನೇಶ ನಾಯಕ, ಹನುಮಂತ ನಾಯಕ, ಬಾಷಾ ಸಾಬ್, ಅನ್ವರ್ ಸಾಬ್, ಶಂಶು ಖುರೇಶಿ, ಪವನ್ ಕುಮಾರ್, ವೀರೇಶ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !