ಶುಕ್ರವಾರ, ಸೆಪ್ಟೆಂಬರ್ 17, 2021
30 °C
ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಅಮರೇಶ ನುಗಡೋಣಿ ಸಲಹೆ

ಪತ್ರಕರ್ತರು ಜನರ ಧ್ವನಿಯಾಗಿ ಕೆಲಸ ಮಾಡಬೇಕು: ಡಾ.ಅಮರೇಶ ನುಗಡೋಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿರವಾರ: ‘ಪತ್ರಕರ್ತರು ಜನರ ಧ್ವನಿಯಾಗಿ ಕೆಲಸ ಮಾಡಬೇಕು’ ಎಂದು ಕಥೆಗಾರ ಡಾ.ಅಮರೇಶ ನುಗಡೋಣಿ ಹೇಳಿದರು.

ಪಟ್ಟಣದ ವಿದ್ಯಾವಾಹಿನಿ ಶಾಲೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕ ಶನಿವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತದಲ್ಲಿ ಪತ್ರಿಕೆಗಳಿಗೆ ಉತ್ತಮ ಸ್ಥಾನವಿದೆ. ಗಾಂಧೀಜಿ, ತಿಲಕ್‌ ಹಾಗೂ ಡಿವಿಜಿಯಂಥವರೂ ಪತ್ರಿಕೆಗಳನ್ನು ಹೊರತಂದಿದ್ದರು. ಯುವ ಪತ್ರಕರ್ತರು ಅವರ ಮಾರ್ಗದಲ್ಲಿ ಸಾಗಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ರಾಜಾ ವೆಂಕಟಪ್ಪ ನಾಯಕ,‘ಮಾಧ್ಯಮವು ಸರ್ಕಾರ ಮತ್ತು ಜನರ ಮಧ್ಯೆ  ಸೇತುವೆಯಾಗಿ ಕೆಲಸ ಮಾಡುತ್ತಿದೆ. ಜನರ ಸಮಸ್ಯೆಗಳನ್ನು ಬಗೆಹರಿಸಲು ಒತ್ತು ನೀಡಬೇಕು. ಜನಪ್ರತಿನಿಧಿಗಳನ್ನು ಸರಿದಾರಿಗೆ ತರಬೇಕು’ ಎಂದರು.

ಕಾರ್ಯಕ್ರಮದಲ್ಲಿ ಕವಿತಾಳ ವರದಿಗಾರ ದಿವಂಗತ ಪರ್ವತಯ್ಯಸ್ವಾಮಿ ಕುಟುಂಬಕ್ಕೆ ಪತ್ರಕರ್ತರ ಸಂಘದ ತಾಲ್ಲೂಕು ಘಟಕದಿಂದ ₹11 ಸಾವಿರ ಮೌಲ್ಯದ ಬಾಂಡ್‌ ನೀಡಲಾಯಿತು.

ಡಿವಿಜಿ ಅವರ ಭಾವಚಿತ್ರಕ್ಕೆ ಮಾಜಿ ಶಾಸಕ ಜಿ.ಹಂಪಯ್ಯ ನಾಯಕ ಅವರು ಮಾಲಾರ್ಪಣೆ ಮಾಡಿದರು.

ನವಲಕಲ್ಲು ಬೃಹನ್ಮಠದ ಅಭಿನವ ಶ್ರೀಸೋಮನಾಥ ಶಿವಾಚಾರ್ಯ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿದ್ದರು.

ಮೆಥೋಡಿಸ್ಟ್ ಚರ್ಚ್ ಸಭಾ ಪಾಲಕ ಸಂಸೋನ್ ಡ್ಯಾನಿಯಲ್, ಮುಸ್ಲಿಂ ಧರ್ಮಗುರು ಮಂಜುರು ಉಲ್ ಹಸನ್ ಖಾಜಿ ಉಪ ಖಜಾನಾಧಿಕಾರಿ ವೆಂಕಟಚಲ ಗುಡ್ಯಾಳ, ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ಕಾರ್ಯನಿರತ ಪತ್ರಕರ್ತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ ಹೀರಾ, ಮಾನ್ವಿ  ತಾಲ್ಲೂಕು ಘಟಕದ ಅಧ್ಯಕ್ಷ ಚನ್ನಬಸವ ಬಾಗಲವಾಡ, ಸಂಘದ ಉಪಾಧ್ಯಕ್ಷ ಎಂ.ಗುಂಡಪ್ಪ, ಹುಷೇನ್ ಬಾಷಾ, ರೈತ ಸಂಘದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರೂಪ ಶ್ರೀನಿವಾಸ ನಾಯಕ, ಮಹಾಂತೇಶ ಪಾಟೀಲ ಅತ್ತನೂರು, ಮಲ್ಲಿಕಾರ್ಜುನ ಪಾಟೀಲ ಬಲ್ಲಟಗಿ, ಜಿ.ಲೋಕರೆಡ್ಡಿ, ಸೂಗೂರೇಶ ಗುಡಿ ಅರಕೇರಾ, ಎನ್.ಉದಯ ಕುಮಾರ, ರಮೇಶ ದರ್ಶನಕರ್, ಬ್ರಿಜೇಶ್ ಪಾಟೀಲ, ಉಮಾಪತಿ ಚುಕ್ಕಿ, ಅರಕೇರಿ ಶಿವಶರಣ, ರೇಣುಕಾ ಸೇರಿದಂತೆ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು, ಸಿರವಾರ ಮತ್ತು ಕವಿತಾಳದ ಪತ್ರಕರ್ತರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.