ಗುರುವಾರ , ಡಿಸೆಂಬರ್ 5, 2019
24 °C
ಯುವತಿಯರ ಹತ್ಯೆಗೆ ಖಂಡನೆ

ಮಸ್ಕಿ | ಯುವತಿಯರ ಹತ್ಯೆ ಖಂಡಿಸಿ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಸ್ಕಿ: ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಯುವತಿಯರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವೆಸಗಿ ಸುಟ್ಟು ಹಾಕಿದ ಘಟನೆ ಖಂಡಿಸಿ ಪ್ರಗತಿಪರ ಸಂಘಟನೆಗಳು ಶನಿವಾರ ಮಸ್ಕಿಯಲ್ಲಿ ಪ್ರತಿಭಟನೆ ನಡೆಸಿದವು.

ಕನಕವೃತ್ತದ ಬಳಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ದಲಿತ ಸಾಹಿತಿ ಸಿ.ದಾನಪ್ಪ, ಪಶು ವೈದ್ಯೆ ಡಾ. ಪ್ರಿಯಾಂಕ ರೆಡ್ಡಿ ಹಾಗೂ ರೋಜಾ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿದ ಘಟನೆ ಪೈಶಾಚಿಕ ಕೃತ್ಯವಾಗಿದ್ದು, ಈ ಘಟನೆಯಿಂದ ಇಡೀ ಮಾನವ ಕುಲ ತಲೆ ತಗ್ಗುವಂತಾಗಿದೆ. ಹೆಣ್ಣು ಮಕ್ಕಳು ಸ್ವತಂತ್ರವಾಗಿ ತಿರುಗಾಡದಂತಹ ವಾತಾವರಣ ನಿರ್ಮಾಣವಾಗಿದೆ. ಕೂಡಲೇ ಸರ್ಕಾರ ತಪ್ಪಿತಸ್ಥ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಕನಕವೃತ್ತದ ಬಳಿ ಮೇಣದ ಬತ್ತಿ ಹಚ್ಚಿ ಮೃತ ಯುವತಿಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದೊಡ್ಡಪ್ಪ ಮುರಾರಿ, ಪುರಸಭೆ ಸದಸ್ಯ ನೀಲಕಂಠಪ್ಪ ಮಾತನಾಡಿದರು.

ಮುಸ್ಲಿಮ್‌ ಮುಖಂಡ ಜೀಲಾನಿ ಖಾಜಿ, ಮಸೂದ್‌ ಪಾಷಾ, ತಾಲ್ಲೂಕು ಪಂಚಾಯಿತಿ ಸದಸ್ಯ ರಾಮಣ್ಣ ಉದ್ಬಾಳ, ಮಲ್ಲಯ್ಯ ಕಟ್ಟಿಮನಿ, ಬಸವರಾಜ ಉದ್ಬಾಳ, ಅಶೋಕ ಮುರಾರಿ, ವಿಜಯಕುಮಾರ ಬಡಿಗೇರ್‌, ಸಿದ್ದು ಮುರಾರಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)