ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಎಸ್‌ಸಿ ಪಟ್ಟಿಯಲ್ಲಿ ಮುಂದುವರೆಸಲು ಪ್ರತಿಭಟನೆ

Last Updated 23 ಜೂನ್ 2020, 14:05 IST
ಅಕ್ಷರ ಗಾತ್ರ

ರಾಯಚೂರು: ಕೊರಮ, ಕೊರಚ, ಭೋವಿ (ವಡ್ಡರ್), ಲಂಬಾಣಿ ಜಾತಿಗಳನ್ನು ಎಸ್‌ಸಿ ಪಟ್ಟಿಯಲ್ಲಿಯೇ ಮುಂದುವರೆಸಬೇಕು ಎಂದು ಒತ್ತಾಯಿಸಿ ಎಸ್.ಸಿ ಮಹಿಳಾ ಜಾಗೃತಿ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.

ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಕೊರಮ, ಕೊರಚ, ಭೋವಿ ಲಂಬಾಣಿ ಸಮುದಾಯಗಳು ಸ್ವತಂತ್ರ ಪೂರ್ವದಲ್ಲಿ ಮಿಲ್ಲರ್ ಆಯೋಗದ ಅನುಸಾರ ಶೋಷಿತ ವರ್ಗಗಳ ಪಟ್ಟಿಯಲ್ಲಿ ಇದ್ದವು. ನಂತರ 1950ರ ಸ್ವಾತಂತ್ರ ಭಾರತದ ಪ್ರಥಮ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಅಂದಿನ ಮೈಸೂರು ಪ್ರಾಂತ್ಯದಲ್ಲಿ ಕ್ರಮವಾಗಿ ಆದಿ ದ್ರಾವಿಡ, ಆದಿ ಕರ್ನಾಟಕ ಈ ಆರು ಜಾತಿಗಳನ್ನು ರಾಷ್ಟ್ರಪತಿಗಳ ಆದೇಶದ ಮೇರೆಗ ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಇಂದಿಗೂ ಅಲೆಮಾರಿ ಜಾತಿಗಳಾಗಿಯೇ ಉಳಿದಿವೆ ಎಂದರು.

ಮೀಸಲಾತಿ ಪರಿಕಲ್ಪನೆಯನ್ನು ನಾಶಮಾಡಲು ಮನುವಾದಿಗಳು ಸಕಲ ಸಿದ್ಧತೆ ನಡೆಸಿದ್ದಾರೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ರಾಜಕೀಯ ಪ್ರೇರಿತವಾಗಿ ಮೇಲಿನ ನಾಲ್ಕು ಜಾತಿಗಳ ವಿರುದ್ಧ ಅಪಪ್ರಚಾರ ಮಾಡಿ ಎಸ್‌ಸಿ ಪಟ್ಟಿಯಿಂದ ಕೈಬಿಡುವಂತೆ ಸುಪ್ರೀಂಕೋರ್ಟ್ ಹೇಳಿದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ದೂರಿದರು.

ಭೋವಿ ಸಮಾಜದ ಜಿಲ್ಲಾಧ್ಯಕ್ಷೆ ಶಶಿಕಲಾ ಭೀಮರಾಯ, ಜ್ಯೋತಿ ಚೌಹಾಣ, ಲಂಬಾಣಿ ಸಮಾಜದ ಜಿಲ್ಲಾಧ್ಯಕ್ಷ ನಾರಾಯಣ ನಾಯ್ಕ್ ರಾಠೋಡ, ಶೋಭ ಕೊರವ ,ಶ್ರೀದೇವಿ, ತಾಯಮ್ಮ, ಗೋವಿಂದರಾಜ, ಶಿವಣ್ಣ ಪವಾರ್, ಎಂ.ಎ.ಟಿ ಯಲ್ಲಪ್ಪ, ಭೋವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT