‘ಕ್ವಿಟ್ ಇಂಡಿಯಾ ಚಳವಳಿ ನಿರ್ಣಾಯಕ ಹೋರಾಟ’

7

‘ಕ್ವಿಟ್ ಇಂಡಿಯಾ ಚಳವಳಿ ನಿರ್ಣಾಯಕ ಹೋರಾಟ’

Published:
Updated:
Deccan Herald

ರಾಯಚೂರು: ದೇಶ ಸ್ವಾತಂತ್ರ್ಯಗೊಳ್ಳಲು ಬ್ರಿಟಿಷರ ವಿರುದ್ಧ ಅಸಹಕಾರದ ಧ್ವನಿಯೆತ್ತಿದ ಮಹಾತ್ಮ ಗಾಂಧೀಜಿ ಕ್ವಿಟ್ ಇಂಡಿಯಾ ಚಳವಳಿಯ ಮೂಲಕ ನಿರ್ಣಾಯಕ ಹೋರಾಟ ನಡೆಸಿದರು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಮಣ್ಣ ಇರಬಗೇರಾ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಕ್ವಿಟ್‌ ಇಂಡಿಯಾ ಚಳವಳಿಯ 76ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಿರ್ಣಾಯಕ ಹೋರಾಟದಲ್ಲಿ ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರು ಬಂಧನಕ್ಕೊಳಗಾಗಿರುವುದು ಇತಿಹಾಸವಾಗಿದೆ ಎಂದರು.

ಇದಕ್ಕೂ ಮುನ್ನ ಜಿಲ್ಲಾ ಕ್ರೀಡಾಂಗಣದ ಬಳಿಯ ಪುತ್ತಳಿಗೆ ಮಾಲಾರ್ಪಣೆ ನಡೆಸಿ, ಅಲ್ಲಿಂದ ಕಾಂಗ್ರೆಸ್‌ ಕಚೇರಿವರೆಗೆ ಪಾದಯಾತ್ರೆ ನಡೆಸಲಾಯಿತು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತಕುಮಾರ, ವೆಂಕಣ್ಣ ಯಾದವ, ಪಾರಸಮಲ್ ಸುಖಾಣಿ, ಗೌಸ್ ಮೋಯಿನುದ್ದೀನ್ ಸಾಬ್ ಚೌದ್ರಿ, ಜಿ.ಬಸವರಾಜರೆಡ್ಡಿ, ಕೆ.ಶಾಂತಪ್ಪ, ಜಿ.ಶಿವಮೂರ್ತಿ, ತಾಯಣ್ಣ ನಾಯಕ, ಅಮರೇಗೌಡ ಹಂಚಿನಾಳ, ಜಯಣ್ಣ, ರುದ್ರಪ್ಪ ಅಂಗಡಿ, ಅಬ್ದುಲ್ ಕರೀಂ, ಭೀಮನಗೌಡ ನಾಗಡದಿನ್ನಿ, ರಾಚನಗೌಡ, ಸುಧಾಮ, ಜಿ.ಸುರೇಶ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !