ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಸ್ ಕಾನ್ಸೆಪ್ಟ್ ಶಾಲೆಗೆ ‘ವರ್ಷದ ಅತ್ಯುತ್ತಮ ಶಿಕ್ಷಣ ಸಂಸ್ಥೆ’ ಪ್ರಶಸ್ತಿ

Last Updated 28 ಸೆಪ್ಟೆಂಬರ್ 2021, 16:37 IST
ಅಕ್ಷರ ಗಾತ್ರ

ರಾಯಚೂರು: ‘ಬಿಗಿನ್ ಅಪ್’ ಪರಿಶೋಧನೆ ಮತ್ತು ಇಂಟಲಿಜೆನ್ಸ್ ಸಂಸ್ಥೆಯು ನೀಡುವ ‘2021 ನೇ ಸಾಲಿನ ‘ಅತ್ಯುತ್ತಮ ಶಿಕ್ಷಣ ಹಾಗೂ ಭರವಸೆಯ ಸಂಸ್ಥೆ’ ಎನ್ನುವ ಪ್ರಶಸ್ತಿಗೆ ನಗರದ ರೇಸ್ ಕಾನ್ಸೆಪ್ಟ್ ಶಾಲೆಯು ಭಾಜನವಾಗಿದೆ.

ಬೆಂಗಳೂರಿನ ತಾಜ್ ಹೋಟೆಲ್‌ ಸಭಾಂಗಣದಲ್ಲಿ ಈಚೆಗೆ ನಡೆದ ‘ರಾಷ್ಟ್ರೀಯ ಅತ್ಯುತ್ತಮ ಶಿಕ್ಷಣ ಸಂಸ್ಥೆ ಮತ್ತು ಶಿಕ್ಷಣ ಚರ್ಚಾಕೂಟ–2021 ಕಾರ್ಯಕ್ರಮ’ದಲ್ಲಿ ಎಂಬ ಪ್ರಶಸ್ತಿ ಪ್ರದಾನ ಮಾಡಲಾಯಿತು. ‘ಕೊರೊನಾ ಸಮಯದಲ್ಲಿ ಆನ್‌ಲೈನ್ ಮೂಲಕ ಉತ್ತಮ ವಿದ್ಯಾ ಬೋಧನಾ ಪ್ರಶಸ್ತಿ’ ಯನ್ನು ಸಹ ಕೊಡಲಾಯಿತು.

ರೇಸ್ ಸಂಸ್ಥೆಯ ಪರವಾಗಿ ಕಾರ್ಯನಿರ್ದೇಶಕರಾದ ಚಂದ್ರಮೋಹನ್ ರೆಡ್ಡಿ ಹಾಗೂ ಶಾರದಾದೇವಿ ಅವರು ಪ್ರಶಸ್ತಿಗಳನ್ನು ಸ್ವೀಕರಿಸಿದರು. ಬಿಗಿನ್ ಅಪ್ ಸಂಸ್ಥೆಯ ಅಧ್ಯಕ್ಷ ಡಾ.ಆನಂದ ಗೋಪಾಲ ನಾಯಕ, ಪರಿಶೋಧಕ ಡಾ.ರಾಜಾ ವಿಜಯಕುಮಾರ್ ಹಾಗೂ ಡಾ.ಅಜಯ್‌ಚಂದ್ರನ್ ಅವರು ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು.

ಪ್ರಶಸ್ತಿ ಕುರಿತು ಮಾತನಾಡಿದ ಎನ್. ಚಂದ್ರಮೋಹನ್ ರೆಡ್ಡಿ, ‘ಈ ಪ್ರಶಸ್ತಿಯು ನಮ್ಮ ಸಂಸ್ಥೆಯ ಶಿಕ್ಷಕರ ದಕ್ಷತೆ ಹಾಗೂ ಪರಿಶ್ರಮದ ಫಲ. ಸಂಸ್ಥೆಯ ಮೇಲೆ ಭರವಸೆ ಇಟ್ಟಿರುವ ಎಲ್ಲ ಪಾಲಕರಿಗೆ ಧನ್ಯವಾದಗಳು’ ಎಂದರು.

ರೇಸ್‌ ಶಾಲೆಯ ಪ್ರಾಂಶುಪಾಲೆ ಭಾವನಾ ದೈಲಾನಿ, ರೇಸ್ ಸಂಸ್ಥೆಯ ಅಧ್ಯಕ್ಷ ಕೊಂಡ ಕೃಷ್ಣಮೂರ್ತಿ, ಕಾರ್ಯದರ್ಶಿ ಎಸ್. ವೆಂಕಟಕೃಷ್ಣನ್, ಸಂಸ್ಥೆಯ ಉಪಾಧ್ಯಕ್ಷ ಸಾವಿತ್ರಿ ಪುರುಷೋತ್ತಮ, ಖಜಾಂಚಿ ವಿ. ಷಣ್ಮುಖಪ್ಪ, ಜಂಟಿ ಕಾರ್ಯದರ್ಶಿ ಎಂ. ವೆಂಕಟೇಶ್. ಸದಸ್ಯರಾದ ಶೆಟ್ಟಿ ನಾಗರಾಜ ಮತ್ತು ಸಂಸ್ಥೆಯ ಇತರ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT