ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂಧನೂರು: ವಿಜೃಂಭಣೆಯಿಂದ ನಡೆದ ರಾಯರ ಪೂರ್ವಾರಾಧನೆ

Published : 20 ಆಗಸ್ಟ್ 2024, 15:26 IST
Last Updated : 20 ಆಗಸ್ಟ್ 2024, 15:26 IST
ಫಾಲೋ ಮಾಡಿ
Comments

ಸಿಂಧನೂರು: ಇಲ್ಲಿನ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ರಾಯರ 353ನೇ ಆರಾಧನಾ ಮಹೋತ್ಸವದ ನಿಮಿತ್ತ ಪೂರ್ವಾರಾಧನೆ ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ಗುರುರಾಯರ ಅಷ್ಟೋತ್ತರ, ರಾಯರಿಗೆ ವಿಶೇಷ ಅಲಂಕಾರ ಹಾಗೂ ಪೂಜೆಗಳು ವಿಧಿವತ್ತಾಗಿ ನಡೆದವು.

ಬೆಂಗಳೂರಿನ ಪಂಡಿತ ಗುರುರಾಜ ದಾಸರಿಂದ ಹರಿದಾಸರ ಸಂಕೀರ್ತನೆಗಳಲ್ಲಿ ರಾಯರ ವೈಭವ ಕುರಿತಾಗಿ ವಿಶೇಷ ಪ್ರವಚನ ನಡೆಯಿತು. ಪೂರ್ವಾರಾಧನೆಗೂ ಮುನ್ನ ದಿನ ಗೋಪೂಜೆ, ಲಕ್ಷ್ಮಿಪೂಜೆ, ದವಸ ಧಾನ್ಯಗಳ ಪೂಜೆಗಳು ನಡೆದವು.

ಮಠದ ವ್ಯವಸ್ಥಾಪಕ ಶಾಮಾಚಾರ್, ವಿಚಾರಣಾಕರ್ತ ರಾಘವೇಂದ್ರರಾವ್ ಕುಲಕರ್ಣಿ, ಅರ್ಚಕ ನವೀನ್ ಆಚಾರ್, ಗುರುರಾಜ ಆಲ್ದಾಳ, ನರಸಿಂಹಾಚಾರ್ ಮಠಾಧಿಕಾರಿ, ಗೋಪಾಲ್ ಆಚಾರ್ ಜೋಶಿ, ಪ್ರಹ್ಲಾದಗುಡಿ, ನಾಗೇಂದ್ರ ಕುಮಾರ್ ಸಾಹುಕಾರ್, ಜಯತೀರ್ಥ ದಾಸ್ ಉಪಸ್ಥಿತರಿದ್ದರು.

ಸಿಂಧನೂರು ನಗರದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬೆಂಗಳೂರಿನ ಪಂಡಿತ ಗುರುರಾಜ ದಾಸರಿಂದ ಹರಿದಾಸರ ಸಂಕೀರ್ತನೆಗಳಲ್ಲಿ ರಾಯರ ವೈಭವ ಕುರಿತಾಗಿ ವಿಶೇಷ ಪ್ರವಚನ ನಡೆಯಿತು
ಸಿಂಧನೂರು ನಗರದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬೆಂಗಳೂರಿನ ಪಂಡಿತ ಗುರುರಾಜ ದಾಸರಿಂದ ಹರಿದಾಸರ ಸಂಕೀರ್ತನೆಗಳಲ್ಲಿ ರಾಯರ ವೈಭವ ಕುರಿತಾಗಿ ವಿಶೇಷ ಪ್ರವಚನ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT