ರಾಯಚೂರು: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಕಾರ್ಯಕ್ರಮದ ಅಂಗವಾಗಿ ಫೀಟ್ ಇಂಡಿಯಾ ಫ್ರೀಡಮ್ ರನ್ 2.0 ಜಿಲ್ಲಾಧಿಕಾರಿ ಕಛೇರಿಯಿಂದ ಮಹಾತ್ಮ ಗಾಂಧಿ ಕ್ರೀಡಾಂಗಣದವರೆಗೆ ಓಟ ಆಯೋಜಿಸಲಾಗಿತ್ತು.

ಭಾರತ ಸರ್ಕಾರ ಸ್ಥಾಯಿ ಸಂಸ್ಥೆಯಾದ ನೆಹರು ಯುವ ಕೇಂದ್ರ, ಎನ್.ಸಿ.ಸಿ, ಎನ್‌ಎಸ್ಎಸ್., ಭಾರತ ಸೇವಾದಳ, ಯೂಥ್ ರೆಡ್‌ಕ್ರಾಸ್ ಘಟಕಗಳು, ಡಾ. ಬಿ.ಆರ್. ಅಂಬೇಡ್ಕರ್ ಯುವ ಅಭಿವೃದ್ದಿ ಸಂಘದಿಂದ ಆಯೋಜಿಸಿದ್ದ ಓಟಕ್ಕೆ ಬೆಂಗಳೂರು ಯೂಥ್ ರೆಡ್‌ಕ್ರಾಸ್ ನಿರ್ದೇಶಕ ವಿಜಯಕುಮಾರ ಶಾವಂತಗೇರಾ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಓಟಕ್ಕೆ ಚಾಲನೆ ನೀಡಿದರು.

ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಹರ್ಷಲ್ ಸಿಧಾರ್ಥ, ಎನ್‌ಸಿಸಿ ಅಧಿಕಾರಿ ರಾಜಶೇಖರ್, ಎನ್.ಎಸ್.ಎಸ್. ಅಧಿಕಾರಿ ಶ್ರೀನಿವಾಸ ರಾಯಚೂರುಕರ್, ಆಕಾಶವಾಣಿ ಕೇಂದ್ರದ ವೆಂಕಟೇಶ ಬೆವಿನಬೆಂಚಿ, ಜಿಲ್ಲಾ ದೈಹಿಕ ಶಿಕ್ಷಣ ಪ್ರಭಾರಿ ಅಧಿಕಾರಿ ಪರುಶುರಾಮ, ಭಾರತ ಸೇವಾದಳ ವಿಭಾಗ ಸಂಘಟಕ ವಿದ್ಯಾಸಾಗರ ಚಿಣಮಗೇರಿ, ರೆಡ್‌ಕ್ರಾಸ್ ಕಾರ್ಯದರ್ಶಿ ಅತಾವುಲ್ಲಾ, ನೆಹರು ಯುವ ಕೇಂದ್ರ ಲೆಕ್ಕಾಧಿಕಾರಿ ಜಿ.ಎಸ್.ಹಿರೇಮಠ, ಡಾ..ಬಿ.ಆರ್. ಅಂಬೇಡ್ಕರ ಯುವ ಅಭಿವೃದ್ದಿ ಸಂಘದ ಕಾರ್ಯದರ್ಶಿ ತಿರುಮಲೇಶ, ನೆಹರು ಯುವ ಕೇಂದ್ರದ ಸ್ವಯಂ ಸೇವಕರು, ಎನ್.ಸಿ.ಸಿ, ಎನ್.ಎಸ್.ಎಸ್. ಯುವ ರೆಡ್‌ಕ್ರಾಸ್, ಭಾರತ ಸೇವಾದಳ ವಿದ್ಯಾರ್ಥಿಗಳು ಓಟದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.