ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂಧನೂರು | ರೇಣುಕಾ ನರ್ಸಿಂಗ್ ಕಾಲೇಜು; ಶೇ.100 ರಷ್ಟು ಫಲಿತಾಂಶ

Published 13 ಜೂನ್ 2024, 13:54 IST
Last Updated 13 ಜೂನ್ 2024, 13:54 IST
ಅಕ್ಷರ ಗಾತ್ರ

ಸಿಂಧನೂರು: ನಗರದ ರೇಣುಕಾ ಕಾಲೇಜು ಆಫ್ ಬಿಎಸ್ಸಿ ನರ್ಸಿಂಗ್‍ನಲ್ಲಿ ಶೇ100ಕ್ಕೆ 100 ರಷ್ಟು ಫಲಿತಾಂಶ ಪಡೆದುಕೊಂಡಿದೆ ಎಂದು ಕಾಲೇಜಿನ ವ್ಯವಸ್ಥಾಪಕ ವೀರಭದ್ರಗೌಡ ತಿಳಿಸಿದರು.

ಸ್ಥಳೀಯ ಕಾಲೇಜಿನಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಗುರುವಾರ ಸಿಹಿ ತಿನಿಸಿ ಅಭಿನಂದಿಸಿ ಮಾತನಾಡಿದರು.

ಎಂ.ಮರಿಬಸನಗೌಡ ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿ ರೇಣುಕಾ ನರ್ಸಿಂಗ್ ಕಾಲೇಜು ನಡೆಯುತ್ತಿದೆ. ಬಿಎಸ್ಸಿ ನರ್ಸಿಂಗ್ ಕೋರ್ಸ್ ಇರುವುದು ನಮ್ಮ ಕಾಲೇಜಿನಲ್ಲಿ ಮಾತ್ರ. ಬಳ್ಳಾರಿ, ಹೊಸಪೇಟೆ ಹೀಗೆ ದೂರದ ನಗರಗಳಿಗೆ ಹೋಗಿ ದುಬಾರಿ ಹಣ ಭರಿಸಿ ಓದಲು ಬಡ ಮತ್ತು ಮಧ್ಯಮ ವರ್ಗದವರಿಗೆ ಕಷ್ಟವಾಗುತ್ತದೆ. ಆದ್ದರಿಂದ ನಗರದಲ್ಲಿ ಈ ಕಾಲೇಜು ಆರಂಭಿಸಲಾಗಿದೆ. ಪ್ರಥಮ ವರ್ಷದಲ್ಲಿಯೇ ನೂರಕ್ಕೆ ನೂರರಷ್ಟು ಫಲಿತಾಂಶ ಬರಲು ಕಾರಣಿಕರ್ತರಾದ ಪ್ರಾಚಾರ್ಯರು ಹಾಗೂ ಉಪನ್ಯಾಸಕರಿಗೆ ಧನ್ಯವಾದಗಳು ಎಂದು ಹೇಳಿದರು.

ಕಾಲೇಜಿನಲ್ಲಿ 27 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿದೆ. ಅನಿತಾ ಶೇ 75 ಪ್ರಥಮ ಸ್ಥಾನ, ಸಹನಾ ಶೇ 74 ದ್ವಿತೀಯ ಸ್ಥಾನ, ಯಶೋಧ ಶೇ73 ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ವಿವರಿಸಿದರು.

ಉತ್ತಮ ಫಲಿತಾಂಶ ಬರಲು ಕಾಲೇಜು ಆಡಳಿತ ಮಂಡಳಿ, ಉಪನ್ಯಾಸಕರು ಪುಸ್ತಕ ನೀಡಿ, ವಿವಿಧ ಪ್ರಾಯೋಗಿಕ ವಿಧಾನಗಳನ್ನು ತಿಳಿಸಿ ಅರ್ಥೈಸಿರುವುದು ಕಾರಣವಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದರು. ಪ್ರಾಚಾರ್ಯೆ ಅನ್ನಪೂರ್ಣ, ಜಗದೀಶ ಹಾಗೂ ಉಪನ್ಯಾಸಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT