ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂಧನೂರು | ಮೇ 10 ರಂದು 51 ಜೋಡಿಗಳ ಸಾಮೂಹಿಕ ವಿವಾಹ

Published 2 ಏಪ್ರಿಲ್ 2024, 16:01 IST
Last Updated 2 ಏಪ್ರಿಲ್ 2024, 16:01 IST
ಅಕ್ಷರ ಗಾತ್ರ

ಸಿಂಧನೂರು: ಭಗವಾನ್ ಬುದ್ಧ, ವಿಶ್ವಗುರು ಬಸವಣ್ಣ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತ್ಯುತ್ಸವ ಅಂಗವಾಗಿ ದಲಿತ ಸಂಘಟನೆ ಸಮಿತಿ ಭೀಮ್ ಘರ್ಜನೆ ಜಿಲ್ಲಾ ಘಟಕ ವತಿಯಿಂದ 51 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮೇ.10 ರಂದು ನಗರ ಗೋಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ರಾಜ್ಯ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಹಂಪನಾಳ ಹೇಳಿದರು.

ನಗರದ ಲಘು ಮೋಟರ್ ವಾಹನ ಚಾಲಕರ ಸಂಘದ ಕಚೇರಿ ಪಕ್ಕದ ದಲಿತಪರ ಸಂಘಟನೆಗಳ ಕಾರ್ಯಲಯ ಮಂಗಳವಾರ ಸಾಮೂಹಿಕ ವಿವಾಹದ ಕರಪತ್ರ ಬಿಡುಗಡೆಗೊಳಿಸಿ ಪ್ರಚಾರಾದೋಂಲನಕ್ಕೆ ಚಾಲನೆ ನೀಡಿ ಮಾತನಾಡಿದರು.

ಮದುವೆ ಕಾರ್ಯಕ್ರಮಗಳಿಗೆ ದುಂದು ವೆಚ್ಚ ಮಾಡಲಾಗುತ್ತಿದ್ದು, ಜನರು ಸಾಲಕ್ಕೆ ತುತ್ತಾಗುತ್ತಿದ್ದಾರೆ. ಇದನ್ನು ಅರಿತು ನಮ್ಮ ಸಂಘಟನೆ ವತಿಯಿಂದ 51 ಜೋಡಿಗಳ ಸಾಮೂಹಿಕ ವಿವಾಹ ಹಮ್ಮಿಕೊಂಡಿದ್ದು ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಬಡವರು ಇದರ ಸದುಪಯೋಗ ಪಡೆಯಬೇಕು ಎಂದರು.

ಈಗಾಗಲೇ ಹಲವಾರು ಜನರು ನೋಂದಣಿ ಮಾಡಿಕೊಂಡಿದ್ದು ಏಪ್ರಿಲ್ 30 ರವರೆಗೆ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಎಲ್ಲ ದಾಖಲಾತಿಗಳೊಂದಿಗೆ ಹೆಸರು ನೋಂದಾಯಿಸಬೇಕು. ಮೇ 10 ರಂದು ಗೋಶಾಲೆ ಕಲ್ಯಾಣ ಮಂಟಪದಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದರು.

ಕಲಬುರಗಿ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ಬಾಲಸ್ವಾಮಿ ತಿಡಿಗೋಳ, ಜಿಲ್ಲಾ ಜಿಲ್ಲಾ ಅಧ್ಯಕ್ಷ ಶಿವರಾಜ್ ಉಪ್ಪಲದೊಡ್ಡಿ, ಜಿಲ್ಲಾ ಗೌರವ್ಯಾಧ್ಯಕ್ಷ ಯಮನೂರಪ್ಪ ಪರಾಪೂರ, ಜಿಲ್ಲಾ ಕಾರ್ಯಾಧ್ಯಕ್ಷ ಸುರೇಶ್ ಎಲೆಕೂಡ್ಲಿಗಿ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಬನ್ನಿಗಿಡ್ಡ, ತಾಲ್ಲೂಕು ಅಧ್ಯಕ್ಷ ದುರುಗೇಶ್ ಕಲಮಂಗಿ, ಗೌರವ ಅಧ್ಯಕ್ಷ ಹುಲುಗಪ್ಪ ಹುಲಿಯಾರ್, ಪ್ರಧಾನ ಕಾರ್ಯದರ್ಶಿ ಗುರುನಾಥ ಗದ್ರಟಗಿ, ಜಂಬಣ್ಣ ಉಪ್ಪಲದೊಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT