ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನವಮಿ: ಕಣವಿ ಆಂಜನೇಯ ದೇವಸ್ಥಾನಲ್ಲಿ‌ ವಿಶೇಷ ಪೂಜೆ

Published 17 ಏಪ್ರಿಲ್ 2024, 15:44 IST
Last Updated 17 ಏಪ್ರಿಲ್ 2024, 15:44 IST
ಅಕ್ಷರ ಗಾತ್ರ

ಮಸ್ಕಿ: ರಾಮನವಮಿ ‌ನಿಮಿತ್ತ ಪಟ್ಟಣ ಕಣವಿ ಆಂಜನೇಯ ದೇವಸ್ಥಾನದಲ್ಲಿ ಬುಧವಾರ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು.

ಬೆಳಿಗ್ಗೆ ರಾಮ, ಲಕ್ಷ್ಮಣ, ಸೀತೆಯ ವಿಗ್ರಹದ ಜೊತೆಗೆ ಆಂಜನೇಯನ ಶಿಲಾ ಮೂರ್ತಿಗೆ ಅಭಿಷೇಕ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಹೂವಿನಿಂದ ಆಂಜನೇಯನ ವಿಗ್ರಹಕ್ಕೆ ವಿಶೇಷ ಅಲಂಕರ ಮಾಡಲಾಗಿತ್ತು

ಗಂಗಾಸ್ಥಳದಿಂದ ರಥದ ಕಳಸವನ್ನು ಮಹಿಳೆಯರ ಕುಂಭ ಹಾಗೂ ಕಳಸದೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು. ದೇವಸ್ಥಾನದ ಆವರಣದಲ್ಲಿ ಹೋಮ ಹಾಗೂ ಪೂರ್ಣಾಹುತಿ ನಡೆಯಿತು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ದೇವಸ್ಥಾನ ಸಮಿತಿ ಮುಖಂಡ ರಾಮಲಾಲ್ ದೇಶಮುಖ, ಅಶೋಕ ಠಾಕೂರು ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.

ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ರಥೋತ್ಸವ ನಡೆಯಿತು. ನೂರಾರು ಭಕ್ತರು ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT