ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸುಗೂರು | ರುದ್ರಯ್ಯ ಬಿಜೆಪಿ ಸೇರ್ಪಡೆ: ಬೆಂಬಲಿಗರ ಆಕ್ರೋಶ

Published 25 ಜನವರಿ 2024, 14:18 IST
Last Updated 25 ಜನವರಿ 2024, 14:18 IST
ಅಕ್ಷರ ಗಾತ್ರ

ಲಿಂಗಸುಗೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಲಿಂಗಸುಗೂರು ಮೀಸಲು ವಿಧಾನಸಭೆ ಕ್ಷೇತ್ರದಿಂದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ)ದಿಂದ ಸ್ಪರ್ಧಿಸಿ ಸೋತಿದ್ದ ಆರ್. ರುದ್ರಯ್ಯ ಭಾರತೀಯ ಜನತಾ ಪಾರ್ಟಿ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.

ಲಿಂಗಸುಗೂರು ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್‍ ಪಕ್ಷದಿಂದ ಸ್ಪರ್ಧಿಸಲು ಹಸಿರು ನಿಶಾನೆ ದೊರೆತಿರುವ ಬಗ್ಗೆ ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸಿದ್ದರು. ಕಾಂಗ್ರೆಸ್‍ ಪಕ್ಷದ ಬಲಿಷ್ಠ ಗುಂಪೊಂದು ಆರ್. ರುದ್ರಯ್ಯ ಸ್ಪರ್ಧೆ ಖಚಿತ ಎಂದು ಪರೋಕ್ಷವಾಗಿ ಬೆಂಬಲಿಸುತ್ತ ಪುರಸಭೆ, ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಅನೇಕರನ್ನು ಸೇರ್ಪಡೆ ಮಾಡಿತ್ತು. ಈ ಮೂಲಕ ಕಾಂಗ್ರೆಸ್‍ ಶಾಸಕ ಡಿ.ಎಸ್‍ ಹೂಲಗೇರಿಗೆ ಶೆಡ್ಡು ಹೊಡೆಯುವ ಕೆಲಸ ಮಾಡಲಾಗಿತ್ತು.

ಒಂದು ಹಂತದಲ್ಲಿ ಟಿಕೆಟ್‍ ಅಂತಿಮ ಎಂದುಕೊಂಡು ಹೂಲಗೇರಿ ಹಿಂಬಾಲಕರು ಹತಾಶೆಗೆ ಒಳಗಾಗಿದ್ದರು. ಕೊನೆ ಗಳಿಗೆಯಲ್ಲಿ ಟಿಕೆಟ್‍ ಕೈತಪ್ಪಿದಾಗ ಅಭಿಮಾನಿಗಳು ಮತ್ತು ಕೆಲ ಕಾಂಗ್ರೆಸ್‍ ಮುಖಂಡರ ಸಲಹೆ ಮೇರೆಗೆ ಕೆಆರ್‌ಪಿಪಿ ಪಕ್ಷದಿಂದ ಸ್ಪರ್ಧಿಸಿದ್ದರು. ಆರ್.ರುದ್ರಯ್ಯ ಅವರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‍ ಪಕ್ಷದ ಮೇಲೆ ಹಿಡಿತ ಸಾಧಿಸಲು ಹೆಣಗಾಡಿದ್ದ ಮುಖಂಡರು ಕೂಡ ಒಮ್ಮಿಂದೊಮ್ಮೆಲೆ ಬಿಜೆಪಿ ಸೇರ್ಪಡೆ ಆಗಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

‘ಆರ್‌. ರುದ್ರಯ್ಯ ಅವರನ್ನು ಕ್ಷೇತ್ರಕ್ಕೆ ಬರಮಾಡಿಕೊಂಡು ಖರ್ಗೆ ಮಾನಸ ಪುತ್ರ ಎಂದು ಪ್ರಚಾರ ನೀಡಲಾಗಿತ್ತು. ಟಿಕೆಟ್‍ ಸಿಗದೇ ಹೋದಾಗ ಪಕ್ಷಾಂತರಗೊಂಡ ರುದ್ರಯ್ಯ ಅವರಿಂದ ದೂರ ಉಳಿದು ಕಾಂಗ್ರೆಸ್‍ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದೇವೆ. ಕಾಂಗ್ರೆಸ್‍ ಪಕ್ಷಕ್ಕೆ ಮುಳುವಾಗಿದ್ದ ಆರ್. ರುದ್ರಯ್ಯ ನಡೆ, ಈಗ ಬಿಜೆಪಿಗೆ ಮುಳುವಾಗುವುದು, ವರವಾಗುವುದೊ ಕಾದೊನೋಡಬೇಕಷ್ಟೆ’ ಎಂದು ಕಾಂಗ್ರೆಸ್‍ ಮುಖಂಡ ಎಸ್‍.ಆರ್ ರಸೂಲು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT