ಎಸ್‌ಬಿಐನಿಂದ ಗೃಹ, ವಾಹನ ಸಾಲ ಮೇಳ

7

ಎಸ್‌ಬಿಐನಿಂದ ಗೃಹ, ವಾಹನ ಸಾಲ ಮೇಳ

Published:
Updated:
Deccan Herald

ರಾಯಚೂರು: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ರಾಯಚೂರು ವಲಯದಿಂದ ಗೃಹ ಮತ್ತು ವಾಹನ ಸಾಲ ಮೇಳ ಆಯೋಜಿಸಿದ್ದು, ಭಾನುವಾರ ಕೊನೆಯ ದಿನ.

ನಗರದ ಎಂ.ಜಿ.ರಸ್ತೆಯ ಎಸ್‌ಬಿಐ ಪ್ರಧಾನ ಕಚೇರಿ ಆವರಣದಲ್ಲಿ ಮೇಳ ನಡೆಯುತ್ತಿದ್ದು, ಪ್ರಾದೇಶಿಕ ವ್ಯವಸ್ಥಾಪಕ ಚಲಪತಿರಾವ್‌ ಅವರು ಶನಿವಾರ ಮೇಳ ಉದ್ಘಾಟಿಸಿ ಮಾತನಾಡಿದರು.

‘ಕಾರು ಷೋ ರೂಂ ಮತ್ತು ಗೃಹ ನಿರ್ಮಾಣ ಉದ್ಯಮಿಗಳೊಂದಿಗೆ ಮೇಳ ಆಯೋಜಿಸಿ ಜನರಿಗೆ ಅನುಕೂಲ ಕಲ್ಪಿಸಲಾಗಿದೆ. ಒಂದೇ ಛಾವಣಿ ಅಡಿಯಲ್ಲಿ ಎಲ್ಲವನ್ನು ವಿಚಾರಿಸಿ ಸಾಲ ಪಡೆಯುವ ಯೋಜನೆ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ’ ಎಂದರು.

ಎಸ್‌ಬಿಐ ಲಿಂಗಸುಗೂರು ರಸ್ತೆ ಶಾಖೆಯ ಮುಖ್ಯ ವ್ಯವಸ್ಥಾಪಕ ಶ್ರೀರಾಮ, ಸಾತ್‌ ಕಚೇರಿ ಶಾಖೆಯ ಮುಖ್ಯ ವ್ಯವಸ್ಥಾಪಕ ಬಸವರಾಜು, ಎಂ.ಜಿ.ರಸ್ತೆ ಶಾಖೆಯ ಮುಖ್ಯ ವ್ಯವಸ್ಥಾಪಕ ವಿಕ್ರಮ ಹಾಗೂ ಪ್ರಧಾನ ಕಚೇರಿಯ ಮುಂಗಡ ವಿಭಾಗದ ಮುಖ್ಯ ವ್ಯವಸ್ಥಾಪಕ ಪುಷ್ಪ ದಂತುಡು ಇದ್ದರು.

ಟಾಟಾ, ಹುಂಡೈ ಹಾಗೂ ಮಾರುತಿ ಷೋ ರೂಂ ಪ್ರತಿನಿಧಿಗಳು ನೂತನ ಮಾದರಿ ಕಾರುಗಳೊಂದಿಗೆ ಭಾಗಿಯಾಗಿದ್ದಾರೆ. ರಾಯಚೂರಿನಲ್ಲಿ ಗೃಹ ನಿರ್ಮಾಣಕ್ಕೆ ಯೋಜನೆ ರೂಪಿಸಿರುವ ಆಶೀರ್ವಾದ ಬಿಲ್ಡರ್ಡ್‌ ಮೇಳದಲ್ಲಿ ಇದ್ದಾರೆ.

ಮೇಳದಲ್ಲಿ ಮೊದಲ ದಿನ 100 ಕ್ಕೂ ಹೆಚ್ಚು ಜನರು ಭೇಟಿ ನೀಡಿದರು. 15 ಜನರಿಗೆ ಔಪಚಾರಿಕವಾಗಿ ಸಾಲ ಮಂಜೂರಿಗೆ ಒಪ್ಪಿಗೆ ನೀಡಲಾಯಿತು. ಗೃಹ ಸಾಲ ಶೇ 8.53 ಕನಿಷ್ಠ ಬಡ್ಡಿದರದಲ್ಲಿ ಹಾಗೂ ವಾಹನ ಸಾಲ ಶೇ 9 ಕನಿಷ್ಠ ಬಡ್ಡಿದರದಲ್ಲಿ ನೀಡಲಾಗುತ್ತಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !