ಸೀತಾ, ರಾಮ ಕಲ್ಯಾಣೋತ್ಸವ

7

ಸೀತಾ, ರಾಮ ಕಲ್ಯಾಣೋತ್ಸವ

Published:
Updated:
Prajavani

ರಾಯಚೂರು: ನಗರದ ಉಪ್ಪಾರವಾಡಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರೀಕೃಷ್ಣ ಭಜನಾ ಮಂಡಳಿಯ 9ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಬುಧವಾರ ಸೀತಾ,ರಾಮ ಕಲ್ಯಾಣೋತ್ಸವ ನಡೆಯಿತು.

ಒಂಭತ್ತು ತಿಂಗಳಿನಿಂದ ‘ಶ್ರೀ ರಾಮ ರಾಮ ರಾಮೇತೆ’ ರಕ್ಷಾಮಂತ್ರ ಕೋಟಿ ಜಪವನ್ನು ನಡೆಸಲಾಗಿತ್ತು. ಇದರ ಉದ್ಯಾಪನಾ ಅಂಗವಾಗಿ ಲೋಕಕಲ್ಯಾಣಾರ್ಥವಾಗಿ ಸೀತಾ-ರಾಮ ಕಲ್ಯಾಣೋತ್ಸವ ನಡೆಸಲಾಯಿತು.

ಪಾರಾಯಣದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಸೀತಾ-ರಾಮ ಕಲ್ಯಾಣವನ್ನು ಶಾಸ್ತ್ರೋಕ್ತವಾಗಿ ಹೋಮ, ಲಕ್ಷ ತುಳಿಸಿ ಅರ್ಚನೆಯೊಂದಿಗೆ ಮಾಡಲಾಯಿತು.

ಉಪ್ಪಾರವಾಡಿ ಶ್ರೀಕೃಷ್ಣ ಭಜನಾ ಮಂಡಳಿ ಅಧ್ಯಕ್ಷ ನಿರ್ಮಲ ಚಾಗಿ, ಪ್ರಧಾನ ಕಾರ್ಯದರ್ಶಿ ಕೆ.ಎಚ್.ಜಯಶ್ರೀ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !