ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಓಬಿ ಶಾಖೆ ವಿಲೀನ ಕೈಬಿಡುವಂತೆ ಎಸ್‌ಎಲ್‌ಬಿಸಿ ಮನವಿ

Last Updated 30 ಸೆಪ್ಟೆಂಬರ್ 2018, 11:46 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಸಿರವಾರ ತಾಲ್ಲೂಕು ಕವಿತಾಳದಲ್ಲಿರುವ ಇಂಡಿಯನ್‌ ಓವರಸೀಜ್ ಬ್ಯಾಂಕ್‌ (ಐಓಬಿ) ಶಾಖೆಯನ್ನು ಮಾನ್ವಿ ಶಾಖೆಯೊಂದಿಗೆ ವಿಲೀನ ಅಥವಾ ಸ್ಥಳಾಂತರಗೊಳಿಸುವ ಪ್ರಕ್ರಿಯೆ ಕೈಬಿಡುವಂತೆ ರಾಜ್ಯಮಟ್ಟದ ಬ್ಯಾಂಕ್‌ ಸಮಿತಿ (ಎಸ್‌ಎಲ್‌ಬಿಸಿ)ಯು ಐಓಬಿ ನಿರ್ದೇಶಕರ ಮಂಡಳಿಗೆ ಮನವಿ ಮಾಡಿದೆ.

ಬೆಂಗಳೂರಿನ ವಿಧಾನಸೌಧದಲ್ಲಿ ಶನಿವಾರ ನಡೆದ ಸಮಿತಿ ಸಭೆಯಲ್ಲಿ ಈ ಬಗೆಗೆ ವಿಷಯ ಪ್ರಸ್ತಾಪಿಸಿ ಚರ್ಚಿಸಿರುವುದು ಗಮನಾರ್ಹ.

ಕವಿತಾಳ ಬ್ಯಾಂಕ್‌ ಶಾಖೆಯ ಗ್ರಾಹಕರು ತೊಂದರೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿರುವ ಎಸ್‌ಎಲ್‌ಬಿಸಿ ನಿರ್ದೇಶಕರು, ಐಓಬಿ ಕವಿತಾಳ ಶಾಖೆಯನ್ನು ಮಾನ್ವಿ ಶಾಖೆಯಲ್ಲಿ ವಿಲೀನ ಮಾಡುವ ನಿರ್ಧಾರ ಕೈಬಿಡುವಂತೆ ಐಓಬಿ ನಿರ್ದೇಶಕರ ಮಂಡಳಿಯನ್ನು ಕೋರಿದೆ.

’ಕವಿತಾಳದಲ್ಲಿರುವ ಐಓಬಿ ಶಾಖೆಯನ್ನು ಮಾನ್ವಿ ಶಾಖೆಯಲ್ಲಿ ಅಕ್ಟೋಬರ್‌ 15 ರಿಂದ ವಿಲೀನ ಮಾಡಲಾಗುವುದು ಎಂದು ಗೋವಾದಲ್ಲಿರುವ ಐಓಬಿ ಪ್ರಾದೇಶಿಕ ಕಚೇರಿ ತಿಳಿಸಿದೆ. ಆದರೆ, ಕವಿತಾಳ ಪಟ್ಟಣವು 15 ಸಾವಿರ ಜನಸಂಖ್ಯೆ ಹೊಂದಿದ್ದು, ರಾಷ್ಟ್ರೀಕೃತ ಬ್ಯಾಂಕುಗಳಾದ ಎಸ್‌ಬಿಐ ಹಾಗೂ ಐಓಬಿ ಎರಡು ಶಾಖೆಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಬ್ಯಾಂಕ್‌ ಶಾಖೆಯ ಗ್ರಾಹಕರ ನಿಯೋಗವು ಈಗಾಗಲೇ ರಾಯಚೂರು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಐಓಬಿ ಶಾಖೆ ವಿಲೀನ ಮಾಡಿದರೆ ಜನರು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಬ್ಯಾಂಕ್‌ ಶಾಖೆಯ ಗ್ರಾಹಕರಿಗೆ ಆಗುವ ತೊಂದರೆಯನ್ನು ಎಸ್‌ಎಲ್‌ಬಿಸಿಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು’ ಎಂದು ರಾಯಚೂರು ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ರಂಗನಾಥ ಎಸ್‌. ನೂಲಿಕರ್‌ ಅವರು ಎಸ್‌ಎಲ್‌ಬಿಸಿ ನಿರ್ದೇಶಕರ ಸಭೆಗೆ ವಿಷಯ ಪ್ರಸ್ತಾವನೆಯನ್ನು ಸಲ್ಲಿಸಿದ್ದರು.

’ಕವಿತಾಳದಲ್ಲಿರುವ ಇಂಡಿಯನ್‌ ಓವರಸೀಜ್‌ ಬ್ಯಾಂಕ್‌ ಶಾಖೆ ಸ್ಥಗಿತ ಅಥವಾ ಸ್ಥಳಾಂತರ ಮಾಡಬಾರದು ಎನ್ನುವ ಮನವಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಐಓಬಿ ನಿರ್ದೇಶಕರ ಮಂಡಳಿ ಭರವಸೆ ನೀಡಿದೆ’ ಎಂದು ಸಭೆಯಲ್ಲಿ ಭಾಗವಹಿಸಿದ್ದ ರಂಗನಾಥ ಎಸ್‌. ನೂಲಿಕರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT