ಶನಿವಾರ, ಡಿಸೆಂಬರ್ 7, 2019
22 °C

ಬಡ ಆಟೊ ಚಾಲಕರಿಗೆ ಎಸ್‌ಪಿ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನಗರದ ಬಡ ಆಟೊ ಚಾಲಕರು ಚಾಲನೆಗೆ ಅಗತ್ಯವಿರುವ ದಾಖಲೆಗಳನ್ನು ಪಡೆದುಕೊಳ್ಳಲು ಒಟ್ಟು ₹50 ಸಾವಿರ ಆರ್ಥಿಕ ನೆರವು ನೀಡುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಹೇಳಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಆಟೊ ಚಾಲಕರ ಸಭೆಯಲ್ಲಿ ಮಾತನಾಡಿದರು.

ಆಟೋ ಯೂನಿಯನ್ ಅಧ್ಯಕ್ಷ ಭಾಷಾ ಖಾನ್, ಸಂಜೀವಿನಿ ಆಟೋ ಚಾಲಕರ ಸಂಘದ ಅಧ್ಯಕ್ಷ ಆಲಂ ಖಾನ್, ಭೀಮಸೇನೆ ಆಟೋ ಚಾಲಕರ ಸಂಘದ ಅಧ್ಯಕ್ಷ ಮಹಾದೇವ, ಕೆಎಸ್ಆರ್‌ಟಿಸಿ ಆಟೊ ಚಾಲಕರ ಸಂಘದ ಅಧ್ಯಕ್ಷ ರವಿ ಹಾಗೂ ಇನ್ನಿತರ ಇನ್ನಿತರ ಆಟೋ ಚಾಲಕರು, ಡ್ರೈವಿಂಗ್ ಸ್ಕೂಲ್ ರಿಜ್ವಾನ್ ಮೊಹಮ್ಮದ್ ರಿಯಾಜ್ ಟ್ರಾಫಿಕ್ ಪಿಎಸ್ಐ ಶಿವಬಲ್ ಮತ್ತು ಟ್ರಾಫಿಕ್ ಸಿಬ್ಬಂದಿ ಹಾಗೂ ಕೆಲವು ವಿಮಾ ಕಂಪನಿ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಆಟೊ ಚಾಲನೆಗೆ ಬೇಕಾದ ಪರವಾನಗಿ, ಮತ್ತು ವಿಮೆ ಮಾಡಿಸಲು ಸೂಚಿಸಲಾದ ದಾಖಲೆಗಳನ್ನು ಮಾಡಿಸಲು ಸುಮಾರು ₹12 ಸಾವಿರ ಬೇಕಾಗುತ್ತದೆ ಎಂದು ಆರ್‌ಟಿಒ ಅಧಿಕಾರಿ ಆನಂದ ಹೇಳಿದರು. ಬಡ ಆಟೋ ಚಾಲಕರು ದಾಖಲೆ ಪಡೆಯಲು ಕಷ್ಟವಾಗುತ್ತದೆ ಎಂದು ಸಂಘಗಳ ಸದಸ್ಯರು ಸಹಾಯಕತೆ ವ್ಯಕ್ತಪಡಿಸಿದರು. ಇದಕ್ಕೆ ಸ್ಪಂದಿಸಿ ಮಾತನಾಡಿದ ಎಸ್‌ಪಿ ಅವರು ಬಡ ಆಟೊ ಚಾಲಕರಿಗೆ ನೆರವು ನೀಡುವುದಾಗಿ ತಿಳಿಸಿದರು.

ಪ್ರತಿಕ್ರಿಯಿಸಿ (+)