ಶನಿವಾರ, ಅಕ್ಟೋಬರ್ 23, 2021
20 °C

ರಾಯಚೂರು: ಸುಡುಗಾಡು ಸಿದ್ದ ಸಮುದಾಯಕ್ಕೆ ಮೂಲಸೌಕರ್ಯ ಕಲ್ಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಸುಡುಗಾಡು ಸಿದ್ದ ಸಮುದಾಯದ ಜನರಿಗೆ ನಿವೇಶನ ಹಾಗೂ ವಸತಿ ರಹಿತ ಕುಟುಂಬಗಳಿಗೆ ಸೂರು ನೀಡಿ ಮೂಲಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಸುಡುಗಾಡು ಸಿದ್ದ ಮಹಾಸಂಘ ಜಿಲ್ಲಾ ಘಟಕದ ನೇತೃತ್ವದಲ್ಲಿ ಸಮಾಜದ ಜನರು ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ತಾತ್ಕಾಲಿಕ ಚಿಕ್ಕ ಜೋಪಡಿ ಹಾಕಿ ಸೋಮವಾರ ಧರಣಿ ನಡೆಸಿದರು.

ರಾಯಚೂರು ಜಿಲ್ಲೆಯಾದ್ಯಂತ ವಾಸಿಸುವ ಸುಡುಗಾಡು ಸಿದ್ದ ಸಮುದಾಯದ ಜನಾಂಗಕ್ಕೆ ಭೂ ಒಡೆತನ ಯೋಜನೆಯಡಿ ಕಳೆದ ಬಾರಿ ಅನ್ಯಾಯವಾಗಿದೆ. ಈ ಬಾರಿ ಸಮುದಾಯದ ಬಡ ಕುಟುಂಬಗಳಿಗೆ ಪ್ರಥಮ ಆದ್ಯತೆ ನೀಡಬೇಕು. ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮ ಪಂಚಾಯತಿಯ ವಾರ್ಡ್ ನಂಬರ್ 7 ರ ಮಾರೆಮ್ಮ ದೇವಿ ಕಾಲೋನಿಯಲ್ಲಿ  ಅಂಗನವಾಡಿ ಕೇಂದ್ರ ಕಟ್ಟಡ ಕಳಪೆ ಕಾಮಗಾರಿ ನಿರ್ಮಿಸಿದ್ದು ಮರು ನಿರ್ಮಾಣ ಮಾಡಿಕೊಡಬೇಕು. ಸಮುದಾಯದವರಿಗೆ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ಸಿರವಾರ ತಾಲ್ಲೂಕಿನ ಕವಿತಾಳ ಪಟ್ಟಣ ಪಂಚಾಯತಿ ವ್ಯಾಪ್ತಿಯ ವಾರ್ಡ್ ನಂಬರ್ 3, 4 ರಲ್ಲಿ ವಾಸಿಸುವ ಅಲೆಮಾರಿ ಸುಡುಗಾಡು ಸಿದ್ದ ಸಮುದಾಯದ 84 ನಿವೇಶನ ಮತ್ತು ವಸತಿ ರಹಿತ ಕುಟುಂಬಗಳಿಗೆ ಸರ್ಕಾರಿ ಜಮೀನು ಸರ್ವೆ ನಂ . 684 ಮತ್ತು 19/1 ರಲ್ಲಿ 5 ಎಕರೆ ಜಮೀನ ಅನ್ನು ಸುಡುಗಾಡು ಸಿದ್ಧ ಸಮುದಾಯದ ನಿವೇಶನ ರಹಿತ ಕುಟುಂಬಗಳಿಗೆ ಹಕ್ಕುಪತ್ರ ನೀಡಬೇಕು. ಸಮುದಾಯ ಭವನ, ರುದ್ರ ಭೂಮಿ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಧರಣಿಯಲ್ಲಿ ಜಿಲ್ಲಾಧ್ಯಕ್ಷ ಶಿವರಾಜ ರುದ್ರಾಕ್ಷಿ, ಮಹಾಂತೇಶ ಸಂಕಲ್, ರಾಮಲಿಂಗ, ಅಂಜಿನೇಯ ಮೋತಿ, ಹುಸೇನಪ್ಪ ಯಡವಳ್ಳಿ, ಕೃಷ್ಣಪ್ಪ ರುದ್ರಾಕ್ಷಿ, ಈರಣ್ಣ, ಜಂಬಣ್ಣ, ಬಸವರಾಜ, ಅಂಬಣ್ಣ  ಲಕ್ಷ್ಮಣ ಸಿರವಾರ,ಅಯ್ಯಮ್ಮ, ಶಾಂತಮ್ಮ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.