ಲಿಂಗಸುಗೂರು: ಗಾಂಧಾರಿ ವಿದ್ಯೆ ಕರಗತ ಮಾಡಿಕೊಂಡಿರುವ 9 ವರ್ಷದ ಬಾಲಕ ವೀರಭದ್ರ, 65 ಸಾವಿರ ಪ್ರಶ್ನೆಗಳಿಗೆ ಉತ್ತರಿಸಿ, ದಾಖಲೆ ನಿರ್ಮಿಸಿದ್ದಾನೆ.

ಪಟ್ಟಣದಲ್ಲಿ ಮದುವೆ ಹಾಗೂ ಇತರೆ ಸಮಾರಂಭಗಳಿಗೆ ಸೌಂಡ್ ಸಿಸ್ಟಮ್ ಒದಗಿಸುವ ವೃತ್ತಿಯಲ್ಲಿರುವ ವೀರೇಶ–ಸಂಗೀತಾ ಮಜ್ಜಗಿ ದಂಪತಿ ಪುತ್ರ ವೀರಭದ್ರ, ತಾಲ್ಲೂಕಿನ ಆನಾಹೊಸೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಕಡಿಮೆ ಸಮಯದಲ್ಲಿ 65 ಸಾವಿರ ಪ್ರಶ್ನೆಗಳಿಗೆ ಪಟ ಪಟ ಹೇಳಿ ಕೇಳುಗರನ್ನು ಹುಬ್ಬೇರಿಸುವಂತೆ ಮಾಡುತ್ತಾನೆ. ಪ್ರಶ್ನೆಗಳಿಗೆ ಉತ್ತರಿಸುವ ನನೆಪಿನ ಶಕ್ತಿಯೊಂದಿಗೆ ಗಾಂಧಾರಿ ವಿದ್ಯೆ ಕರಗತಗೊಳಿಸಿಕೊಂಡು ಹಲವು ಸಾಧನೆ ಮಾಡಿದ್ದಾನೆ.

65 ಸಾವಿರ ಪ್ರಶ್ನೆಗಳಿಗೆ ಉತ್ತರ ಸಲೀಸು:

ಬಾಲಕ ವೀರಭದ್ರ, ಚಿಕ್ಕ ವಯಸ್ಸಿನಲ್ಲಿ ಆಗಾಧ ನೆನಪಿನ ಶಕ್ತಿ ಹಾಗೂ ಜ್ಞಾನ ಹೊಂದಿದ್ದು, ಕಡಿಮೆ ಸಮಯದಲ್ಲಿ ಪ್ರಪಂಚಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳ ಬಗ್ಗೆ ಜ್ಞಾನವನ್ನು ಹೊಂದಿದ್ದಾನೆ.

ಭಗವದ್ಗೀತೆಯ ಶ್ಲೋಕಗಳು, 18 ಪುರಾಣಗಳ ಹೆಸರು, 18 ಗಾಯಿತ್ರಿ ಮಂತ್ರ, ಅಮಾವಾಸ್ಯೆ, ಹುಣ್ಣಿಮೆ, ಋತುಗಳು, ಪ್ರಪಂಚದಲ್ಲಿನ ದೊಡ್ಡ ನದಿ, ಸಮುದ್ರ, ಸರೋವರಗಳ ಹೆಸರು, ಮರುಭೂಮಿ, ಜಲಪಾತ, ದ್ವೀಪಗಳ ಹೆಸರು, ಕನ್ನಡದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದವರು ಮತ್ತು ಕೃತಿಗಳು. ಎಲ್ಲ ಧರ್ಮಗಳ ಸ್ಥಾಪಕರು ಅವರ ಪ್ರಮುಖ ಗ್ರಂಥಗಳ ಹೆಸರು, ವಿಟಮಿನ್ಗಳ ಹೆಸರು, ಅವುಗಳ ಕೊರತೆಯಿಂದ ಬರುವ ನ್ಯೂನತೆಯ ಕಾಯಿಲೆ ಹೆಸರು, ಲಸಿಕೆ ಮತ್ತು ಸಂಶೋಧಕರು, ಪ್ರಸಿದ್ಧ ಪಿತಾಮಹಗಳು, ದೇಶಗಳು... ಹೀಗೆ ಒಂದಲ್ಲ, ನೂರಲ್ಲ ಬರೋಬ್ಬರಿ 65 ಸಾವಿರ ಪ್ರಶ್ನೆಗಳಿಗೆ ಉತ್ತರ ನೀಡುವ ಜ್ಞಾನದ ಭಂರವಾಗಿದ್ದಾನೆ. ವಿದ್ಯಾಭ್ಯಾಸದೊಂದಿಗೆ ಪ್ರತಿದಿನ ಒಂದು ಗಂಟೆ ಸಾಮಾನ್ಯ ಜ್ಞಾನದ ಪ್ರಶ್ನೋತ್ತರ ಓದುತ್ತಾನೆ.

2016 ಸೆ. 14ರಂದು ಜನಿಸಿದ ವೀರಭದ್ರ ತನ್ನ 4ನೇ ವಯಸ್ಸಿನಿಂದಲೇ ಅಗಾಧ ನೆನಪಿನ ಶಕ್ತಿಯಿಂದಾಗಿ ಹಲವು ದಾಖಲೆ ನಿರ್ಮಿಸಿದ್ದಾನೆ. 2022ರಲ್ಲಿ ಇಂಡಿಯಾ ವರ್ಲ್ಡ ಬುಕ್ ಆಫ್ ರೆಕಾರ್ಡ್ ಅಮೆರಿಕ, ಅಬ್ದುಲ್ ಕಲಾಂ ಬುಕ್ ಆಫ್ ರೆಕಾರ್ಡ್ಸ್ ಚೆನ್ನೈ, 2023ರಲ್ಲಿ ವರ್ಲ್ಡ್ವೈಡ್ ಬುಕ್ ಆಫ್ ಲಂಡನ್, ಇಂಡಿಯಾ ವರ್ಲ್ಡ್ ರೆಕಾರ್ಡ್ ಜಾರ್ಖಾಂಡ್, ಇಂಟರ್ನ್ಯಾಶನಲ್ ಕಲಾಂ ಗೋಲ್ಡ್ನ ಅವಾರ್ಡ್, ಇಂಟರ್ನ್ಯಾಶನಲ್ ಟ್ಯಾಲೆಂಟ್ ಹಾಗೂ ಇಂಟಲ್ ಕೆಲ್ಟ್ಸ್, ಮಲ್ಟಿ ಟ್ಯಾಲೆಂಟ್ ಕಿಡ್ಸ್ ಅವಾರ್ಡ್, ಇಂಡಿಯಾ ಪ್ರೌಡ್ ಅವಾರ್ಡ್, ಎಕ್ಸ್ಕ್ಲೂಸಿವ್ ವರ್ಲ್ಡ್ ಅವಾರ್ಡ್, ಮಾಸ್ಟರ್ ಅವಾರ್ಡ್ ಸೇರಿದಂತೆ 19 ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾನೆ. ಅದರೊಂದಿಗೆ ಡಾಕ್ಟರೇಟ್ ಅವಾರ್ಡ್ಸ್ ಜಾರ್ಖಾಂಡ್ ಪಡೆದುಕೊಂಡಿದ್ದಾನೆ. ಈತನ ಸಾಧನೆಗೆ ವಿವಿಧ ಸಂಘ-ಸಂಸ್ಥೆಗಳು ಅಭಿನಂದಿಸಿವೆ.

ಗಾಂಧಾರಿ ವಿದ್ಯೆ ಕರಗತ:

ಗಾಂಧಾರಿ ವಿದ್ಯೆ ಎಂಬುದು ಅದ್ಭುತವಾದು. ಇದನ್ನು ಕರಗತ ಮಾಡಿಕೊಂಡಿರುವ ವೀರಭದ್ರ, ಕಣ್ಣಿಗೆ ಬಟ್ಟೆಕಟ್ಟಿಕೊಂಡು ಓದುವುದು, ಬರೆಯುವುದು, ಬಣ್ಣಗಳನ್ನು ಪತ್ತೆ ಹಚ್ಚುವುದು, ಚಿತ್ರಗಳಿಗೆ ಬಣ್ಣ ಹಚ್ಚುವುದು, ನೋಟಿನ ಮುಖಬೆಲೆಯನ್ನು ನಿಖರವಾಗಿ ಹೇಳುವುದು, ಸೈಕಲ್ ಓಡಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.