ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಎಸ್‌ಟಿ ಮೀಸಲಾತಿ: ವಿಶ್ವಕರ್ಮರಿಂದ ಅರೆಬೆತ್ತಲೆ ಪ್ರತಿಭಟನೆ

Last Updated 18 ಮಾರ್ಚ್ 2023, 9:02 IST
ಅಕ್ಷರ ಗಾತ್ರ

ರಾಯಚೂರು: ವಿಶ್ವಕರ್ಮ ಸಮಾಜವನ್ನು ಪರಿಶಿಷ್ಟ ಪಂಗಡ ಮೀಸಲಾತಿ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕದಿಂದ ನಗರದ ಟಿಪ್ಪು ಸುಲ್ತಾನ್‌ ಉದ್ಯಾನದಲ್ಲಿ ವಿಶ್ವಕರ್ಮ ಸಮಾಜದವರು ಶನಿವಾರ ಅರಬೆತ್ತಲೆ ಪ್ರತಿಭಟನೆ ನಡೆಸಿದರು.

ರಾಜಕೀಯವಾಗಿ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ವಿಶ್ವಕರ್ಮ ಸಮಾಜವು ಅಭಿವೃದ್ಧಿ ಮಾಡುವುದಕ್ಕೆ ಎಸ್‌ಟಿ ಮೀಸಲಾತಿ ನೀಡಲೇಬೇಕು ಎಂದು ಘೋಷಣೆ ಕೂಗಿದರು.

ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಮಾರುತಿ ಬಡಿಗೇರ್, ಜಿಲ್ಲಾ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಗಿರೀಶ್ ಆಚಾರ್, ರಾಜ್ಯ ಕಾರ್ಯದರ್ಶಿ ಲೋಹಿತ್ ಕಲ್ಲೂರು ಮತ್ತು ಬ್ರಹ್ಮ ಗಣೇಶ್, ಜಿಲ್ಲಾ ಯುವ ಅಧ್ಯಕ್ಷ ಗುರುಮಡ್ಡಿಪೇಟೆ ಮಲ್ಲಿಕಾರ್ಜುನ ಸಿರವಾರ, ನಾಮನಿರ್ದೇಶಕರಾದ ಎಸ್.ರವೀಂದ್ರ ಕುಮಾರ್, ವೀರೇಶ್ ಜಲಾಲ್ ನಗರ, ಕೊಂಡಾಪುರ್ ವೆಂಕಟೇಶ್, ಈಶ್ವರ್, ಶ್ರೀಕಾಂತ್, ಮೌನೇಶ ವಡವಾಟಿ, ವಿನೋದ್ ವಲ್ಕಂದಿನ್ನಿ. ಪ್ರಕಾಶ್ ಗುಂಜಳ್ಳಿ, ಮನೋಹರ್ ಬಡಿಗೇರ, ಬ್ರಹ್ಮಯ್ಯ, ರಾಮು ಯಾಪಲದಿನ್ನಿ ಮತ್ತಿತರರು ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT