ವಿಶ್ವಕರ್ಮರು ಕಲೆ, ಸಂಸ್ಕೃತಿಯ ರೂವಾರಿಗಳು: ಶಾಸಕ

7

ವಿಶ್ವಕರ್ಮರು ಕಲೆ, ಸಂಸ್ಕೃತಿಯ ರೂವಾರಿಗಳು: ಶಾಸಕ

Published:
Updated:
Prajavani

ರಾಯಚೂರು: ಬೇಲೂರಿನ ಚನ್ನಕೇಶವ ದೇವಸ್ಥಾನ ದೇಶ– ವಿದೇಶದ ಜನರ ಗಮನ ಸೆಳೆಯಲು ಕಾರಣವಾಗಿರುವ ಅಮರಶಿಲ್ಪಿ ಜಕಣಾಚಾರಿ ದೇಶಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ವಿಶ್ವಕರ್ಮರು ಕಲೆ, ಸಂಸ್ಕೃತಿಯ ರೂವಾರಿಗಳಾಗಿದ್ದಾರೆ ಎಂದು ಶಾಸಕ ಡಾ.ಶಿವರಾಜ ಪಾಟೀಲ ಹೇಳಿದರು.

ನಗರದ ಕಾಳಿಕಾದೇವಿ ದೇವಸ್ಥಾನದಲ್ಲಿ ವಿಶ್ವಕರ್ಮ ಸಮುದಾಯದದಿಂದ ಗುರುವಾರ ಏರ್ಪಡಿಸಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಉದ್ಘಾಟಿಸಿ, ಕ್ಯಾಲೆಂಡರ್ ಬಿಗುಗಡೆಗೊಳಿಸಿ ಮಾತನಾಡಿದರು.

ವಿಶ್ವಕರ್ಮರು ಬುದ್ಧಿ ಜೀವಿಗಳಾಗಿದ್ದು ಅವರು ನಿರ್ಮಿಸಿರುವ ಬೇಲೂರಿನ ದೇವಸ್ಥಾನದ ಶಿಲ್ಪಕಲೆ ಅದ್ಭುತವಾಗಿದೆ ಎಂದು ತಿಳಿಸಿದರು.

ಜಿಲ್ಲಾ ವಿಶ್ವಕರ್ಮ ನೌಕರರ ಸಂಘದ ಅಧ್ಯಕ್ಷ ಡಾ.ಮನೋಹರ ಪತ್ತಾರ ಅಧ್ಯಕ್ಷತೆ ವಹಿಸಿದ್ದರು. ಸತೀಶ, ಕೆ.ಸಿ.ವೀರೇಶ, ಶೇಖರ ವಾರದ, ವೆಂಕಟೇಶ ಗಿರಿಬಾಬು, ಮಾಧುರಿ, ಬಿಜೆಪಿ ಮಹಿಳಾ ಘಟಕ ಅಧ್ಯಕ್ಷೆ ವಿಜಯರಾಜೇಶ್ವರಿ, ಶರಣಮ್ಮ ಕಾಮರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕೆ.ಲಕ್ಷ್ಮೀಪತಿ ಯರಗೇರಾ, ರವೀಂದ್ರಕುಮಾರ, ಗೋವರ್ಧನ, ಮಲ್ಲಿಕಾರ್ಜುನ, ಮೌನೇಶ ಆಚಾರಿ, ವೀರೇಶ ಬಡಿಗೇರ ಇದ್ದರು. ಮಾರುತಿ ಬಡಿಗೇರ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !