‘ಪ್ರಜಾಪ್ರಭುತ್ವದಲ್ಲಿ ಮತದಾನ ದೊಡ್ಡ ಅಸ್ತ್ರ’

ಶುಕ್ರವಾರ, ಏಪ್ರಿಲ್ 19, 2019
22 °C
ಕಿರುಚಿತ್ರ ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾ ಚುನಾವಣಾಧಿಕಾರಿ ಶರತ್‌ ಬಿ.

‘ಪ್ರಜಾಪ್ರಭುತ್ವದಲ್ಲಿ ಮತದಾನ ದೊಡ್ಡ ಅಸ್ತ್ರ’

Published:
Updated:
Prajavani

ರಾಯಚೂರು: ಪ್ರಜಾಪ್ರಭುತ್ವ ಇರುವ ದೇಶಗಳಲ್ಲಿ ಮತದಾನವು ನಾಗರಿಕರಿಗೆ ಇರುವ ಬಹುದೊಡ್ಡ ಅಸ್ತ್ರವಾಗಿದೆ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಾಯಚೂರು ರಿಪೋರ್ಟರ್ಸ್‌ ಗಿಲ್ಡ್‌ನಿಂದ ಬುಧವಾರ ಆಯೋಜಿಸಿದ್ದ ಯುವ ಪತ್ರಕರ್ತ ವಿಜಯ ಜಾಗಟಗಲ್ ನಿರ್ದೇಶನದ ಮತದಾನ ಜಾಗೃತಿ ಮೂಡಿಸುವ ’ವೈಲೆಟ್ ಇಂಕ್ -2’ ಹಾಗೂ ‘ಹೋಪ್’ ಕಿರುಚಿತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಜನರ ಜಾಗೃತಿಗಾಗಿ ಪತ್ರಕರ್ತರು ಆಸಕ್ತಿಯಿಂದ ಅರಿವು ಮೂಡಿಸುವ ಕಿರು ಚಿತ್ರಗಳನ್ನು ನಿರ್ಮಾಣ ಮಾಡುವ ಮೂಲಕ ಸಾಮಾಜಿಕ ಜವಬ್ದಾರಿಯನ್ನು ತೋರಿಸಿರುವುದು ಶ್ಲಾಘನಿಯವಾಗಿದೆ ಎಂದರು.

 ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ ಅಮೂಲ್ಯವಾಗಿದೆ. ಇದಕ್ಕಾಗಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಹಲವಾರು ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿರುವ ಪತ್ರಕರ್ತರು ವಿಭಿನ್ನತೆಯ ಅಭಿರುಚಿ ಹೊಂದಿದ್ದಾರೆ. ಎಲ್ಲರ ಜನರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ ಎಂದು ತಿಳಿಸಿದರು.

ಒತ್ತಡದಿಂದ ಕೂಡಿರುವ ಮಾಧ್ಯಮದ ಸೂಕ್ಷವಾದ ಕೆಲಸದ ನಡುವೆಯೂ ಮತದಾನ ಹೆಚ್ಚಳಕ್ಕೆ ಜನ ಜಾಗೃತಿಗಾಗಿ ಬಹುತೇಕ ಪತ್ರಕರ್ತರು ಅಭಿನಯಿಸಿ ಮಹತ್ವದ ಸಂದೇಶ ನೀಡಿದ್ದಾರೆ. ಇದೊಂದು ಮಾದರಿ ಕೆಲಸವಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಮತದಾನ ಪ್ರಕ್ರಿಯೆ ಶೇಕಡವಾರು ಹೆಚ್ಚಳಕ್ಕೆ ಜಿಲ್ಲಾಡಳಿತ ಸಕಲ ಕ್ರಮ ಕೈಗೊಂಡಿದೆ. ಈ ಗುರಿ ಸಾಧಿಸಲು ಇಂತಹ ಕಿರುಚಿತ್ರವೂ ಸಹಾಯಕವಾಗಲಿದೆ ಎಂದರು.

ಮುಖ್ಯ ಅತಿಥಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರುಇ ಡಿ.ಕಿಶೋರ್ ಬಾಬು ಮಾತನಾಡಿ, ಮತದಾನ ಜಾಗೃತಿಗಾಗಿ ಮಾಧ್ಯಮ ಪ್ರತಿನಿಧಿಗಳು ಬಿಡುಗಡೆಗೊಳಿಸಿರುವ ಕಿರುಚಿತ್ರಗಳು ಮಹತ್ವದ ಎರಡು ಸಂದೇಶಗಳನ್ನು ಹೊಂದಿದೆ. ಮತದಾನ ಕಡ್ಡಾಯ, ಯಾವುದೇ ಆಮೀಷಕ್ಕೆ ಒಳಗಾಗದೆ ಮತದಾನ ಮಾಡುವ ಕುರಿತು ಜನರಿಗೆ ತಿಳಿಯುವ ಹಾಗೇ ಸಂದೇಶಗಳನ್ನು ಒಳಗೊಂಡಿದೆ. ಇದರಿಂದ ಜನ ಪ್ರೇರಿತಗೊಂಡು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾದರೆ ಕಿರುಚಿತ್ರ ನಿರ್ಮಿಸಿರುವುದಕ್ಕೆ ನಿಜಕ್ಕೂ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಲಿನ್‌ ಅತುಲ್‌ ಮಾತನಾಡಿದರು.

ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್, ಪತ್ರಕರ್ತರಾದ ಬಿ.ವೆಂಕಟಸಿಂಗ್, ಬಸವರಾಜ ನಾಗಡದಿನ್ನಿ, ಚನ್ನಬಸವಣ್ಣ, ಗುರುನಾಥ, ಚಿತ್ರ ನಿರ್ದೇಶಕ ವಿಜಯ ಜಾಗಟಗಲ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !