ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೋಟಾ ಚಲಾಯಿಸಲು ನಿರ್ಧಾರ’

Last Updated 19 ಮಾರ್ಚ್ 2019, 15:19 IST
ಅಕ್ಷರ ಗಾತ್ರ

ರಾಯಚೂರು: ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧಿಸಲು ಒತ್ತಾಯಿಸಿ ಹಲವು ಬಾರಿ ಮನವಿ, ಪ್ರತಿಭಟನೆ ಹಾಗೂ ಪಾದಯಾತ್ರೆ ನಡೆಸಿದರೂ ರಾಜಕೀಯ ಪಕ್ಷಗಳು ಸ್ಪಂದಿಸದಿರುವುದರಿಂದ ಲೋಕಸಭೆ ಚುನಾವಣೆಯ ಮತದಾನದಲ್ಲಿ ನೋಟಾ ಚಲಾಯಿಸಲಾಗುತ್ತದೆ ಎಂದು ಮದ್ಯ ನಿಷೇಧ ಆಂದೋಲನದ ಸಂಚಾಲಕಿ ವಿದ್ಯಾಪಾಟೀಲ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮದ್ಯದಿಂದ ಬರುವ ಆದಾಯವನ್ನೇ ಸರ್ಕಾರಗಳು ನೆಚ್ಚಿಕೊಂಡಿವೆ. ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಮಹಿಳೆಯರಿಗೂ ಗೌರವ ನೀಡುತ್ತಿಲ್ಲ. ಅಧಿಕಾರ ಹಿಡಿಯುವ ಸಂವಿಧಾನದ ಆಶಯ ಅನುಷ್ಠಾನಗೊಳಿಸುವ ರಾಜಕಾರಣಿಗಳು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಚಿತ್ರದುರ್ಗದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿದ ಮಹಿಳೆಯರು ಮದ್ಯ ನಿಷೇಧಿಸಲು ಮನವಿ ಮಾಡಿದರೂ ಯಾವೊಬ್ಬ ರಾಜಕಾರಣಿಯೂ ಮನವಿ ಸ್ವೀಕರಿಸಲಿಲ್ಲ. ಆದ್ದರಿಂದ ಮಹಿಳೆಯರು ನೋಟಾ ಚಲಾಯಿಸುವ ಮೂಲಕ ಆಕ್ರೋಶ ತೋರಿಸಲಿದ್ದಾರೆ ಎಂದರು.

ರೇಣುಕಾ, ಮೋಕ್ಷಮ್ಮ, ಬಸಮ್ಮ, ಬಸವರಾಜ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT