ರಾಯಚೂರು: ಸುಮಾರು ಒಂದು ತಿಂಗಳಿಂದ ಇಲ್ಲಿನ ಐತಿಹಾಸಿಕ ಕೋಟೆ ಸ್ವಚ್ಛತೆ ಕಾರ್ಯ ನಡೆಯುತ್ತಿದ್ದು, ಗುರುವಾರ ಈ ಸ್ವಚ್ಛತೆ ಕಾರ್ಯ ಕೈಗೊಂಡ ಸಂದರ್ಭದಲ್ಲಿ ಕಲ್ಲಿನ ಗುಂಡುಗಳು ಹಾಗೂ ಒಂದು ತೋಪು ಪತ್ತೆಯಾಗಿದೆ.

ಬಸವೇಶ್ವರ ವೃತ್ತದ ಹತ್ತಿರ ಇರುವ ಐತಿಹಾಸಿಕ ಕೋಟೆಯ ಬುರ್ಜ್ನ ಸ್ವಚ್ಛತಾ ಕಾರ್ಯ ಗುರು ವಾರ ಮಧ್ಯಾಹ್ನ ಕೈಗೊಂಡ ಅಲ್ಲಿ ಸುಮಾರು ನೂರು ಕಲ್ಲಿನ ಗುಂಡುಗಳು ಪತ್ತೆಯಾಗಿದೆ. ಅದೇ ರೀತಿಯಾಗಿ ಟ್ಯಾಗೋರ ಸ್ಮಾರಕ ಶಿಕ್ಷಣ ಸಂಸ್ಥೆಯ ಕಟ್ಟಡಕ್ಕೆ ಹೊಂದಿಕೊಂಡಂತೆ ಹಾಗೂ ಜೆಸ್ಕಾಂ ಕಚೇರಿ ಕಂಪೌಂಡ್ ಹತ್ತಿರ ಒಂದು ತೋಪು ಪತ್ತೆಯಾಗಿದೆ.
ಕಳೆದ ಒಂದು ತಿಂಗಳ ಹಿಂದೆ ಕೋಟೆ ಸ್ವಚ್ಛತೆ ಕಾರ್ಯ ಆರಂಭಿಸಿದ ಒಂದೆರಡು ದಿನದಲ್ಲಿ ಬಸ್ ನಿಲ್ದಾಣದ ಹತ್ತಿರ ಕೋಟೆಯಲ್ಲಿ ಶಿಲಾಶಾಸನ ಪತ್ತೆ ಆಗಿತ್ತು.

ಕ್ಯಾಶು ಟೆಕ್ ಸಂಸ್ಥೆಯು ಈ ಸ್ವಚ್ಛತಾ ಕಾರ್ಯ ಕೈಗೆತ್ತಿ ಕೊಂಡಿದೆ. ಗುರುವಾರ ಹಠಾತ್ ಈ ಕಲ್ಲುಗುಂಡುಗಳು ಕಾಣಿಸಿಕೊಂಡಾಗ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕ್ಯಾಶುಟೆಕ್ ಸಂಸ್ಥೆಯ ಎಂಜನಿಯರ್ ಪಟ್ಟೇದ್ ಅವರ ಗಮನಕ್ಕೆ ತಂದಿದ್ದಾರೆ. ಈ ಸುದ್ದಿ ತಿಳಿದ ನಗರದ ಜನತೆ ಇವುಗಳ ವೀಕ್ಷಿಸುತ್ತಿದ್ದಾರೆ.ಸ್ವಚ್ಛತಾ ಕಾರ್ಯದಲ್ಲಿ ದೊರಕಿದ, ದೊರಕುತ್ತಿರುವ ವಸ್ತುಗಳನ್ನು ಪ್ರಾಚ್ಯ ವಸ್ತು ಇಲಾಖೆಗೆ ಸಂರಕ್ಷಣೆಗೆ ಒಪ್ಪಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.