ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಸಾಗಿ ಸುರಿದ ಮಳೆ: ಎಪಿಎಂಸಿ ಪ್ರಾಂಗಣದಲ್ಲಿ ನೀರು ಪಾಲಾದ ಈರುಳ್ಳಿ

Last Updated 6 ಸೆಪ್ಟೆಂಬರ್ 2017, 5:58 IST
ಅಕ್ಷರ ಗಾತ್ರ

ರಾಯಚೂರು: ನಗರದಲ್ಲಿ ಮಂಗಳವಾರ ಮಧ್ಯಾಹ್ನ ಅನಿರೀಕ್ಷಿತವಾಗಿ ಸುರಿದ ಬಿರುಸಿನ ಮಳೆಯಿಂದಾಗಿ ಎಪಿಎಂಸಿ ಪ್ರಾಂಗಣದಲ್ಲಿ ಮಾರಾಟಕ್ಕೆ ರೈತರು ರಾಶಿ ಹಾಕಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಈರುಳ್ಳಿ ನೀರು ಪಾಲಾಯಿತು.

ವಿಶಾಲವಾದ ಪ್ರಾಂಗಣಕ್ಕೆ ತಗಡಿನ ಹೊದಿಕೆಗಳಿದ್ದರೂ ಸುತ್ತಮುತ್ತ ಮಳೆನೀರು ಭರ್ತಿಯಾಗಿ ಒಳಗೆ ನುಗ್ಗಿತು. ಮಳೆ ಅರ್ಧಗಂಟೆ ಸುರಿದರೂ  ಜೋರಾಗಿತ್ತು. ಬೆಳಿಗ್ಗೆ ಬಿರುಬಿಸಿಲಿನ ವಾತಾವರಣವಿತ್ತು. ಹೀಗಾಗಿ ರೈತರನ್ನು ಈರುಳ್ಳಿಯನ್ನು ಪ್ರಾಂಗಣದಲ್ಲಿ ಒಣಹಾಕಿದ್ದರು.

ಪ್ರತಿಭಟನೆ: ಅಪಾರ ನಷ್ಟದಿಂದ ಆಕ್ರೋಶಗೊಂಡ ರೈತರು ಎಪಿಎಂಸಿ ಗೇಟ್‌ ಬಂದ್‌ ಮಾಡಿ ಪ್ರತಿಭಟನೆಗೆ ಮುಂದಾದರು. ರೈತ ಸಂಘಟನೆಗಳ ಮುಖಂಡರು ಸ್ಥಳಕ್ಕೆ ಧಾವಿಸಿದ್ದರಿಂದ ಪ್ರತಿಭಟನೆ ಕೆಲ ಹೊತ್ತು ಮುಂದುವರಿಯಿತು. ಆನಂತರ ಎಪಿಎಂಸಿ ಕಾರ್ಯದರ್ಶಿ ರಘುಪತಿ ಭಟ್‌ ಅವರು ಬಂದು ರೈತರ ಅಹವಾಲು ಆಲಿಸಿದರು. ವಿಷಯವನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದ್ದರಿಂದ ರೈತರು ಪ್ರತಿಭಟನೆ ಕೈಬಿಟ್ಟರು. ರಾಯಚೂರು ಜಿಲ್ಲೆ ಸೇರಿದಂತೆ ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಂದ ಬಂದಿದ್ದ ರೈತರು ಈರುಳ್ಳಿಯನ್ನು ಮಾರಾಟ ಮಾಡುವುದಕ್ಕೆ ಕಾದು ಕುಳಿತಿದ್ದರು.

ಶಾಲೆಯಿಂದ ಹೋದ ಮಕ್ಕಳು:
ಮಳೆಯಿಂದಾಗಿ ತಾಲ್ಲೂಕು ಜೇಗರಕಲ್ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಥಿಲಕೋಣೆಗಳಲ್ಲಿ ಸೋರಿಕೆ ಆಯಿತು. ಇದರಿಂದಾಗಿ ವಿದ್ಯಾರ್ಥಿಗಳನ್ನು ಮಂಗಳವಾರ ಮನೆಗೆ ಕಳುಹಿಸಲಾಯಿತು.

‘ಈ ಶಾಲೆಯಲ್ಲಿ 372 ವಿದ್ಯಾರ್ಥಿಗಳು ಇದ್ದಾರೆ. ಸಣ್ಣ ಮಳೆಯಾದರೂ ಕೋಣೆಗಳಲ್ಲಿ ನೀರು ಸೋರುತ್ತದೆ. ದುಃಸ್ಥಿತಿ ಕುರಿತು ಮುಖ್ಯ ಶಿಕ್ಷಕರು ಮೇಲಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಗ್ರಾಮಸ್ಥರು ದೂರಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT