ರಾಯಚೂರು: ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಆಸರೆ ಯೋಜನೆಯಡಿ ಮನೆ ನಿರ್ಮಾಣ ಕಾಮಗಾರಿ ದಾನಿ ಸಂಸ್ಥೆಗಳ ನೆರವಿನಡಿ ಪ್ರಗತಿಯಲ್ಲಿದ್ದು, ಜಿಲ್ಲೆಯಲ್ಲಿ ಉದ್ದೇಶಿತ 13,121 ಮನೆಗಳಲ್ಲಿ ಈವರೆಗೆ 5, 075 ಮನೆ ಪೂರ್ಣಗೊಂಡಿದ್ದು, ಈಗಾಗಲೇ ಕೆಲ ಹಳ್ಳಿಗಳಲ್ಲಿ ಸಂತ್ರಸ್ತರಿಗೆ ಮನೆ ವಿತರಣೆ ಮಾಡಲಾಗಿದೆ.

ಆಸರೆ ಮನೆ ನಿರ್ಮಾಣದಲ್ಲಿ ರಾಯಚೂರು ಜಿಲ್ಲೆ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ. ಕುರವಕಲಾ ಮತ್ತು ಅಗ್ರಹಾರ ಗ್ರಾಮದಲ್ಲಿ ಮಾತಾ ಅಮೃತಾನಂದಮಯಿ ಸಂಸ್ಥೆ ನಿರ್ಮಿಸಿದ 150, ದುಗನೂರು ಗ್ರಾಮದಲ್ಲಿ ತುಳಸಿ ಗೋಪಾಲ ಸಂಸ್ಥೆ ನಿರ್ಮಿಸಿದ 217, ಗೋಡಿಹಾಳ ಗ್ರಾಮದಲ್ಲಿ ಬೆಂಗಳೂರಿನ ಪಿಇಎಸ್ ಮತ್ತು ನಿರ್ಮಿತಿ ಕೇಂದ್ರ ನಿರ್ಮಿಸಿದ 70 ಮನೆ ಸಂತ್ರಸ್ತರಿಗೆ ವಿತರಿಸಲು ಸಿದ್ಧಗೊಂಡಿವೆ.

ಮಾನ್ವಿ ತಾಲ್ಲೂಕಿನ ಉಮಳಿ ಪನ್ನೂರಲ್ಲಿ ಶ್ರೀ ಸಿದ್ಧಗಂಗಾ ಮಠ 190. ಕರಾಬದಿನ್ನಿಯಲ್ಲಿ ಕಮ್ಮವಾರಿ ಸಂಘವು 160, ಕಾತರಕಿಯಲ್ಲಿ ಕಟ್ಟಾ ಪ್ರತಿಷ್ಠಾನವು 270, ಜೂಕೂರಲ್ಲಿ ಕಮ್ಮವಾರಿ ಸಂಘವು 195 ಮನೆ ನಿರ್ಮಿಸಿವೆ. ದೇವದುರ್ಗ ತಾಲ್ಲೂಕಿನಲ್ಲಿ ಅಪ್ರಾಳದಲ್ಲಿ ಬೆಂಗಳೂರಿನ ಸೇವಾ ಭಾರತಿ ಸಂಸ್ಥೆಯು 146 ಮನೆಗಳಲ್ಲಿ 6 ಮನೆ ನಿರ್ಮಿಸಿದೆ. ಸಿಂಧ ನೂರು ತಾಲ್ಲೂಕಿನ ಚಿಂತಮಾನದೊಡ್ಡಿಯಲ್ಲಿ ರಾಮಕೃಷ್ಣ ಆಶ್ರಮವು 130, ಹರತಾನಪುರದಲ್ಲಿ ಕ್ರೈಡಿಲ್ ಸಂಸ್ಥೆ 42, ಪುಲಮೇಶ್ವರ ದಿನ್ನಿಯಲ್ಲಿ ರಾಮಕೃಷ್ಣ ಆಶ್ರಮ 78 ಮನೆ ನಿರ್ಮಿಸಿವೆ.

ಒಟ್ಟು ಜಿಲ್ಲೆಯ ಐದು ತಾಲ್ಲೂಕಿನ 51 ನೆರೆ ಪೀಡಿತ ಗ್ರಾಮಗಳ ಸಂತ್ರಸ್ತರಿಗೆ 13,121 ಮನೆ ನಿರ್ಮಿಸಲಾ ಗುತ್ತಿದ್ದು, ಇದರಲ್ಲಿ 10,303 ಮನೆ ನಿರ್ಮಾಣ ಕಾರ್ಯ ಆರಂಭಗೊಂಡಿದೆ.ಬುನಾದಿ ಹಂತದಲ್ಲಿ 2,929, ಸಜ್ಜಾ ಹಂತದಲ್ಲಿ 1,458, ರೂಫ್ ಹಂತದಲ್ಲಿ 881 ಮನೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಜಿಲ್ಲಾಡಳಿತ ಹೇಳುತ್ತದೆ.

5075 ಮನೆ ಪೂರ್ಣ, ಎಲ್ಲಿ ಎಷ್ಟು: ಒಟ್ಟಾರೆ ಜಿಲ್ಲೆಯಲ್ಲಿ 5075 ಮನೆ ಪೂರ್ಣಗೊಂಡಿವೆ. ಇದರಲ್ಲಿ ಸಿಸ್ಕೋ ಸಂಸ್ಥೆಯು ಕಟಕನೂರು-350, ಚಿಕ್ಕಮಂಚಾಲಿ- 235, ಬಿಚ್ಚಾಲಿ ಕ್ಯಾಂಪ್-260, ಎನ್ ಮಲ್ಕಾಪುರದಲ್ಲಿ -325, ತಲಮಾರಿಯಲ್ಲಿ- 265, ಜಾಗೀರ ವೆಂಕಟಾಪುರ ಗ್ರಾಮದಲ್ಲಿ ಹೋಪ್ ಪ್ರತಿಷ್ಠಾನ ಮತ್ತು ನಿರ್ಮಿತಿ ಕೇಂದ್ರದಿಂದ 150, ಮಾತಾ ಅಮೃತಾನಂದಮಯಿ ಸಂಸ್ಥೆಯಿಂದ ಕುರವಕುರ್ದಾದಲ್ಲಿ 242, ಕುರವಕಲಾ 150, ತುಳಸಿ ಗೋಪಾಲನ್ ಸಂಸ್ಥೆಯಿಂದ ದುಗನೂರಲ್ಲಿ 217, ರಘುನಾಥನಹಳ್ಳಿಯಲ್ಲಿ ಭಾರತಿ ಏರ್ಟೆಲ್ ಮತ್ತು ನಿರ್ಮಿತಿ ಕೇಂದ್ರದಿಂದ 140 ಮನೆ ನಿರ್ಮಿಸಲಾಗಿದೆ.

ಉಪ್ರಾಳದಲ್ಲಿ ತುಳಸಿ ಗೋಪಾಲ ಸಂಸ್ಥೆಯು 203, ಎನ್ ಹನುಮಾಪುರದಲ್ಲಿ ಚಂದ್ರಶೇಖರಸ್ವಾಮೀಜಿ, ಕ್ರೈಡಲ್ ಮತ್ತು ಬೆಂಗಳೂರಿನ ಪಿಇಎಸ್ ಸಂಸ್ಥೆಗಳು 70, ಗುರ್ಜಾಪುರದಲ್ಲಿ ಚಂದ್ರಶೇಖರಸ್ವಾಮೀಜಿಯವರಿಂದ 27, ಡೊಂಗಾರಾಂಪುರದಲ್ಲಿ ಮಾತಾ ಅಮೃತಾನಂದಮಯಿ ಸಂಸ್ಥೆಯಿಂದ 173, ಬುರ್ದಿಪಾಡದಲ್ಲಿ 35, ಸಿದ್ಧಗಂಗಾ ಮಠದಿಂದ ಉಮಳಿ ಪನ್ನೂರಲ್ಲಿ 190, ಕಮ್ಮವಾರಿ ಸಂಘ ದಿಂದ ಕರಾಬದಿನ್ನಿಯಲ್ಲಿ 160, ಕಟ್ಟಾ ಪ್ರತಿಷ್ಠಾನದಿಂದ ಕಾತರಕಿಯಲ್ಲಿ 270, ದದ್ದಲದಲ್ಲಿ ಟಾಟಾ ರಿಲಿಫ್ ಸಂಸ್ಥೆಯಿಂದ 137 ಮನೆ ಪೂರ್ಣಗೊಂಡಿವೆ.

ಕಟ್ಟಾ ಪ್ರತಿಷ್ಠಾನದಿಂದ ಚೀಕಲಪರ್ವಿಯಲ್ಲಿ 220, ದೇವಿಪುರದಲ್ಲಿ 36, ಜೂಕೂರಲ್ಲಿ ಕಮ್ಮವಾರಿ ಸಂಘದಿಂದ 195, ಅರನಹಳ್ಳಿಯಲ್ಲಿ ಹಟ್ಟಿ ಚಿನ್ನದ ಗಣಿ ಸಂಸ್ಥೆಯಿಂದ 22, ಯಡಿವಾಳದಲ್ಲಿ ಸಿಯಾನ್ ಹೋಲ್ಡಿಂಗ್ ಸಂಸ್ಥೆಯಿಂದ 31, ದೇವದುರ್ಗ ತಾಲ್ಲೂಕಿನ ಹಿರೇಕೂಡಗಿಯಲ್ಲಿ ಮಂಗಳೂರಿನ ಎಂಆರ್ಪಿಎಲ್ ಮತ್ತು ಕ್ರೈಡಲ್ ಸಂಸ್ಥೆಯಿಂದ 26, ಸುಳದ ಗುಡ್ಡದಲ್ಲಿ 18, ಗೋವಿಂದಪಲ್ಲಿಯಲ್ಲಿ ಬೆಂಗಳೂರು ಮೆಟ್ರೋ ಕಾರ್ಪೋರೇಶನ್ನಿಂದ 6, ಅಪ್ರಾಳದಲ್ಲಿ ಸೇವಾ ಭಾರತಿ ಸಂಸ್ಥೆಯಿಂದ 52, ವೀರಗೋಟಾದಲ್ಲಿ ಎಂಆರ್ಪಿಎಲ್ ಮತ್ತು ಕ್ರೈಡಲ್ ಸಂಸ್ಥೆಯಿಂದ 65 ಮತ್ತು ಕರ್ಕಿಹಳ್ಳಿಯಲ್ಲಿ 33 ಮನೆ ನಿರ್ಮಿಸಲಾಗಿದೆ.

ಮೆದರಗೋಳದಲ್ಲಿ ಹಟ್ಟಿ ಚಿನ್ನದ ಗಣಿ ಸಂಸ್ಥೆಯು 2, ಹೇರುಂಡಿಯಲ್ಲಿ 38, ಲಿಂಗಸುಗೂರು ತಾಲ್ಲೂಕಿನ ಕಾಳಾಪುರದಲ್ಲಿ ಟಾಟಾ ರಿಲೀಫ್ ಸಂಸ್ಥೆಯು 36, ಚಿಕ್ಕ ಉಪ್ಪೇರಿಯಲ್ಲಿ ಹಟ್ಟಿ ಚಿನ್ನದ ಗಣಿ ಸಂಸ್ಥೆಯಿಂದ 35, ಸಿಂಧನೂರು ತಾಲ್ಲೂಕಿನ ಹುಲಗುಂಚಿಯಲ್ಲಿ ಬೆಂಗಳೂರಿನ ಬಿಇಎಂಎಲ್ ಮತ್ತು ಕ್ರೈಡಲ್ನಿಂದ 30 ಹಾಗೂ ಹೆಡಗಿನಾಳದಲ್ಲಿ 61, ಚಿಂತಮಾನದೊಡ್ಡಿಯಲ್ಲಿ ರಾಮಕೃಷ್ಣ ಆಶ್ರಮದಿಂದ 133, ಒಳಬಳ್ಳಾರಿಯಲ್ಲಿ ಆದಿ ಚುಂಚನಗಿರಿ ಮಹಾ ಸಂಸ್ಥಾನದಿಂದ 181, ಹರತಾನಪುರದಲ್ಲಿ ಕ್ರೈಡಲ್ನಿಂದ 42, ಪುಲಮೇಶ್ವರ ದಿನ್ನಿ ಗ್ರಾಮದಲ್ಲಿ ರಾಮಕೃಷ್ಣ ಆಶ್ರಮದಿಂದ 78 ಮನೆ ಸೇರಿದಂತೆ ಒಟ್ಟು 5,075 ಮನೆ ಪೂರ್ಣಗೊಂಡಿವೆ.

ರಾಯಚೂರು ಮತ್ತು ಸಿಂಧನೂರು ಮತ್ತು ಮಾನ್ವಿ ತಾಲ್ಲೂಕಿನಲ್ಲಿ ಆಸರೆ ಮನೆ ನಿರ್ಮಾಣ ಕಾಮಗಾರಿ ಮುಂಚೂಣಿಯಲ್ಲಿದ್ದರೆ, ದೇವದುರ್ಗ ಮತ್ತು ಲಿಂಗಸುಗೂರು ತಾಲ್ಲೂಕಿನಲ್ಲಿ ಆಮೆ ವೇಗದಲ್ಲಿ ಕಾಮಗಾರಿ ನಡೆದಿದೆ. ನೆರೆ ಸಂತ್ರಸ್ತರು ಮನೆಗಾಗಿ ಚಾತಕ ಪಕ್ಷಿಯಂತೆ ಕಾಯುವ ಸ್ಥಿತಿ ಎದುರಾಗಿದೆ. ಒಂದೇ ವರ್ಷದಲ್ಲಿ ಮನೆ ನಿರ್ಮಿಸಿ ಕೊಡುವ ಭರವಸೆಯನ್ನು ಸರ್ಕಾರ ನೀಡಿತ್ತು. ಈ ಮಳೆಗಾಲಕ್ಕೆ ಮುನ್ನವಾದರೂ ಮನೆ ದೊರಕಿಸಿದರೆ ಸಹಾಯವಾಗುತ್ತದೆ ಎಂಬುದು ಇಲ್ಲಿನ ಸಂತ್ರಸ್ತರ ಬೇಡಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.