ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

113 ನಾಮಪತ್ರ ಸಿಂಧು, 2 ತಿರಸ್ಕೃತ

ನಾಮಪತ್ರ ಹಿಂಪಡೆಯಲು ಶುಕ್ರವಾರ ಕಡೆಯ ದಿನ
Last Updated 26 ಏಪ್ರಿಲ್ 2018, 12:34 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳ ಪರಿಶೀಲನೆ ಕಾರ್ಯ ಬುಧವಾರ ನಡೆಯಿತು. ಮಳವಳ್ಳಿ, ಹಾಗೂ ಕೆ.ಆರ್‌.ಪೇಟೆ ಕ್ಷೇತ್ರಗಳಲ್ಲಿ ತಲಾ ಒಂದು ಸೇರಿ 2 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದ್ದು ಅಂತಿಮವಾಗಿ 113 ಅಭ್ಯರ್ಥಿಗಳ ನಾಮಪತ್ರಗಳು ಸಿಂಧುವಾಗಿವೆ.

ಮಂಡ್ಯ ವಿಧಾನಸಭಾ ಕ್ಷೇತ್ರ: ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಉಮೇದುವಾರಿಕೆ ಸಲ್ಲಿಸಿದ್ದ ಎಲ್ಲ 18 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ಕಾಂಗ್ರೆಸ್‌ ಪಿ.ರವಿಕುವಮಾರ್, ಬಿಜೆಪಿಯಿಂದ ಎನ್‌.ಶಿವಣ್ಣ, ಜೆಡಿಎಸ್‌ನಿಂದ ಎಂ.ಶ್ರೀನಿವಾಸ್, ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಅಭ್ಯರ್ಥಿಯಾಗಿ ಬಿ.ಎಸ್ಶಿವಕುಮಾರ್, ಎಂಇಪಿಯಿಂದ ಕಾವೇರಿ ಶ್ರೇಯಾ ಎಂ.ಜೆ, ಪಕ್ಷೇತರ ಆಭ್ಯರ್ಥಿಗಳಾಗಿ ಮಂಜುನಾಥ್ ಎಸ್.ಜೆ, ಡಾ. ಎಸ್.ಸಿ.ಶಂಕರೇಗೌಡ, ಎಂ.ಬಿ.ನಾಗಣ್ಣ, ಹರೀಶ ಹೆಚ್.ಎನ್, ರಾಜೇಶ, ಕೃಷ್ಣ ಸಿ.ಎಂ, ಹೆಚ್.ಬಿ.ರಾಮು, ಎಂ.ಸಿ ನಿತ್ಯಾನಂದ, ಸಿದ್ದರಾಮೇಗೌಡ, ಕೆ.ಮಲ್ಲೇಶ, ಉಮೇಶ್ ಚಂದ, ಬೋರಯ್ಯ ಹಾಗೂ ಶಿವರಾಮು ಎಚ್.ಸಿ ಅವರ ನಾಮಪತ್ರಗಳು ಕ್ರಮಬದ್ಧವಾಗಿವೆ.

ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರ: ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಒಂದು ನಾಮಪತ್ರ ತಿರಸ್ಕೃತಗೊಂಡಿದೆ. ಅಂತಿಮವಾಗಿ 15 ಅಭ್ಯರ್ಥಿಗಳ ಉಮೇದುವಾರಿಕೆ ಸಿಂಧುವಾಗಿವೆ. ಜೆಡಿಎಸ್‌ನಿಂದ ಕೆ.ಸಿ.ನಾರಾಯಣಗೌಡ, ಕಾಂಗ್ರೆಸ್‌ನಿಂದ ಕೆ.ಬಿ.ಚಂದ್ರಶೇಖರ್, ಬಿಜೆಪಿಯಿಂದ ಬಿ.ಸಿ.ಮಂಜು, ಕರ್ನಾಟಕ ಪ್ರಜ್ಞಾವಂತ ಪಕ್ಷದ ಆಭ್ಯರ್ಥಿಯಾಗಿ ಎ.ಸಿ.ಕಾಂತ, ಪಕ್ಷೇತರ ಆಭ್ಯರ್ಥಿಗಳಾಗಿ ಎಲ್.ಆರ್.ರವಿಕುಮಾರ್, ಲೋಕೆಶ್ ಬಿ.ಎನ್, ಕುಮಾರ, ಮಂಜುಳ, ಪುಟ್ಟಣ್ಣ ಎಸ್.ಗೌಡ, ಆರ್.ಜಗದೀಶ್, ಶಂಕರೇಗೌಡ.ಕೆ.ಎನ್, ಬಿ.ಪ್ರಕಾಶ್, ಅಶೋಕ, ಎ.ಆರ್.ರಘು, ಬಿ.ಎಲ್.ದೇವರಾಜು ಸಲ್ಲಿಸಿರುವ ನಾಮಪತ್ರಗಳು ಕ್ರಮಬದ್ಧವಾಗಿವೆ.

ಮದ್ದೂರು ವಿಧಾನಸಭಾ ಕ್ಷೇತ್ರ: ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಉಮೇದುವಾರಿಕೆ ಸಲ್ಲಿಸಿದ್ದ ಎಲ್ಲ 17 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ಜೆಡಿಎಸ್‌ ಅಭ್ಯರ್ಥಿಯಾಗಿ ಡಿ.ಸಿ.ತಮ್ಮಣ್ಣ, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಜಿ.ಎಂ.ಮಧು, ಬಿಜೆಪಿಯಿಂದ ಎಂ.ಸತೀಶ್, ಹಿಂದೂಸ್ಥಾನ್ ಜನತಾ ಪಕ್ಷದಿಂದ ಎಂ.ಪಿ.ಮುನವರ್ ಷರೀಪ್, ಮಹಿಳಾ ಎಂಪವರ್‌ಮೆಂಟ್‌ ಪಕ್ಷದಿಂದ ಹೀನಾ ಕೌಸರ್, ರಾಷ್ಟ್ರೀಯ ಮಾನವ ವಿಕಾಸ ಪಕ್ಷದಿಂದ ವಿಶ್ವನಾಥ್ ರಾವ್, ಸ್ವರಾಜ್ ಇಂಡಿಯಾ ಪಕ್ಷದಿಂದ ಎಸ್‌.ಎಚ್‌.ಲಿಂಗೇಗೌಡ, ಫೆಡರಲ್ ಕಾಂಗ್ರೆಸ್ ಆಫ್ ಇಂಡಿಯಾ ಪಕ್ಷದಿಂದ ಡಾ.ಮನೋಜಿತ್ ಎಸ್.ಎಸ್, ಡಾ ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಆಭ್ಯಥರ್ಿಯಾಗಿ ವೆಂಕಟೇಶ.ಬಿ, ಪಕ್ಷೇತರ ಆಭ್ಯರ್ಥಿಯಾಗಿ ಮಹೇಶ್ ಕುಮಾರ್ ಪಿ.ಎಸ್, ಶಿವಮಾದೇಗೌಡ, ಜಾವೀದ್ ಖಾನ್, ಚೇತನ್.ಬಿ, ಚಿಕ್ಕನಂಜಾಚಾರಿ, ಎನ್.ಸಿ ಪುಟ್ಟರಾಜು, ವೆಂಕಟೇಶ ಹಾಗೂ ಮಹೇಶ್.ಎಸ್ ಅವರು ಸಲ್ಲಿಸಿರುವ ನಾಮಪತ್ರಗಳು ಕ್ರಮಬದ್ಧವಾಗಿವೆ.

ಮಳವಳ್ಳಿ ವಿಧಾನಸಭಾ ಕ್ಷೇತ್ರ: ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಒಂದು ನಾಮಪತ್ರ ತಿರಸ್ಕೃತವಾಗಿದೆ. ಅಂತಿಮವಾಗಿ 15 ಅಭ್ಯರ್ಥಿಗಳ ಉಮೇದುವಾರಿಕೆ ಸಿಂಧುವಾಗಿವೆ. ಕಾಂಗ್ರೆಸ್‌ನಿಂದ ಎಂ.ಪಿ.ನರೇಂದ್ರ ಸ್ವಾಮಿ, ಜೆಡಿಎಸ್‌ನಿಂದ ಡಾ. ಕೆ.ಅನ್ನದಾನಿ, ಬಿಜೆಪಿಯಿಂದ ಬಿ.ಸೋಮಶೇಖರ್, ರಾಷ್ಟ್ರೀಯ ಮಹಿಳಾ ಸರ್ವೋದಯ ಕಾಂಗ್ರೇಸ್ ಅಭ್ಯರ್ಥಿಯಾಗಿ ಎಂ.ಕೃಷ್ಣಮೂರ್ತಿ, ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ ನೀಲಮ್ಮ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದಿಂದ ಮಂಟ್ಯಲಿಂಗು, ಲೋಕ ಆವಾಜ್ ದಳದಿಂದ ಎಂ.ಕೆ.ವಿದ್ಯಾ, ಎಂಇಪಿಯಿಂದ ವಿಶ್ವನಾಥ್ ಜಿ.ಎಸ್, ರಾಷ್ಟ್ರೀಯ ಮಾನವ ವಿಕಾಸ ಪಕ್ಷದಿಂದ ಟಿ.ಸಿ.ವೆಂಕಟೇಶ್, ಇಂಡಿಯನ್ ನ್ಯೂ ಕಾಂಗ್ರೇಸ್ ಪಾರ್ಟಿಯಿಂದ ಎಂ.ಎಸ್ ಶಶಿಕುಮಾರ್, ಪಕ್ಷೇತರ ಆಭ್ಯರ್ಥಿಗಳಾಗಿ ಹೆಚ್.ಡಿ.ದೇವಪ್ರಸಾದ್, ಎಂ.ನಂಜಪ್ಪ, ಹೆಚ್.ಮಹದೇವ, ಟಿ.ಎನ್ .ಸತೀಶ್ ಕುಮಾರ್ ಹಾಗೂ ಆರ್.ಸಿದ್ದರಾಜು ಅವರು ಸಲ್ಲಿಸಿರುವ ನಾಮಪತ್ರಗಳು ಕ್ರಮಬದ್ಧವಾಗಿವೆ.

ಮೇಲುಕೋಟೆ ವಿಧಾನಸಭಾ ಕ್ಷೇತ್ರ: ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಉಮೇದುವಾರಿಕೆ ಸಲ್ಲಿಸಿದ್ದ ಎಲ್ಲ 18 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ಜೆಡಿಎಸ್‌ನಿಂದ ಸಿ.ಎಸ್.ಪುಟ್ಟರಾಜು, ಬಿಜೆಪಿಯಿಂದ ಸುಂಡಹಳ್ಳಿ ಸೋಮಶೇಖರ, ಸ್ವರಾಜ್‌ ಇಂಡಿಯಾ ಪಕ್ಷದ ಅಭ್ಯರ್ಥಿಯಾಗಿ ದರ್ಶನ್ ಪುಟ್ಟಣ್ಣಯ್ಯ, ಜನ ಸಾಮಾನ್ಯರ ಪಾರ್ಟಿಯಿಂದ ಮಹೇಶ, ಎ.ಐ.ಎಂ.ಇ.ಪಿ ಪಕ್ಷದಿಂದ ಮಹೇಶ್, ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿಯಾಗಿ ಜಿ.ಎಂ.ರಮೇಶ್, ಸಮಾಜವಾಧಿ ಪಕ್ಷದಿಂದ ರೋಹಿಣಿ, ಪ್ರಜ್ಞಾವಂತ ಜನತಾ ಪಕ್ಷದಿಂದ ಆರ್.ಎಸ್ ಹನುಮಂತೇಗೌಡ, ಪಕ್ಷೇತರ ಆಭ್ಯರ್ಥಿಗಳಾಗಿ ಅರುಣ್ ಕುಮಾರ್, ಕೆ.ಎಸ್.ದರ್ಶನ್, ಎಚ್.ನಾರಯಣ, ಪುಟ್ಟರಾಜು, ಬಿ.ಕೆ.ಪುಟ್ಟರಾಜು, ಎಂ.ರಮೇಶ, ಡಿ.ಕೆ.ರವಿಕುಮಾರ್, ಜೆ.ಶಿವಲಿಂಗೇಗೌಡ, ಸಿ.ಸುಬ್ರಮಣ್ಯ, ಪಿ.ವಿ.ಸುಂದರಮ್ಮ, ಅವರು ಸಲ್ಲಿಸಿರುವ ನಾಮಪತ್ರಗಳು ಕ್ರಮ ಬದ್ಧವಾಗಿವೆ.

ಶ್ರೀರಂಗಪಟ್ಟಣ ಕ್ಷೇತ್ರ:ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಉಮೇದುವಾರಿಕೆ ಸಲ್ಲಿಸಿದ್ದ ಎಲ್ಲ 17 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ಬಿಜೆಪಿಯಿಂದ ಕೆ.ಎಸ್.ನಂಜುಂಡೇಗೌಡ, ಕಾಂಗ್ರೆಸ್‌ನಿಂದ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಜೆಡಿಎಸ್‌ನಿಂದ ಎ.ಎಸ್.ರವೀಂದ್ರ, ಎ.ಐ.ಎಂ.ಇ.ಪಿಯಿಂದ ಸುರೇಶ್.ವಿ, ಆಮ್ ಆದ್ಮಿ ಪಕ್ಷದಿಂದ ಸಿ.ಎಸ್.ವೆಂಕಟೇಶ್, ಪ್ರಜಾ ಪರಿವರ್ತನಾ ಪಕ್ಷದಿಂದ ಸತೀಶ್ ಎಚ್.ಎಂ, ರಾಷ್ಟ್ರೀಯ ಮಾನವ ವಿಕಾಸ ಪಕ್ಷದಿಂದ ಎಸ್.ವೆಂಕಟೇಶ್, ಪಕ್ಷೇತರ ಆಭ್ಯರ್ಥಿಗಳಾಗಿ ಕೆ.ಉದಯ್ ಕುಮಾರ್, ಕೆಂಪೇಗೌಡ, ಪಿ.ಎಚ್.ಚಂದ್ರಶೇಖರ್, ಚಿದಂಬರ ಎಂ.ಸಿ, ಎಂ.ಎಂ.ಮಹೇಶ ಗೌಡ, ಮೋಹನ್ ಕುಮಾರ್, ಎಸ್.ಎಸ್.ರಾಜಶೇಖರಯ್ಯ, ಸಿ.ಲಿಂಗೇಗೌಡ, ಸಿದ್ದಯ್ಯ, ಹಾಗೂ ಸಿ.ಹೇಮಂತ್ ಕುಮಾರ್ ಅವರು ಸಲ್ಲಿಸಿರುವ ನಾಮಪತ್ರಗಳು ಕ್ರಮ ಬದ್ಧವಾಗಿವೆ.

ನಾಗಮಂಗಲ ವಿಧಾನಸಭಾ ಕ್ಷೇತ್ರ: ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಉಮೇದುವಾರಿಕೆ ಸಲ್ಲಿಸಿದ್ದ ಎಲ್ಲ 13 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿವೆ. ಕಾಂಗ್ರೆಸ್‌ನಿಂದ ಎನ್.ಚಲುವರಾಯಸ್ವಾಮಿ, ಬಿಜೆಪಿಯಿಂದ ಡಾ.ಪಾರ್ಥಸಾರಥಿ.ವಿ, ಜೆಡಿಎಸ್‌ನಿಂದ ಸುರೇಶ್ ಗೌಡ,

ಕರ್ನಾಟಕ ಜನತಾ ಪಕ್ಷದ ಆಭ್ಯರ್ಥಿಯಾಗಿ ಬಿ.ಎಸ್.ಗೌಡ, ಎ.ಐ.ಎಂ.ಇ.ಪಿ ಪಕ್ಷದಿಂದ ವಸೀಂ ಉಲ್ಲಾ ಖಾನ್, ಪಕ್ಷೇತರ ಆಭ್ಯರ್ಥಿಗಳಾಗಿ ಎನ್.ಎಸ್.ಅಶೋಕ, ಬಿ.ಕೆ ಗಂಗಾಧರ, ಎಲ್.ಜಯರಾಮೇಗೌಡ, ಬಿ.ವಿ.ಧರಣೇಂದ್ರಬಾಬು, ಡಿ.ಆರ್.ಮಂಜುನಾಥ್, ಅ ಯಡವನಹಳ್ಳಿ ಪಿ.ಸಿ.ಕೃಷ್ಣೇಗೌಡ, ರುಕ್ಮಿಣಿ ಹಾಗೂ ವೆಂಕಟೇಶ ಅವರ ನಾಮಪತ್ರಗಳು ಕ್ರಮಬದ್ಧವಾಗಿವೆ.

ತಿರಸ್ಕೃತಗೊಂಡವರು

ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದ ಮಹಿಳಾ ಎಂಪವರ್‌ಮೆಂಟ್‌ ಪಾರ್ಟಿ ಆಭ್ಯರ್ಥಿ ದಿವಾಕರ ಅವರ ನಾಮಪತ್ರ ತಿರಸ್ಕೃತವಾಗಿದೆ. ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮಹಾದೇವಮ್ಮ ಅವರ ನಾಮಪತ್ರ ತಿರಸ್ಕೃತಗೊಮಂಡಿದೆ. ನಾಮಪತ್ರ ಸಲ್ಲಿಸುವಾಗ ಅಗತ್ಯ ದಾಖಲಾತಿ ಸಲ್ಲಿಸಲು ವಿಫಲರಾಗಿರುವ ಕಾರಣ ಇವರಡು ಕ್ಷೇತ್ರದ ಅಭ್ಯರ್ಥಿಗಳ ನಾಮಪತ್ರಗಳು ಅಸಿಂಧುಗೊಂಡಿವೆ.

ನಿಟ್ಟುಸಿರು ಬಿಟ್ಟ ದರ್ಶನ್‌!

ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸ್ವರಾಜ್‌ ಇಂಡಿಯಾ ಪಕ್ಷದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ಅವರ ಉಮೇದುವಾರಿಕೆ ಬಗ್ಗೆ ಗೊಂದಲ ಸೃಷ್ಟಿಯಾಗಿತ್ತು. ಈ ಬಗ್ಗೆ ಕ್ಷೇತ್ರದಲ್ಲಿ ಸಾಕಷ್ಟು ಗಾಳಿ ಸುದ್ದಿಗಳು ಹರಡಿದ್ದವು. ಅವರು ಅಮೆರಿಕ ಪೌರತ್ವ ಪಡೆದಿದ್ದಾರೆ. ಹೀಗಾಗಿ ನಾಮಪತ್ರ ತಿರಸ್ಕೃತಗೊಳ್ಳಲಿದೆ ಎಂಬ ಸುದ್ದಿ ಹರಡಿತ್ತು. ನಂತರ ಅವರ ವಕೀಲರು ದರ್ಶನ್‌ ಅಮೆರಿಕ ಪೌರತ್ವ ಪಡೆದಿಲ್ಲ ಎಂದು ಸ್ಪಷ್ಟ ಪಡಿಸಿದ್ದರು.

ಆದರೂ ಪುಟ್ಟಣ್ಣಯ್ಯ ಅವರ ಪತ್ನಿ ಸುನೀತಾ ಪುಟ್ಟಣ್ಣಯ್ಯ ಅವರು ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದರು. ಅಂತಿಮವಾಗಿ ದರ್ಶನ್‌ ನಾಮಪತ್ರ ಸಿಂಧುವಾಗಿದ್ದು ಸ್ವರಾಜ್‌ ಇಂಡಿಯಾ ಪಕ್ಷದ ಮುಖಂಡರು ನಿಟ್ಟುಸಿರು ಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT