ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಎಂ ಸ್ಕಿಮ್ಮಿಂಗ್‌: ಇಬ್ಬರು ವಿದೇಶಿಗರ ಬಂಧನ

Last Updated 25 ಫೆಬ್ರುವರಿ 2020, 15:23 IST
ಅಕ್ಷರ ಗಾತ್ರ

ರಾಮನಗರ: ಎಟಿಎಂ ಸ್ಕಿಮ್ಮಿಂಗ್‌ ಮೂಲಕ ಗ್ರಾಹಕರ ಹಣ ತೋಚುತ್ತಿದ್ದ ತಾಂಜೇನಿಯಾದ ಇಬ್ಬರು ಖದೀಮರನ್ನು ಮಾಗಡಿ ತಾಲ್ಲೂಕಿನ ಕುದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಲೆಕ್ಸ್‌ ಮ್ಯಾಡ್ರೆಡ್‌ ಮಸಕೆ (24) ಹಾಗೂ ಜಾರ್ಜ್ ಜೀನ್ಸ್‌ ಅಸ್ಸೆ (24) ಬಂಧಿತರು. ಈ ಇಬ್ಬರು ಬೆಂಗಳೂರಿನಲ್ಲಿ ವಾಸವಿದ್ದರು. ವಿದ್ಯಾರ್ಥಿ ವೀಸಾದಡಿ ಇಲ್ಲಿಗೆ ಬಂದಿದ್ದ ಆರೋಪಿಗಳು ಮೋಜು–ಮಸ್ತಿಯ ಸಲುವಾಗಿ ಇತರ ಆಫ್ರಿಕನ್‌ ಸ್ನೇಹಿತರ ಜೊತೆಗೂಡಿ ಕಳ್ಳತನಕ್ಕೆ ಇಳಿದಿದ್ದರು. ಎಟಿಎಂಗಳಲ್ಲಿ ಸ್ಕಿಮ್ಮರ್ ಯಂತ್ರಗಳನ್ನು ಅಳವಡಿಸಿ ಗ್ರಾಹಕರ ಕಾರ್ಡ್‌ ಹಾಗೂ ಪಿನ್‌ ಮಾಹಿತಿ ಕದ್ದು, ಬಳಿಕ ನಕಲಿ ಕಾರ್ಡ್‌ಗಳನ್ನು ತಯಾರಿಸಿ ಹಣ ಡ್ರಾ ಮಾಡಿ ವಂಚಿಸುತ್ತಿದ್ದರು ಎಂದು ಎಸ್ಪಿ ಅನೂಪ್‌ ಶೆಟ್ಟಿ ತಿಳಿಸಿದರು.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಒಂದು ಕಾರ್‌, ಎರಡು ಬೈಕ್‌, ಒಂದು ಲ್ಯಾಪ್‌ಟಾಪ್, ಮೊಬೈಲ್‌ಗಳು, ನಕಲಿ ಎಟಿಎಂ ಕಾರ್ಡ್‌ ಹಾಗೂ ಸ್ಕಿಮ್ಮರ್‌ ಸಾಧನ ವಶಕ್ಕೆ ಪಡೆದಿದ್ದಾರೆ. ತಲೆಮರಿಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ಶೋಧ ನಡೆದಿದೆ.

ಬೆಳಕಿಗೆ ಬಂದಿದ್ದು ಹೇಗೆ?: ಕುದೂರು ಹೋಬಳಿಯ ಗೊಲ್ಲಹಳ್ಳಿ ನಿವಾಸಿ ಶಿವಕುಮಾರ್ ಕೆನರಾ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದಾರೆ. ಎಟಿಎಂ ಕಾರ್ಡ್‌ ತಮ್ಮ ಬಳಿಯೇ ಇದ್ದರೂ ಯಾರೋ ಹಣ ಡ್ರಾ ಮಾಡಿದ್ದಾರೆ ಎಂದು ದೂರಿ 2019ರ ಅಕ್ಟೋಬರ್‌ 31ರಂದು ಅವರು ದೂರು ನೀಡಿದ್ದರು. ಪೊಲೀಸರು ತನಿಖೆ ಕೈಗೊಂಡ ಸಂದರ್ಭ ಕುದೂರಿನ ಎಟಿಎಂನಲ್ಲಿ ಆರೋಪಿಗಳು ಸ್ಕಿಮ್ಮರ್‌ ಯಂತ್ರ ಅಳಡಿಸಿದ್ದು ಕಂಡು ಬಂದಿತ್ತು.

ಡಿವೈಎಸ್ಪಿ ಲಕ್ಷ್ಮಿ ನಾರಾಯಣ ನೇತೃತ್ವದಲ್ಲಿ ಮಾಗಡಿ ಸಿಪಿಐ ರವಿಕುಮಾರ್, ಇನ್‌ ಸ್ಪೆಕ್ಟರ್‌ ಶಿವಶಂಕರ್, ಕುದೂರು ಎಸ್‌ಐ ಮುಂಜುನಾಥ್ ಹಾಗೂ ಸಿಬ್ಬಂದಿ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT