ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂ. ಗ್ರಾಮಾಂತರ ಲೋಕಸಭಾ ಕ್ಷೇತ್ರ| ಮಂಜುನಾಥ್‌ ಗೆಲುವು: ಹರಕೆ ತೀರಿಸಿದ ಅಭಿಮಾನಿ

Published 17 ಜೂನ್ 2024, 6:01 IST
Last Updated 17 ಜೂನ್ 2024, 6:01 IST
ಅಕ್ಷರ ಗಾತ್ರ

ಕನಕಪುರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್‌.ಮಂಜುನಾಥ್‌ ಗೆಲುವಿಗಾಗಿ ಕಬ್ಬಾಳಮ್ಮ ದೇವಿಗೆ ಹರಕೆ ಹೊತ್ತಿದ್ದ ಕಂಚನಹಳ್ಳಿ ಮಂಚೇಗೌಡ ಭಾನುವಾರ ಕಬ್ಬಾಳಮ್ಮನ ಸೇವೆ ನಡೆಸಿ ಹರಕೆ ತೀರಿಸದರು.

ಸಾತನೂರು ಹೋಬಳಿ ಕಂಚನಹಳ್ಳಿ ಗ್ರಾಮದ ಜೆಡಿಎಸ್‌ ಮುಖಂಡ ಮಂಚೇಗೌಡ ಹರಕೆ ತೀರಿಸಿದ ಕ್ಷಣಕ್ಕೆ ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಕೂಡ ಸಾಕ್ಷಿಯಾದರು. 

ಜೆಡಿಎಸ್‌ ಮತ್ತು ಬಿಜೆಪಿ ಮುಖಂಡರು ಮೆರವಣಿಗೆಯಲ್ಲಿ  ಮಂಜುನಾಥ್‌ ಅವರನ್ನು ಕರೆ ತಂದರು.  

ಜೆಡಿಎಸ್‌ ತಾಲ್ಲೂಕು ಅಧ್ಯಕ್ಷ ಬಿ.ನಾಗರಾಜು, ಮಾಜಿ ಅಧ್ಯಕ್ಷ ಸಿದ್ದಮರೀಗೌಡ, ಪುಟ್ಟರಾಜು, ಕಬ್ಬಾಳೇಗೌಡ, ಕುರಬಳ್ಳಿ ರಾಜೇಶ‌್, ಮಂಚೇಗೌಡ, ಸಣ್ಣಪ್ಪ, ಚಂದ್ರು ಸಾತನೂರು, ಕಾಡಹಳ್ಳಿ ಅನುಕುಮಾರ್, ಮಾದೇಗೌಡ, ಬೋಮ್ಮೇಗೌಡ, ಕಾಳೇಗೌಡ, ಪಂಚಲಿಂಗೇಗೌಡ, ಯೂನಿಸ್‌ ಅಲಿಕಾನ್‌, ಶಂಕರ್‌, ಮನು, ಮದೇವಣ್ಣ, ಸೋಮಶೇಖರ್, ರಾಜು, ಪ್ರವೀಣ್, ಲೋಕೆಶ್‌, ಕಂಚನಹಳ್ಳಿ ಎಚ್‌ಡಿಕೆ ಅಭಿಮಾನಿಗಳ ಸಂಘದ   ಸದಸ್ಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT