ಸೋಮವಾರ, ನವೆಂಬರ್ 18, 2019
27 °C

ಕಾರು ಡಿಕ್ಕಿ: ಸ್ಕೂಟರ್‌ ಹಿಂಬದಿ ಸವಾರ ಸಾವು

Published:
Updated:

ಮಾಗಡಿ: ಬಜಾಜ್‌ ಸ್ಕೂಟರ್‌ಗೆ ಇಂಡಿಕಾ ಕಾರು ಡಿಕ್ಕಿ ಹೊಡೆದು ಹಿಂಬದಿ ಸವಾರ ಸ್ಥಳದಲ್ಲಿಯೇ ಮೃತ ಪಟ್ಟಿರುವ ಘಟನೆ ಗೆಜಗಾರುಗುಪ್ಪೆ ಮತ್ತು ಬೆಳಗವಾಡಿ ಸಂಪರ್ಕ ರಸ್ತೆಯಲ್ಲಿ ನಡೆದಿದೆ.

ಮೃತರನ್ನು ವಿರುಪಸಂದ್ರದ ಚಿಕ್ಕತಿಮ್ಮಯ್ಯ ಅವರ ಪುತ್ರ ರಾಜು(32) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಸ್ಕೂಟರ್‌ ಸವಾರ ಮನೋಹರ (31) ಅವರ ಕಾಲು ಮುರಿದಿದೆ. ಗೆಜಗಾರುಗುಪ್ಪೆಯಲ್ಲಿ ಸಂಬಂಧಿಕರ ಮದುವೆ ಮುಗಿಸಿಕೊಂಡು ಸ್ವಗ್ರಾಮಕ್ಕೆ ಹಿಂತಿರುವಾಗ ಅಪಘಾತ ನಡೆದಿದೆ. ಪಿಎಸ್‌ಐ ಟಿ.ವೆಂಕಟೇಶ್‌ ಪ್ರಕರಣ ದಾಖಲಿಸಿದ್ದಾರೆ.

ಮನವಿ: ಗೆಜಗಾರುಗುಪ್ಪೆ –ಬೆಳಗವಾಡಿ ಸಂಪರ್ಕ ರಸ್ತೆ ಬದಿ ಪೊದೆಗಳು ಬೆಳೆದು ನಿಂತಿವೆ. ಈ ತಿರುವಿನಲ್ಲಿ ಎದುರಿನಿಂದ ಬರುವ ವಾಹನಗಳು ಕಾಣಿಸದೆ ಅಪಘಾತ ನಡೆಯುತ್ತಿವೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪೊದೆ ಕತ್ತರಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಚಿರತೆ ದಾಳಿಯಿಂದಾಗಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರೆ 75ರ ಲಕ್ಕೇನಹಳ್ಳಿ ಗೇಟ್‌ ಬಳಿ ಗುರುವಾರ ನಡೆದಿದೆ. ಮೃತರನ್ನು ಜಯಮ್ಮ(55) ಎಂದು ಗುರುತಿಸಲಾಗಿದೆ. ಬಸ್‌ನಿಲ್ದಾಣದಲ್ಲಿ ಮಲಗುತ್ತಿದ್ದ ಅವರು ಅನಾಥೆ. ನೆರೆಹೊರೆಯವರು ನಿತ್ಯ ಆಹಾರ ನೀಡುತ್ತಿದ್ದರು. ಗುರುವಾರ ಸಂಜೆ ಚಿರತೆ ಅವರನ್ನು ಪೊದೆಗೆ ಎಳೆದೊಯ್ದು ದಾಳಿ ನಡೆಸಿದೆ.

ಪ್ರತಿಕ್ರಿಯಿಸಿ (+)