ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಡದಿ: ಬಾಯಲ್ಲಿ ನೀರೂರಿಸುವ ಪೋರ್ಕ್ ಮಸಾಲ

ಯೋಗಾನಂದ ಬಿ. ಎನ್
Published 4 ಆಗಸ್ಟ್ 2024, 4:39 IST
Last Updated 4 ಆಗಸ್ಟ್ 2024, 4:39 IST
ಅಕ್ಷರ ಗಾತ್ರ

ಬಿಡದಿ: ಬೆಂಗಳೂರು-ಮೈಸೂರು ಹೆದ್ದಾರಿಯ ಬಿಡದಿ ಪೋಲಿಸ್ ಠಾಣೆ ಸಮೀಪ ಇರುವ ಚಿರಾಗ್ ಹಿಂದೂ ಮಿಲ್ರ್ಟಿ ಹೋಟೆಲ್ ಹಂದಿ ಮಾಂಸ ಖಾದ್ಯದ ರುಚಿಯಿಂದ ಗ್ರಾಹಕರನ್ನು ಸೆಳೆಯುತ್ತಿದೆ.

1998ರಲ್ಲಿ ಬಾಬು ಅವರು ಆರಂಭಿಸಿದ ಹಂದಿ ಮಾಂಸದ ಹೋಟೆಲ್ ತನ್ನದೇ ಆದ ಗ್ರಾಹಕ ಬಳಗವನ್ನು ಹೊಂದಿದೆ. ಪ್ರತಿನಿತ್ಯ ಬರುವ ಗ್ರಾಹಕರಿಗೆ ಹಂದಿ ಮಾಂಸದ ಜೊತೆಗೆ ಬಗೆ ಬಗೆಯ ಚಿಕನ್ ಹಾಗೂ ಮೀನು, ಬೋಟಿಗೊಜ್ಜು ಖಾದ್ಯವನ್ನು ಬಡಿಸುತ್ತಾರೆ. ಪೋರ್ಕ್‌ ಪ್ರೈ , ಪೋರ್ಕ್ ಮಸಾಲವಂತು ಗ್ರಾಹಕರ ಬಾಯಲ್ಲಿ ನೀರುರೀಸುತ್ತದೆ. ಬಾಳೆ ಎಲೆ ಊಣ ಬಡಿಸುವುದು ಇವರ ವಿಶೇಷ.  

ಉತ್ತಮ ಗುಣಮಟ್ಟದ ಹಂದಿ ಮಾಂಸವನ್ನು ತಾವೇ ಹುಡುಕಿ ತರುತ್ತಾರೆ. ಅಡುಗೆಗೆ ಬಳಸುವ ಮಸಾಲೆ ಪದಾರ್ಥವನ್ನು ತಾವೇ ಮನೆಯಲ್ಲಿ ತಯಾರಿಸಿ ಬಳಸುತ್ತಾರೆ.

ಬಾಬು ಹೋಟೆಲ್ ಆರಂಭಿಸುವ ವೇಳೆ ಇಲ್ಲಿ ಬೆರಳೆಣಿಕೆಯಷ್ಟ ಇದ್ದ ಹೋಟೆಲ್‌ಗಳು ಈಗ ಹೆಚ್ಚಾಗಿವೆ. ಆದರೂ ಅವರ ಹೋಟೆಲ್‌ಗೆ ಬರುವ ಗ್ರಾಹಕರು ಕಡಿಮೆಯಾಗಿಲ್ಲ. (ಬಾಬು ಮೊ.9880447363)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT