ಅಂತರರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆ

ಮಂಗಳವಾರ, ಮಾರ್ಚ್ 26, 2019
27 °C

ಅಂತರರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆ

Published:
Updated:
Prajavani

ಚನ್ನಪಟ್ಟಣ: ಪಟ್ಟಣದ ಪುನರ್ವಸು ಯೋಗ ಕೇಂದ್ರದ ನಾಲ್ಕು ಮಂದಿ ಯೋಗ ಪಟುಗಳು ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಯಲ್ಲಿ ಜಯಗಳಿಸಿ ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಶಿವಮೊಗ್ಗದಲ್ಲಿ ವರ್ಷಿಣಿ ಯೋಗ ಎಜುಕೇಷನ್ ಮತ್ತು ಸಾಂಸ್ಕೃತಿಕ ಕ್ರೀಡಾ ಟ್ರಸ್ಟ್ ವತಿಯಿಂದ ಈಚೆಗೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವೈಷ್ಣವಿ ಸತೀಶ್, ವೇದಾಂತ, ಬಿ.ಎಂ. ಸ್ವಾತಿ, ಪುನರ್ವಸು ಅವರು ಪ್ರಥಮ ಸ್ಥಾನ ಗಳಿಸಿ ಈ ಸಾಧನೆ ಮಾಡಿದ್ದಾರೆ.

ಎಂಟು ವರ್ಷದ ವಿಭಾಗದಲ್ಲಿ ವೈಷ್ಣವಿ ಸತೀಶ್ ಪ್ರಥಮ ಸ್ಥಾನ, 11 ವರ್ಷದ ವಿಭಾಗದಲ್ಲಿ ವೇದಾಂತ ಹಾಗೂ 14 ವರ್ಷದ ವಿಭಾಗದಲ್ಲಿ ಬಿ.ಎಂ. ಸ್ವಾತಿ ಪ್ರಥಮ ಸ್ಥಾನ ಪಡೆದು ತಲಾ ₹ 10 ಸಾವಿರ ನಗದು ಬಹುಮಾನ ಹಾಗೂ 20 ರಿಂದ 25 ವರ್ಷದ ವಯೋಮಿತಿಯಲ್ಲಿ ಪುನರ್ವಸು ಚಾಂಪಿಯನ್ ಆಫ್ ಚಾಂಪಿಯನ್ ಆಗಿ ₹ 30 ಸಾವಿರ ನಗದು ಬಹುಮಾನ ಪಡೆದುಕೊಂಡಿದ್ದಾರೆ.

ಮೇ 23ರಿಂದ 25ರವರೆಗೆ ಸಿಂಗಪುರದಲ್ಲಿ ಅಂತರ ರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆ ನಡೆಯಲಿದೆ ಎಂದು ಯೋಗ ಕೇಂದ್ರದ ಶಿಕ್ಷಕಿ ಗೀತಾ ವೆಂಕಟೇಶ್ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !