ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ: ಕಾಡಿನಿಂದ ನಾಡಿಗೆ ಬಂದ ಚುಕ್ಕಿ ಜಿಂಕೆ!

Published 28 ಏಪ್ರಿಲ್ 2024, 6:52 IST
Last Updated 28 ಏಪ್ರಿಲ್ 2024, 6:52 IST
ಅಕ್ಷರ ಗಾತ್ರ

ಚನ್ನಪಟ್ಟಣ: ಕಾಡಂಚಿನ ಗ್ರಾಮ ವಿರುಪಾಕ್ಷಿಪುರ ಹೋಬಳಿ ಹುಚ್ಚಯ್ಯನದೊಡ್ಡಿ ಗ್ರಾಮಕ್ಕೆ ಶನಿವಾರ ಸಂಜೆ ಗಂಡು ಜಿಂಕೆಯೊಂದು ದಾರಿತಪ್ಪಿ ಬಂದಿದೆ.

ಮೈತುಂಬಾ ಆಕರ್ಷಕ ಬಿಳಿ ಚುಕ್ಕಿ ಮತ್ತು ದೊಡ್ಡ ಕೊಂಬು ಹೊಂದಿರುವ ಏಳು ವರ್ಷದ ಜಿಂಕೆ ಕಾಡಂಚಿನ ಚನ್ನಪ್ಪಾಜಿ ಬೆಟ್ಟದ ಕಡೆಯಿಂದ ದಾರಿ ತಪ್ಪಿ ಗ್ರಾಮದತ್ತ ಬಂದಿದೆ. ನಾಯಿಗಳು ಬೊಗಳುತ್ತಾ ಬೆನ್ನತ್ತಿದಾಗ ಹೆದರಿ ಗ್ರಾಮದ ವಸಂತಮ್ಮ ಎಂಬುವರ ಮನೆಗೆ ನುಗ್ಗಿದೆ.

ಭಯದಿಂದ ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿದೆ. ಜಿಂಕೆಯನ್ನು ನೋಡಿ ಮನೆಯವರು ಸಹ ಗಾಬರಿಗೊಂಡಿದ್ದಾರೆ.

ಗ್ರಾಮಸ್ಥರು ನಾಯಿಗಳನ್ನು ಓಡಿಸಿ ಜಿಂಕೆಯನ್ನು ರಕ್ಷಣೆ ಮಾಡಿದ್ದಾರೆ. ಜಿಂಕೆಗೆ ತೊಂದರೆಯಾಗದಂತೆ ಅದನ್ನು ಹಿಡಿದು ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ಬಾಯಾರಿದ್ದ ಜಿಂಕೆಗೆ ನೀರು ಕುಡಿಸಿದ್ದಾರೆ.ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ.

ಸಾತನೂರು ವಿಭಾಗದ ಅರಣ್ಯ ಇಲಾಖೆ ಸಿಬ್ಬಂದಿ ಜಿಂಕೆಯನ್ನು ವಶಕ್ಕೆ ಪಡೆದು ಕೊಂಡೊಯ್ದರು. ಕುಡಿಯುವ ನೀರು ಅರಸಿ ಜಿಂಕೆ ಕಾಡಿನಿಂದ ನಾಡಿಗೆ ಬಂದಿದೆ. ಆರೋಗ್ಯ ತಪಾಸಣೆ ಬಳಿಕ ಅರಣ್ಯಕ್ಕೆ ಬಿಡಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT