ಶನಿವಾರ, ಏಪ್ರಿಲ್ 1, 2023
29 °C

ರಾಮನಗರ: ‘ಪ್ರಾದೇಶಿಕ ಚಿಂತನೆ ಬೆಳೆಸಿಕೊಳ್ಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟವು ಕನ್ನಡ ನಾಡು, ನುಡಿ, ನೆಲ, ಜಲ ಸಂರಕ್ಷಣೆಯೇ ಪ್ರಧಾನ ಆದ್ಯತೆಯಾಗಿದೆ. ಇದು ನಾಡಿನ ಯುವಜನರು ಸಂಘಟನೆ ಸೇರಲು ಪ್ರೇರಕವಾಗಿದೆ ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ವಾಡೇದೊಡ್ಡಿ ಕಬ್ಬಾಳೇಗೌಡ ತಿಳಿಸಿದರು.

ಇಲ್ಲಿನ ಎಂ.ಜಿ. ರಸ್ತೆಯ ಕರವೇ ತಾಲ್ಲೂಕು ಘಟಕದ ಕಚೇರಿಯಲ್ಲಿ ನಡೆದ ಕರವೇ ಸಂಘಟನೆಗೆ ನೂತನ ಸದಸ್ಯರ ಸೇರ್ಪಡೆ ಹಾಗೂ ಪದಾಧಿಕಾರಿಗಳ ನೇಮಕಾತಿ ಸಭೆಯಲ್ಲಿ ಅವರು ಮಾತನಾಡಿದರು.

ಕರವೇ ಜಿಲ್ಲಾ ಉಪಾಧ್ಯಕ್ಷ ಪುಟ್ಟಸ್ವಾಮಿ, ತಾಲ್ಲೂಕು ಅಧ್ಯಕ್ಷ ಜೈರಾಮೇಗೌಡ ಅವರು ಮಾತನಾಡಿದರು.

ತಾಮಸಂದ್ರ ಕೆ. ಶ್ರೀನಿವಾಸ್ ಪ್ರಸಾದ್(ಯುವ ಘಟಕ ಜಿಲ್ಲಾ ಉಪಾಧ್ಯಕ್ಷ), ಬೆಣಚುಕಲ್ಲುದೊಡ್ಡಿ ಗುಣಶೇಖರ್(ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ), ಅಂಚಿಪುರ ನಾಗೇಂದ್ರ(ಕಾರ್ಮಿಕ ಘಟಕದ ಉಪಾಧ್ಯಕ್ಷ) ಅವರಿಗೆ ನೇಮಕಾತಿ ಪತ್ರ ನೀಡಲಾಯಿತು.

ಆಲನತ್ತ ಗಿರೀಶ್‌, ಶಿವಸತ್ಯ, ತಿಮ್ಮೇಗೌಡನದೊಡ್ಡಿ ಚಂದ್ರು, ಯಡವನಹಳ್ಳಿ ಸಂಪತ್ತು, ಬಡೆಸಾಬರದೊಡ್ಡಿ ಸೋಮಶೇಖರ್, ಸಾಗರ್ ಅಂಚೀಪುರ, ಚಿಕ್ಕನದೊಡ್ಡಿ ಶಿವಕುಮಾರ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.