ಭಾನುವಾರ, ಫೆಬ್ರವರಿ 23, 2020
19 °C

ವಿದ್ಯಾರ್ಥಿಗಳಿಂದ ವಸ್ತುಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ಇಲ್ಲಿನ ರೂರಲ್‌ ಕಾಲೇಜಿನಲ್ಲಿ ಕ್ರಿಯಾತ್ಮಕ ಚಟುವಟಿಕೆ‌ ವಸ್ತುಪ್ರದರ್ಶನ ನಡೆಯಿತು. ಕಾಲೇಜಿನ ವಿದ್ಯಾರ್ಥಿಗಳು 13ರೀತಿಯ ವಿವಿಧ ಚಟುವಟಿಕೆಗಳ ವಸ್ತುಪ್ರದರ್ಶನ ನಡೆಸಿದರು.

ರೂರಲ್ ‌ಪದವಿ ಕಾಲೇಜಿನ ವಾಣಿಜ್ಯ ಮತ್ತು ಆಡಳಿತ ವಿಭಾಗದ ವತಿಯಿಂದ ವ್ಯವಹಾರಿಕ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ವಿಭಾಗದ ಮುಖ್ಯಸ್ಥ ತಮ್ಮಣ್ಣಗೌಡ ವಸ್ತುಪ್ರದರ್ಶನ ಪ್ರಾಮುಖ್ಯತೆ ಕುರಿತು ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಗೋವಿಂದಪ್ಪ ವ್ಯವಹಾರಿಕ ವಸ್ತು ಪ್ರದರ್ಶನದ ಪರಿಕಲ್ಪನೆ ಬಗ್ಗೆ ತಿಳಿಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆರ್‌ಇಎಸ್‌ ಅಧ್ಯಕ್ಷ ಕೆ.ಬಿ.ನಾಗರಾಜು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.

ಸಾರ್ವಜನಿಕವಾಗಿ ವಸ್ತುಪ್ರದರ್ಶನ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ವಿದ್ಯಾರ್ಥಿಗಳು ತಾವು ಮಾಡಿದ ಕ್ರಿಯಾತ್ಮಕ ಚುಟುವಟಿಕೆ ಬಗ್ಗೆ ವೀಕ್ಷಕರಿಗೆ ತಿಳಿಸಿಕೊಟ್ಟರು.

ಆರ್‌ಇಎಸ್‌ ಕಾರ್ಯದರ್ಶಿ ಸಿ.ರಮೇ‌ಶ್‌, ಉಪಾಧ್ಯಕ್ಷ ಎಂ.ಎಲ್‌.ಶಿವಕುಮಾರ್‌, ಕಾಲೇಜಿನ ಉಪ ಪ್ರಾಂಶುಪಾಲ ನಂಜುಂಡಯ್ಯ ಇದ್ದರು.

ಹಾರೋಹಳ್ಳಿ ಕಾಲೇಜಿನ ಡಾ.ಎಸ್‌.ನಾಗಭೂಷಣ್‌, ತಿಮ್ಮಯ್ಯ, ಕೋಡಿಹಳ್ಳಿ ಕಾಲೇಜಿನ ಅಶ್ವತ್ಥ್‌ನಾರಾಯಣ್‌ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು