ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸನಹಳ್ಳಿಯಲ್ಲಿ ಪ್ರೊ.ನಂಜುಂಡಸ್ವಾಮಿ ಸ್ಮರಣೆ

Last Updated 4 ಫೆಬ್ರುವರಿ 2023, 5:41 IST
ಅಕ್ಷರ ಗಾತ್ರ

ಕನಕಪುರ: ‘ವಿಶ್ವ ರೈತ ಚೇತನ ಪ್ರೊ. ಎಂ.ಡಿ ನಂಜುಂಡಸ್ವಾಮಿಯವರು ಅಗಲಿ 19 ವರ್ಷವಾಗಿದೆ. ಆದರೂ ಅವರ ಆದರ್ಶಗಳು ನಮ್ಮನ್ನು ಇಂದಿಗೂ ಮುನ್ನಡೆಸುತ್ತಿವೆ’ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಚೀಲೂರು ಮುನಿರಾಜು ಹೇಳಿದರು.

ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಹುಣಸನಹಳ್ಳಿ ಗ್ರಾಮದಲ್ಲಿ ರಾಜ್ಯ ರೈತ ಸಂಘದಿಂದ ರೈತರ ಸಂಘದ ಸಂಸ್ಥಾಪಕ ಪ್ರೊ. ಎಂ.ಡಿ.ನಂಜುಂಡಸ್ವಾಮಿಯವರ 19ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಂಜುಂಡಸ್ವಾಮಿಯವರು ರೈತ ಸಂಘ ಸ್ಥಾಪನೆ ಮಾಡಿದ್ದು ಹಾಗೂ ಅವರು ನಡೆದು ಬಂದ ದಾರಿಯ ಬಗ್ಗೆ, ಅವರ ಚಿಂತನೆಗಳ ಬಗ್ಗೆ ತಿಳಿಸಿಕೊಟ್ಟರು.

ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಕೂಗಿ ಗಿರಿಯಪ್ಪ ಮಾತನಾಡಿ, ‘ರೈತ ಸಂಕುಲವು ಕಷ್ಟದಲ್ಲಿದ್ದಾಗ, ರೈತರ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಪ್ರೊ.ನಂಜುಂಡಸ್ವಾಮಿ ಅವರು ರೈತ ಸಂಘವನ್ನು ರಾಜ್ಯದಲ್ಲಿ ಹುಟ್ಟಿಹಾಕಿ ಶಕ್ತಿ ತುಂಬಿ ರಾಜ್ಯವ್ಯಾಪಿ ಸಂಘಟನೆಯನ್ನು ವಿಸ್ತರಿಸಿದರು. ಅದು ಅವರ ಮಾರ್ಗದರ್ಶನದಲ್ಲಿ ಅವರ ಚಿಂತನೆಗಳೊಂದಿಗೆ ಮುನ್ನಡೆಯುತ್ತಿದೆ’ ಎಂದರು.

ಮುಖಂಡ ನೀಲಿ ರಮೇಶ್, ಬಸವರಾಜ್, ಕುಮಾರ್, ಕಿರಣ್ ಕುಮಾರ್, ಶಿವರಾಜು, ಶಿವಣ್ಣ, ಶಿವರಾಮು, ಅಭಿಷೇಕ್, ಸೋಮಣ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT