ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

ರಾಮನಗರ: ಬಿರು ಬಿಸಿಲಿಗೆ ಹೆಚ್ಚಿದ ಕಾಳ್ಗಿಚ್ಚು

ಎರಡೂವರೆ ತಿಂಗಳಲ್ಲಿ ರಾಮನಗರ ತಾಲ್ಲೂಕಿನಾದ್ಯಂತ 87 ಬೆಂಕಿ ಅನಾಹುತ ಘಟನೆ ವರದಿ
Published : 17 ಮಾರ್ಚ್ 2025, 15:58 IST
Last Updated : 17 ಮಾರ್ಚ್ 2025, 15:58 IST
ಫಾಲೋ ಮಾಡಿ
Comments
ರಾಮನಗರ ಹೊರಲವಯದ ಅರ್ಚಕರಹಳ್ಳಿ ಬಳಿ ಬೆಂಗಳೂರು–ಮೈಸೂರು ರಸ್ತೆ ಬದಿ ಬೆಳೆದಿದ್ದ ಹುಲ್ಲು ಹಾಗೂ ಇತರ ಗಿಡಗಂಟಿಗಳು ಬೆಂಕಿಯಿಂದಾಗಿ ಸುಟ್ಟು ಹೋಗಿವೆ
ರಾಮನಗರ ಹೊರಲವಯದ ಅರ್ಚಕರಹಳ್ಳಿ ಬಳಿ ಬೆಂಗಳೂರು–ಮೈಸೂರು ರಸ್ತೆ ಬದಿ ಬೆಳೆದಿದ್ದ ಹುಲ್ಲು ಹಾಗೂ ಇತರ ಗಿಡಗಂಟಿಗಳು ಬೆಂಕಿಯಿಂದಾಗಿ ಸುಟ್ಟು ಹೋಗಿವೆ
ರಾಮನಗರ ತಾಲ್ಲೂಕಿನ ಕೆರೆಮೇಗಳದೊಡ್ಡಿಯಲ್ಲಿ ತೋಟವು ಬೆಂಕಿಗೆ ಆಹುತಿಯಾಗಿರುವುದು
ರಾಮನಗರ ತಾಲ್ಲೂಕಿನ ಕೆರೆಮೇಗಳದೊಡ್ಡಿಯಲ್ಲಿ ತೋಟವು ಬೆಂಕಿಗೆ ಆಹುತಿಯಾಗಿರುವುದು
ಅಗ್ನಿ ಅವಘಡಕ್ಕೆ ಕರೆ ಮಾಡಬೇಕಾದ ಸಂಖ್ಯೆ* 080 22971500: ಅಗ್ನಿಶಾಮಕ ಕಂಟ್ರೊಲ್ ರೂಂ
ಕೈಗಾರಿಕಾ ಪ್ರದೇಶಕ್ಕಿಂತ ಹೆಚ್ಚಾಗಿ ಅರಣ್ಯ ಹೊಲ ತೋಟ ರಸ್ತೆ ಬದಿ ತ್ಯಾಜ್ಯದ ರಾಶಿ ಕೆಲವೊಮ್ಮೆ ಸಣ್ಣ–ಪುಟ್ಟ ತಯಾರಿಕಾ ಘಟಕಗಳಲ್ಲಿ ಬೆಂಕಿ ಅವಘಡ ಸಂಭವಿಸುತ್ತಿದೆ. ಸಾರ್ವಜನಿಕರು ಕೂಡಲೇ ಠಾಣೆಗೆ ಮಾಹಿತಿ ನೀಡಿದರೆ ಹೆಚ್ಚಿನ ಹಾನಿ ತಡೆಯಬಹುದು
ಮೋಹನ ಮುದಿಗೌಡ ಠಾಣಾಧಿಕಾರಿ ರಾಮನಗರ ಅಗ್ನಿಶಾಮಕ ಠಾಣೆ
ಬೇಕಿದೆ ಮತ್ತೊಂದು ಜಲ ವಾಹನ
‘ಬೆಂಕಿ ನಂದಿಸುವ ಕಾರ್ಯಾಚರಣೆಗೆ ಸದ್ಯಕ್ಕೆ ನಮ್ಮ ಬಳಿ 4500 ಸಾವಿರ ಲೀಟರ್ ಸಾಮರ್ಥ್ಯದ ಜಲವಾಹನ ಹಾಗೂ ಸಣ್ಣ ಪ್ರಮಾಣದ ಅಗ್ನಿ ನಂದಿಸುವ ಅಗ್ನಿ ಬುಲೆಟ್ ಇದೆ. ಜೊತೆ ನೀರಿಗೆ ಬಿದ್ದ ಮನುಷ್ಯರು ಮತ್ತು ಪ್ರಾಣಿಗಳನ್ನು ರಕ್ಷಿಸಲು ರೆಸ್ಕ್ಯೂ ವ್ಯಾನ್ ಇದೆ. ಜಿಲ್ಲಾ ಕೇಂದ್ರವಾದ ರಾಮನಗರದ ಸುತ್ತಮುತ್ತ ಕುರುಚಲು ಕಾಡಿನಿಂದ ಆವೃತ್ತವಾದ ಬೆಟ್ಟಗುಡ್ಡಗಳಿವೆ. ಬಿಡದಿ ಕೈಗಾರಿಕಾ ಪ್ರದೇಶವಿರುವುದರಿಂದ ಇಲ್ಲಿಗೆ ಮತ್ತೊಂದು ಜಲವಾಹನದ ಅಗತ್ಯವಿದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ. ತಾಲ್ಲೂಕಿಗೆ ಠಾಣಾಧಿಕಾರಿ ಸೇರಿದಂತೆ 33 ಹುದ್ದೆಗಳು ಮಂಜೂರಾಗಿದ್ದು ಸದ್ಯ 27 ಮಂದಿ ಇದ್ದಾರೆ’ ಎಂದು ಮೋಹನ ಮುದಿಗೌಡ ತಿಳಿಸಿದರು. ಉಚಿತ ಅಗ್ನಿ ಸುರಕ್ಷತಾ ತರಬೇತಿ ಅಗ್ನಿ ಸುರಕ್ಷತಾ ಕ್ರಮಗಳ ಕುರಿತು ಇಲಾಖೆಯು ವಾರಕ್ಕೆ ಮೂರು ದಿನ ಉಚಿತವಾಗಿ ತರಬೇತಿ ಕಾರ್ಯಕ್ರಮನ್ನು ಹಮ್ಮಿಕೊಳ್ಳುತ್ತದೆ. ಶಾಲಾ–ಕಾಲೇಜು ಆಸ್ಪತ್ರೆ ಕೈಗಾರಿಕಾ ಪ್ರದೇಶ ಪೆಟ್ರೋಲ್ ಬಂಕ್ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ನಡೆಸುತ್ತೇವೆ. ಕಾರ್ಖಾನೆ ಕಂಪನಿ ಸಂಘ–ಸಂಸ್ಥೆಗಳು ಸೇರಿದಂತೆ ಯಾರೇ ಕರೆದರೂ ಸ್ಥಳಕ್ಕೆ ತೆರಳಿ ಉಚಿತವಾಗಿ ತರಬೇತಿ ನೀಡುತ್ತೇವೆ. ನಮ್ಮ ಠಾಣೆಗೆ ಬಂದರೂ ತರಬೇತಿ ಜೊತೆಗೆ ಪ್ರಾತ್ಯಕ್ಷಿಕೆ ಸಹ ನೀಡುತ್ತೇವೆ. ಅದಕ್ಕಾಗಿ ಸಾರ್ವಜನಿಕರು ನಮಗೆ ಒಂದು ಮನವಿ ಪತ್ರ ಕೊಟ್ಟರೆ ಸಾಕು. ತುರ್ತು ಪರಿಸ್ಥಿತಿ ಹಾಗೂ ಅಗ್ನಿ ಅವಘಡ ಸಂಭವಿಸಿದಾಗ ಹೇಗೆ ಪರಿಸ್ಥಿತಿಯನ್ನು ನಿಭಾಯಿಸಬೇಕು ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳೇನು? ಎಂಬುದರ ಕುರಿತು ತರಬೇತಿ ನೀಡಿ ತುರ್ತು ಪರಿಸ್ಥಿತಿ ನಿಭಾಯಿಸಲು ಅಣಿಗೊಳಿಸುತ್ತೇವೆ ಎನ್ನುತ್ತಾರೆ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು.
ಪ್ರಾಣಿ–ಪಾಕ್ಷಿಗಳಿಗೂ ಆಪತ್ತು
ಬೇಸಿಗೆಯಲ್ಲಿ ಅರಣ್ಯ ಪ್ರದೇಶ ತೋಟ ಹಾಗೂ ಹೊಲಗಳಲ್ಲಿ ಹೆಚ್ಚಾಗಿರುವ ಅಗ್ನಿ ಅನಾಹುತವು ಪ್ರಾಣಿ–ಪಾಕ್ಷಿಗಳಿಗೆ ಆಪತ್ತು ಉಂಟುಮಾಡಿದೆ. ಇಲ್ಲಿನ ಹಂದಿಗುಂದಿ ಬೆಟ್ಟ ರಾಮದೇವರ ಬೆಟ್ಟ ಜಲಸಿದ್ದೇಶ್ವರ ಬೆಟ್ಟ ಸೇರಿದಂತೆ ಸುತ್ತಮುತ್ತಲಿನ ಬೆಟ್ಟಗುಡ್ಡಗಳು ಬಹುತೇಕ ಹುಲ್ಲು ಸೇರಿದಂತೆ ಕುರುಚಲು ಕಾಡಿನಿಂದ ಆವೃತವಾಗಿದೆ. ಬಿಸಿಲ ಝಳಕ್ಕೆ ಹುಲ್ಲು ಒಣಗಿರುವುದರಿಂದ ಕೆಲವೊಮ್ಮೆ ಕಿಡಿಗೇಡಿಗಳು ಹಚ್ಚುವ ಬೆಂಕಿಯಿಂದಾಗಿ ಅಥವಾ ಬೀಡಿ–ಸಿಗರೇಟ್ ಸೇದಿ ಹುಲ್ಲಿನತ್ತ ಎಸೆಯುವುದರಿಂದಲೂ ಬೆಂಕಿ ಹೊತ್ತಿಕೊಂಡು ಉರಿಯುವುದುಂಟು. ಇದರಿಂದಾಗಿ ಪ್ರಾಣಿ–ಪಕ್ಷಿಗಳ ಆವಾಸ ಸ್ಥಾನಕ್ಕೆ ಕುತ್ತಾಗುತ್ತದೆ. ಅವುಗಳ ಗೂಡುಗಳು ಸುಟ್ಟು ಹೋಗುತ್ತವೆ. ಕೆಲವೊಮ್ಮೆ ಪ್ರಾಣಿ–ಪಕ್ಷಿಗಳು ಸಹ ಕಾಳ್ಗಿಚ್ಚಿಗೆ ಬಲಿಯಾಗುವುದುಂಟು. ಜೊತೆಗೆ ಆಹಾರದ ಅಭಾವವು ಉಂಟಾಗುತ್ತದೆ. ರಸ್ತೆ ಬದಿ ಸಂಭವಿಸುವ ಬಹುತೇಕ ಬೆಂಕಿ ಘಟನೆಗೆ ಬೀಡಿ–ಸಿಗರೇಟ್ ಸೇದಿ ಬೆಂಕಿ ಆರಿಸದೆ ಹಾಗೆಯೇ ಒಣಗಿದ ಹುಲ್ಲಿನ ಮೇಲೆ ಎಸೆಯುವುದೇ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT