ಕನಕಪುರ: ತಾಲ್ಲೂಕಿನ ಈಶ್ವರ ಮತ್ತು ಮಹದೇಶ್ವರ ದೇವಾಲಯಗಳಲ್ಲಿ ಭಾನುವಾರ ಮಹಾಶಿವರಾತ್ರಿ ಆಚರಣೆ ಮತ್ತು ರಾತ್ರಿ ಜಾಗರಣೆ, ಧಾರ್ಮಿಕ ವಿಧಿ, ವಿಧಾಣಗಳು ಶ್ರದ್ಧೆ ಮತ್ತು ಭಕ್ತಿಯಿಂದ ಜರುಗಿದವು.

ಇತಿಹಾಸ ಪ್ರಸಿದ್ಧ ಹಿರಿ ಮಡಿವಾಳದ ಶಿವನಾಂಕರೇಶ್ವರ, ಶಿವಗಿರಿ ಬೆಟ್ಟದ ಶಿವಾಲದಪ್ಪ, ಬಟ್ಟಲು ಗುಂಡಪ್ಪ ಬೆಟ್ಟದ ಬಟ್ಟಲಗುಂಡೇಶ್ವರ ದೇವಾಲಯಗಳಲ್ಲಿ ಶಿವರಾತ್ರಿ ಆಚರಣೆ ಮತ್ತು ಜಾಗರಣೆ ತುಂಬಾ ವಿಶೇಷವಾಗಿ ನಡೆಯಿತು.

ಶಿವರಾತ್ರಿ ಆಚರಣೆ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ದೇವಾಲಯವನ್ನು ಶುದ್ಧಗೊಳಿಸಿ ಫಲಪುಷ್ಪ, ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.

ಭಾನುವಾರ ಬೆಳಗ್ಗೆ ಶಿವಲಿಂಗ, ಶಿವನ ಮೂರ್ತಿಗಳಿಗೆ ಚಿನ್ನಾಭರಣ ತೊಡಿಸಿ ಅಲಂಕಾರ ಮಾಡಲಾಗಿತ್ತು. ಮುಂಜಾನೆಯಿಂದಲೇ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು, ರಾತ್ರಿ ಜಾಗರಣೆ ಮಾಡಲು ನಾಟಕ, ಜಾನಪದ ಗಾಯನ ಕಾರ್ಯಕ್ರಮ ನಡೆಸಲಾಯಿತು.

ಮಡಿವಾಳದ ಶಿವನಾಂಕಾರೇಶ್ವರ ದೇವಾಲಯ ಮತ್ತು ಶಿವಾಲ್ದಪ್ಪನ ಬೆಟ್ಟದ ಶಿವಗಿರಿ ಕ್ಷೇತ್ರಕ್ಕೆ ಜಾತ್ರೆಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು.

ಬೆಳಗ್ಗೆಯಿಂದಲೇ ಸಾವಿರಾರು ಜನರು ಕ್ಷೇತ್ರಗಳಿಗೆ ಭೇಟಿ ನೀಡಿ ದರ್ಶನ ಪಡೆದು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಶಿವಗಿರಿ ಮತ್ತು ಮಡಿವಾಳದಲ್ಲಿ ಮಧ್ಯಾಹ್ನದ ವೇಳೆಗೆ ರಥೋತ್ಸವ ಜರುಗಿತು.

ನಿರಂತರವಾಗಿ ಅನ್ನ ದಾಸೋಹ ನಡೆಯಿತು. ಹರಕೆ ಹೊತ್ತ ಭಕ್ತರು ಮಜ್ಜಿಗೆ, ಪಾನಕ, ಕೋಸಂಬರಿ, ಕುಡಿಯುವ ನೀರಿನ ಅರವಟ್ಟಿಗೆ ಸ್ಥಾಪಿಸಿ ಜನರಿಗೆ ವಿತರಿಸಿದರು.

ಈಶ್ವರ ಮತ್ತು ಮಹದೇಶ್ವರ ದೇವಾಲಯಗಳಲ್ಲಿ ಶಿವರಾತ್ರಿ ಆಚರಣೆ ತುಂಬಾ ಯಶಸ್ವಿಯಾಗಿ ನಡೆಯಿತು. ಶಿವನ ದೇವಾಲಯಗಳ ದರ್ಶನ ಪಡೆದು ಭಕ್ತರು ಶ್ರದ್ಧಾ, ಭಕ್ತಿಯಿಂದ ಶಿವನಾಮಸ್ಮರಣೆ ಮಾಡಿದರು.

ಮಳಗಾಳಿನ ಮಹದೇಶ್ವರ, ಅರಳಾಳು ಮಾದೇಶ್ವರ ಮಹದೇಶ್ವರ ಬಡಾವಣೆಯ ಮಹದೇಶ್ವರ, ಸಾತನೂರಿನ ಮಹದೇಶ್ವರ ದೇವಾಲಯ ಸೇರಿದಂತೆ ಹಲವು ಗ್ರಾಮಗಳ ದೇವಾಲಯಗಳಲ್ಲಿ ಮಹಾಶಿವರಾತ್ರಿಯನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.