ಗುರುವಾರ , ಆಗಸ್ಟ್ 22, 2019
26 °C

ಜಮೀನು ವಿವಾದ: ವ್ಯಕ್ತಿಗೆ ಗುಂಡೇಟು

Published:
Updated:

ರಾಮನಗರ: ಜಮೀನು ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಸಂಬಂಧಿ ಮೇಲೆ ಬಂದೂಕಿನಿಂದ ಗುಂಡು ಹಾರಿಸಿದ ಘಟನೆ ಬೆಂಗಳೂರು ಹೊರವಲಯದಲ್ಲಿರುವ ದೊಡ್ಡೇರಿ ಕಾಲೊನಿಯಲ್ಲಿ ಭಾನುವಾರ ನಡೆದಿದೆ.

ಕುಮಾರ ನಾಯ್ಕ ಎಂಬುವರು ಗುಂಡೇಟಿನಿಂದ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಸಂಬಂಧಿ ಚಂದ್ರ ನಾಯ್ಕ ಡಬಲ್ ಬ್ಯಾರಲ್ ಬಂದೂಕಿನಿಂದ ಗುಂಡು ಹಾರಿಸಿದ್ದು, ಘಟನೆ ಬಳಿಕ ಪರಾರಿ‌ ಆಗಿದ್ದಾರೆ.

ಬೆಳಿಗ್ಗೆ ಜಮೀನಿನ ಸಮೀಪ ಈ ಇಬ್ಬರ ನಡುವೆ ಜಗಳ ನಡೆದಿತ್ತು. ಈ ಸಂದರ್ಭ ಚಂದ್ರನಾಯ್ಕ ಗುಂಡು ಹಾರಿಸಿದರು ಎಂದು ಪೊಲೀಸರು ಮಾಹಿತಿ ನೀಡಿದರು.
ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post Comments (+)