ಬುಧವಾರ, ಆಗಸ್ಟ್ 21, 2019
24 °C

ಮಾಗಡಿ: ವಿವಿಧೆಡೆ ಬಕ್ರೀದ್‌

Published:
Updated:
Prajavani

ಮಾಗಡಿ: ತ್ಯಾಗ ಬಲಿದಾನಗಳ ಸಂಕೇತವಾದ ಬಕ್ರೀದ್‌ ಹಬ್ಬವನ್ನು ಮುಸ್ಲಿಮರು ಸಡಗರ ಸಂಭ್ರಮದಿಂದ ಆಚರಿಸಿದರು. ಪಟ್ಟಣದ ಹಳೆ, ಹೊಸ ಮಸೀದಿ, ಹೊಸಪೇಟೆ, ಹೊಂಬಾಳಮ್ಮನಪೇಟೆ ಮೊಹಲ್ಲಾಗಳಿಂದ ಮೆರವಣಿಗೆಯಲ್ಲಿ ಬಿ.ಕೆ.ರಸ್ತೆಯಲ್ಲಿರುವ ಈಗ್ದಾ ಮೈದಾನಕ್ಕೆ ತೆರಳಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.

ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಪುಟಾಣಿ ಮಕ್ಕಳು ವಿವಿಧ ಬಗೆಯ ಹೊಸಬಟ್ಟೆ ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ನೆಲೆಸಿರುವ ಮುಸ್ಲಿಮರು ಬಕ್ರಿದ್‌ ಹಬ್ಬವನ್ನು ಆಚರಿಸಿದರು. ಜಮಾಲ್‌ ಪಾಳ್ಯ, ಅಗಲಕೋಟೆ, ಹೊಸಪಾಳ್ಯ, ತಿಪ್ಪಸಂದ್ರ ಹೋಬಳಿಯ ಹಳೆಲಾಯ, ಹೊಸಲಾಯ, ಹುಳ್ಳೇನಹಳ್ಳಿ, ಕುದೂರು, ಗುಂಡಿಗೆರೆ, ತೊರೆರಾಮನಹಳ್ಳಿ, ಸೋಲೂರು, ಗುಡೇಮಾರನಹಳ್ಳಿ, ಮಟ್ಟನದೊಡ್ಡಿ ಇತರೆಡೆಗಳಲ್ಲಿ ಹಬ್ಬ ಆಚರಿಸಲಾಯಿತು.

Post Comments (+)