ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾರೋಹಳ್ಳಿ: ಬಸ್ ಡಿಪೊ ವೃತ್ತಕ್ಕೆ ಕೆಂಪೇಗೌಡರ ಹೆಸರಿಡಲು ಒತ್ತಾಯ

Published 9 ಜುಲೈ 2024, 15:46 IST
Last Updated 9 ಜುಲೈ 2024, 15:46 IST
ಅಕ್ಷರ ಗಾತ್ರ

ಹಾರೋಹಳ್ಳಿ: ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ಹೆಸರನ್ನು ಬಸ್ ಡಿಪೊ ವೃತ್ತಕ್ಕೆ ನಾಮಕರಣ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಮುಖಂಡ ಶಿವನಂಜಪ್ಪ ಮಾತನಾಡಿ, ಹಾರೋಹಳ್ಳಿ ಈಗಷ್ಟೇ ಬೆಳೆಯುತ್ತಿದೆ. ಅಲ್ಲದೆ, ಬೆಂಗಳೂರಿಗೆ ಸಂಪರ್ಕದ ಕೊಂಡಿಯೂ ಆಗಿದೆ. ಹಾಗಾಗಿ ಬಸ್ ಡಿಪೊ ಬಳಿ ವೃತ್ತಕ್ಕೆ ಕೆಂಪೇಗೌಡ ವೃತ್ತ ಎಂದು ನಾಮಕರಣ ಮಾಡಿದರೆ ಕೆಂಪೇಗೌಡರ ಸಾಧನೆ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗುತ್ತದೆ. ಕೆಂಪೇಗೌಡರು ‌ಎಲ್ಲ ಜಾತಿ ಜನರಿಗೂ ಉಪಯೋಗವಾಗುವ ಕೆಲಸ ಮಾಡಿದ್ದಾರೆ. ಅವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದರು.

ಕರವೇ ತಾಲೂಕು ಅಧ್ಯಕ್ಷ ಶ್ರೀನಿವಾಸ್ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಆರಾಧ್ಯ, ಕಾರ್ಯದರ್ಶಿ ಭೀಮಲಿಂಗೇಗೌಡ, ಪುಟ್ಟಣ್ಣ, ಹೊಸಕೋಟೆ ರಾಮು, ರವಿ, ಗೋವಿಂದಣ್ಣ, ನಾಗರಾಜು (ವಾನರ ಯೋಧ), ಕಿರಣ್,ಮಹದೇವ್,ಗೋಪಾಲ್,ಬಸವರಾಜು,ದೇವಸಂದ್ರ,ಮಂಜು ಸೇರಿದಂತೆ ಇನ್ನಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT