ಎಲ್ಲ ತ್ಯಾಜ್ಯವು ಮೋರಿಗೆ ಹೋಗುತ್ತದೆ ಮತ್ತು ಕೆಟ್ಟ ವಾಸನೆ ಬರುತ್ತದೆ. ಬಸ್ ನಿಲ್ದಾಣ ಮತ್ತು ಆಟೊ ನಿಲ್ದಾಣ ಅಲ್ಲಿಯೇ ಇರುವುದರಿಂದ ಆಟೊ, ಬಸ್ಸಿಗೆ ಹೋಗಲು ಕಾಯುವ ಜನರು ಕಸದ ರಾಶಿಯ ಮುಂದೆ ನಿಲ್ಲಬೇಕಿದೆ. ಗಬ್ಬು ವಾಸನೆಯನ್ನು ಸಹಿಸಿಕೊಳ್ಳಬೇಕಿದೆ. ಅದಲ್ಲದೆ ನಾಯಿಗಳು ಕಸವನ್ನು ರಸ್ತೆಗೆಲ್ಲಾ ಎಳೆದಾಡಿ ಗಲೀಜು ಮಾಡುತ್ತವೆ. ನಗರಸಭೆಯವರು ಇದರ ವಿರುದ್ಧ ಕ್ರಮಕೈಗೊಂಡು ಕಸ ಹಾಕದಂತೆ ತಡೆಗಟ್ಟಬೇಕು.