ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಾತ್ಮದಿಂದ ಮಾನಸಿಕ ನೆಮ್ಮದಿ

ಅರ್ಚಕರಹಳ್ಳಿ ಆದಿಚುಂಚನಗಿರಿ ಶಾಖಾಮಠದ ಅನ್ನದಾನೇಶ್ವರ ಸ್ವಾಮೀಜಿ ಅಭಿಮತ
Last Updated 13 ನವೆಂಬರ್ 2019, 12:18 IST
ಅಕ್ಷರ ಗಾತ್ರ

ಚನ್ನಪಟ್ಟಣ: ಅಧ್ಯಾತ್ಮದಿಂದ ಮಾತ್ರ ಮನುಷ್ಯ ಮಾನಸಿಕ ನೆಮ್ಮದಿ ಹೊಂದಲು ಸಾಧ್ಯ ಎಂದು ಅರ್ಚಕರಹಳ್ಳಿ ಆದಿಚುಂಚನಗಿರಿ ಶಾಖಾಮಠದ ಅನ್ನದಾನೇಶ್ವರ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ತಗಚಗೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕೆಗ್ಗೆರೆ ಲಿಂಗೇಶ್ವರ ಸ್ವಾಮಿಯ ನೂತನ ರಥ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿ, ನಿತ್ಯದ ಯಾಂತ್ರಿಕ ಬದುಕಿನಲ್ಲಿ ಒಂದಿಷ್ಟು ಸಮಯವನ್ನು ಭಗವಂತನ ಸ್ಮರಣೆಗೆ ಮೀಸಲಿಡಬೇಕು. ಇದರಿಂದ ಮನಸ್ಸು ಪರಿಪಕ್ವಗೊಳ್ಳುತ್ತದೆ ಎಂದರು.

‘ಪ್ರತಿಯೊಬ್ಬರು ತಾತ್ವಿಕ ವಿಚಾರಗಳು, ಜಾತ್ಯತೀತ ಭಾವನೆ, ಸಾಮಾಜಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಮೂಲಕ ಸನ್ಮಾರ್ಗದಲ್ಲಿ ಸಾಗಬೇಕು. ಭಕ್ತಿಯಿಂದ ಧ್ಯಾನಿಸಿದಾಗ ಮಾತ್ರ ಭಗವಂತನ ಸಾಕ್ಷಾತ್ಕಾರ ದೊರೆಯಲು ಸಾಧ್ಯ. ಮಾನವ ತನ್ನಲ್ಲಿರುವ ಕೆಟ್ಟ ನಡವಳಿಕೆಗಳನ್ನು ಪರಾಮರ್ಶೆ ಮಾಡಿಕೊಂಡು ತಪ್ಪುಗಳನ್ನು ತಿದ್ದಿಕೊಳ್ಳುವ ಮನೋಭಾವ ರೂಢಿಸಿಕೊಳ್ಳಬೇಕು. ದೇವರ ಸನ್ನಿಧಿಯಲ್ಲಿ ನಮ್ಮಲ್ಲಿರುವ ದುರ್ಗುಣಗಳು ನಶಿಸಿ ಹೋಗುತ್ತವೆ’ ಎಂದರು.

ಬೊರೇಹೊಲ ಕ್ಷೇತ್ರದ ರಾಜು ಸ್ವಾಮೀಜಿ ಮಾತನಾಡಿ, ‘ನಮ್ಮ ಧಾರ್ಮಿಕ ಆಚರಣೆಗಳಲ್ಲಿ ರಥೋತ್ಸವಗಳು ಸಾಕಷ್ಟು ಪ್ರಾಮುಖ್ಯತೆ ಪಡೆದಿದೆ. ದೇವಾಲಯಗಳು ಮಾನಸಿಕ ನೆಮ್ಮದಿ ನೀಡುವ ಪವಿತ್ರ ತಾಣಗಳಾಗಿವೆ. ಮಾನವ ಎಷ್ಟೇ ಎತ್ತರಕ್ಕೆ ಬೆಳೆದರೂ ದೇವರ ಮುಂದೆ ತಲೆ ತಗ್ಗಿಸಿ ನಿಲ್ಲಬೇಕು’.ದೇವರ ಮುಂದೆ ಯಾವುದೇ ಬೇಧ ಭಾವವಿಲ್ಲ. ಮಾನವ ಮುಕ್ತಿ ಪಡೆಯಬೇಕು ಎಂದರೆ ಭಗವಂತನ ಅನುಗ್ರಹ ಅಗತ್ಯಎಂದರು.

ಗ್ರಾಮದ ಪ್ರಮುಖ ದೇವರಾದ ಕೆಗ್ಗೆರೆ ಲಿಂಗೇಶ್ವರಸ್ವಾಮಿಗೆ ದೇವರ ಭಕ್ತ ಸಮೂಹ ಹಾಗೂ ಗ್ರಾಮಸ್ಥರ ಸಹಕಾರದಿಂದ ₹25 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ ರಥವನ್ನು ಅನಾವರಣಗೊಳಿಸಲಾಯಿತು.

ಮೆಣಸಿಗನಹಳ್ಳಿಯ ಪ್ರಸನ್ನಗವಿ ಮಠದ ಅಂದಾನೇಶ್ವರ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೀಣಾಚಂದ್ರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಂಪುರ ಮಲುವೇಗೌಡ, ಮುಖಂಡರಾದ ಕುಕ್ಕೂರುದೊಡ್ಡಿ ಶಿವಣ್ಣ, ರಘುಕುಮಾರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT